ರಾಜಕೀಯ

ವಿಪಕ್ಷ ನಾಯಕರ ಪ್ರತಿಭಟನೆ:78 ಪಾರ್ಲಿಮೆಂಟ್ ಸದಸ್ಯರ ಅಮಾನತು

Views: 0

ದೆಹಲಿ: ಕಳೆದ ವಾರ ಸಂಸತ್ತಿನಲ್ಲಿ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಸೇರಿದಂತೆ 78 ಸಂಸದರನ್ನು ಇಂದು ಸೋಮವಾರ ಅಮಾನತುಗೊಳಿಸಲಾಗಿದೆ.

ಭದ್ರತಾ ಲೋಪದ ಕುರಿತು ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಕ್ಕಾಗಿ ಹದಿನಾಲ್ಕು ಸಂಸದರನ್ನು ಕಳೆದ ವಾರ ಅಮಾನತುಗೊಳಿಸಲಾಗಿತ್ತು. ಹೀಗಾಗಿ ಈ ಅಧಿವೇಶನದಲ್ಲಿ ಅಮಾನತುಗೊಂಡಿರುವ ಸಂಸದರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ.

ಲೋಕಸಭೆಯಲ್ಲಿ 30 ಸಂಸದರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಅವರ ನಡವಳಿಕೆಯ ಬಗ್ಗೆ ವಿಶೇಷಾಧಿಕಾರ ಸಮಿತಿಯು ವರದಿ ಸಲ್ಲಿಸುವವರೆಗೆ ಮೂವರನ್ನು ಅಮಾನತುಗೊಳಿಸಲಾಗಿದೆ. ರಾಜ್ಯಸಭೆಗೆ ಸಂಬಂಧಿಸಿದಂತೆ, 35 ಸದಸ್ಯರನ್ನು ಉಳಿದ ಅವಧಿಗೆ ಮತ್ತು 11 ಸದಸ್ಯರನ್ನು ವಿಶೇಷಾಧಿಕಾರ ಸಮಿತಿಯು ವರದಿ ಮಾಡುವವರೆಗೆ ಅಮಾನತುಗೊಳಿಸಲಾಗಿದೆ. ಈ ಹಿಂದೆ, ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರೇನ್ ಅವರು ಉಲ್ಲಂಘನೆಯ ಬಗ್ಗೆ ಚರ್ಚೆಗೆ ಒತ್ತಾಯಿಸಿದ ನಂತರ ಅಮಾನತುಗೊಳಿಸಿದ್ದರು.

Related Articles

Back to top button
error: Content is protected !!