ರಾಜಕೀಯ

ಮಹಿಳೆಯೊಬ್ಬರನ್ನು ಬೆತ್ತಲಾಗಿಸಿದ ಪ್ರಕರಣ ಖಂಡಿಸಿ ಬಿಜೆಪಿ ನಾಳೆ ರಾಜ್ಯದಾದ್ಯಂತ ಬಿಜೆಪಿ ಪ್ರತಿಭಟನೆ 

Views: 0

ಬೆಂಗಳೂರು:ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲಾಗಿಸಿದ ಪ್ರಕರಣ ಖಂಡಿಸಿ ಬಿಜೆಪಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ಹಾಗೆಯೇ ಕೇಂದ್ರ ಸಚಿವೆ ನೇತೃತ್ವದ ತಂಡ ನಾಳೆ ಬೆಳಗಾವಿಗೆ ಭೇಟಿ ನೀಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಂಟಮೂರಿಯಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿರುವುದು ಖಂಡನಾರ್ಹ ಇದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಹೈಕೋರ್ಟ್ ಸಹ ಸರ್ಕಾರಕ್ಕೆ ಛಾಟಿ ಬೀಸಿದೆ. ಮುಖ್ಯಮಂತ್ರಿಗಳು ಸಂತ್ರಸ್ಥೆಯನ್ನು ಇದುವರೆಗೂ ಭೇಟಿ ಮಾಡಿಲ್ಲ. ಗೃಹ ಸಚಿವರು ಹೊರತುಪಡಿಸಿ ಬೇರೆ ಯಾರು ಭೇಟಿ ನೀಡಿಲ್ಲ ಎಂದು ಹೇಳಿದ ಅವರು, ರಾಜ್ಯಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಟೀಕಿಸಿದರು.

ಈ ಘಟನೆಯನ್ನು ಖಂಡಿಸಿ ನಾಳೆ ಬಿಜೆಪಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಲಿದೆ ಎಂದು ಅವರು ಹೇಳಿ, ಇಂದು ಮಧ್ಯಾಹ್ನ ಸಹ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಪಕ್ಷದ ಎಲ್ಲ ಶಾಸಕರು, ಎಲ್ಲ ಮುಖಂಡರು ಇದರಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.

ನಾಳೆ ಕೇಂದ್ರ ತಂಡ ಭೇಟಿ

ನಾಳೆ ಕೇಂದ್ರದ ಒಂದು ತಂಡ ಬೆಳಗಾವಿಗೆ ಬರಲಿದ್ದು, ಸಂತ್ರಸ್ಥೆಯನ್ನು ಭೇಟಿ ಮಾಡುವರು ಎಂದರು. ಕೇಂದ್ರದ ಸಚಿವೆ ಆಶಾಲಾಕ್ಡಾ ನೇತೃತ್ವದ ತಂಡದಲ್ಲಿ ಸಂಸದರಾದ ಅಪರಿಜಿತ್ ಸಾರಂಗಿ, ಸುನಿತಾದುಗ್ಗಲ್, ರಂಜಿತಾಕೊಹ್ಲಿ, ಲಾಕೆಟ್ ಚಟರ್ಜಿ ಇವರುಗಳಿದ್ದು, ಸಂತ್ರಸ್ಥೆಯನ್ನು ಭೇಟಿ ಮಾಡಲಿದ್ದಾರೆ ಎಂದು ಬಿ.ವೈ ವಿಜಯೇಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರುಗಳಾದ ಡಾ. ಚಂದ್ರುಲಮಾಣಿ, ಧೀರಜ್‌ಮುನಿರಾಜು ಉಪಸ್ಥಿತರಿದ್ದರು.

Related Articles

Back to top button
error: Content is protected !!