ಕರಾವಳಿ

ಕರಾವಳಿ ಕಾವಲು ಪೊಲೀಸ್ ಘಟಕದ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ 5ನೇ ತಂಡದ ತರಬೇತಿ ಸಮಾರೋಪ

Views: 18

ಉಡುಪಿ: ಕರಾವಳಿ ಕಾವಲು ಪೊಲೀಸ್ ಘಟಕದ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ 5ನೇಯ ತಂಡದ ತರಬೇತಿಯ ಸಮಾರೋಪ ಸಮಾರಂಭವು ಸಿಎಸ್‌ಪಿ ಕೇಂದ್ರ ಕಛೇರಿ ಮಲ್ಪೆಯಲ್ಲಿ ನಡೆಯಿತು.

ಕರಾವಳಿ ಕಾವಲು ಪೊಲೀಸ್ ಘಟಕದ ಕೇಂದ್ರ ಕಛೇರಿಯ ಅಪರಾಧ ವಿಭಾಗದ ಪೊಲೀಸ್ ನಿರೀಕ್ಷಕರಾದ ಶ್ರೀ ಪ್ರಮೋದ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ರಾಯಪ್ಪ, ಪೌರಾಯುಕ್ತ, ಉಡುಪಿ ನಗರಸಭೆ, ಶ್ರೀಮತಿ ರೆನಿಟಾ ಡಿಸೋಜಾ, ಸಹಾಯಕ ನಿರ್ದೇಶಕರು, ಮೀನುಗಾರಿಕಾ ಇಲಾಖೆ, ಉಡುಪಿ ಹಾಗೂ ಶ್ರೀಮತಿ ಮಂಜುಳಾ ಗೌಡ ಪತ್ರಾಂಕಿತ ವ್ಯವಸ್ಥಾಪಕರು ಸಿಎಸ್‌ಪಿ ಕೇಂದ್ರ ಕಚೇರಿ ಇವರು ಬಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ಶ್ರೀ ರಾಯಪ್ಪ ಇವರು ಮಾತನಾಡಿ, ‘ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ದೈಹಿಕ ಕ್ಷಮತೆ ಅಗತ್ಯವಾಗಿದ್ದು ಪೊಲೀಸ್ ಸಿಬ್ಬಂದಿಯವರು ಕರ್ತವ್ಯದೊಂದಿಗೆ ತಮ್ಮ ದೈಹಿಕ ಕ್ಷಮತೆಯನ್ನು ಕಾಪಡಿಕೊಳ್ಳಬೇಕು. ತರಬೇತಿಯಲ್ಲಿ ಕಲಿತ ವಿಷಯಗಳನ್ನು ಇಲಾಖಾ ಕರ್ತವ್ಯದಲ್ಲಿ ಅಳವಡಿಸಿಕೊಳ್ಳುವುದರ ಮುಖಾಂತರ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡಬೇಕೆಂದರು’.

ಶ್ರೀಮತಿ ರೆನಿಟಾ ಡಿಸೋಜಾ ರವರು ಮಾತನಾಡಿ, ‘ಕರಾವಳಿ ಕಾವಲು ಪೊಲೀಸ್ ಮತ್ತು ಮೀನುಗಾರಿಕೆ ಇಲಾಖೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಮೀನುಗಾರಿಕೆ ಇಲಾಖೆಯ ಕಾರ್ಯವ್ಯಾಪ್ತಿಯ ಬಗ್ಗೆ ಮಾಹಿತಿ ನೀಡಿ ಸರಕಾರದಿಂದ ಮೀನುಗಾರರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಈ ಮಾಹಿತಿಯನ್ನು ಮೀನುಗಾರರಿಗೆ ಪ್ರಚುರ ಪಡಿಸಬೇಕೆಂದರು’ .

ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಪ್ರಮೋದ್ ಕುಮಾರ್ ರವರು ಮಾತನಾಡಿ, ‘ತರಬೇತಿಯ ಅಂಶಗಳನ್ನು ಕರ್ತವ್ಯದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಇತರ ಸಿಬ್ಬಂದಿಯವರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಬೇಕೆಂದು ತಿಳಿಸಿದರು’

ತರಬೇತಿಯಲ್ಲಿ ಸಿಎಸ್‌ಪಿ ಹೆಜಮಾಡಿ ಠಾಣೆಯ ಹೆಚ್‌ಸಿ ಶ್ರೀ ಕೃಷ್ಣ ಮರಕಾಲರವರು ಪ್ರಥಮ ಸ್ಥಾನ, ಸಿಎಸ್‌ಪಿ ಮಲ್ಪೆ ಠಾಣೆಯ ಪಿಸಿ ವಿಠಲ ಕೋಳಿ ದ್ವೀತಿಯ ಸ್ಥಾನ ಮತ್ತು ಸಿಎಸ್‌ಪಿ ಗಂಗೊಳ್ಳಿ ಠಾಣೆಯ ಪಿಸಿ ಶ್ರೀ ದಿನೇಶ್‌ರವರು ತೃತೀಯ ಸ್ಥಾನವನ್ನು ಪಡೆದಿದ್ದು, ಇವರನ್ನು ಸರ್ಟಿಪಿಕೆಟ್ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯ್ತು ಹಾಗೂ ತರಬೇತಿಯಲ್ಲಿ ಭಾಗವಹಿಸಿದ ಎಲ್ಲ ಸಿಬ್ಬಂದಿಯವರಿಗೂ ಸರ್ಟಿಪಿಕೆಟ್ ನೀಡಿ ಗೌರವಿಸಲಾಯ್ತು. ಬೆಂಗಳೂರಿನಲ್ಲಿ ನಡೆದ ಆಂತರಿಕ ಭದ್ರತಾ ವಿಭಾಗದ ಕ್ರೀಡಾಕೂಟದಲ್ಲಿ ಬಹುಮಾನ ಪಡೆದ ಸಿಎಸ್‌ಪಿ ಘಟಕದ 10 ಪೊಲೀಸ್ ಅಧಿಕಾರಿ/ಸಿಬ್ಬಂದಿಯವರಿಗೆ ಪ್ರಶಂಸಾಪತ್ರ ನೀಡಿ ಗೌರವಿಸಲಾಯಿತು. ಮತ್ತು ಸಮಾಜಸೇವಕರಾದ ಶ್ರೀ ಈಶ್ವರ ಮಲ್ಪೆ ಇವರನ್ನು ತರಬೇತಿ ಸಿಬ್ಬಂದಿಯವರ ಪರವಾಗಿ ಗೌರವಿಸಲಾಯಿತು.

ಸಿಎಸ್‌ಪಿ ಕೇಂದ್ರ ಕಛೇರಿಯ ಬೋಟ್ ವಿಭಾಗದ ಎಎಸ್‌ಐ ಶ್ರೀ ಭಾಸ್ಕರ ಶೆಟ್ಟಿಗಾರ್ ಇವರು ಸ್ವಾಗತಿಸಿದರು. ಕೇಂದ್ರ ಕಛೇರಿಯ ಎಮ್‌ಎಲ್‌ಇ ಶ್ರೀ ಆರ್‌ಬಿ ಬಿರಾದಾರರವರು ಪ್ರಸ್ತಾವಿಕ ಭಾಷಣ ಮಾಡಿದರು. ಶ್ರೀಮತಿ ಮುಕ್ತಾ ಬಾಯಿ, ಪೊಲೀಸ್ ಉಪನಿರೀಕ್ಷಕರು, ಸಿಎಸ್‌ಪಿ ಕೇಂದ್ರ ಕಛೇರಿ ಇವರು ವಂದಿಸಿದರು.  ಶ್ರೀಮತಿ ಸುಮಾ ಬಿಎಸ್, ಶಾಖಾಧೀಕ್ಷಕರು, ಸಿಎಸ್‌ಪಿ ಕೇಂದ್ರ ಕಛೇರಿ ಕಾರ್ಯಕ್ರಮ ನಿರೂಪಿಸಿದರು.

 

 

Related Articles

Back to top button