ಕರಾವಳಿ
ಕಾರ್ಕಳ :ಮನೆಯೊಂದರಲ್ಲಿ ಅನೈತಿಕ ವೇಶ್ಯಾವಾಟಿಕೆ ದಂಧೆ : ನಾಲ್ವರ ಬಂಧನ

Views: 17
ಕಾರ್ಕಳ : ತಾಲೂಕಿನ ಕಸಬಾ ಗ್ರಾಮದ ಭುವನೇಂದ್ರ ಕಾಲೇಜ್ ಬಳಿ ಇರುವ ದಾನೀಯ ಪಿರೇರಾ ಪಟ್ಲ ಹೌಸ್ ಎಂಬ ಮನೆಯಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿರುವ ಕುರಿತು ಕಾರ್ಕಳ ವೃತ್ತ ನಿರೀಕ್ಷಕರಾದ ಟಿ. ಡಿ ನಾಗರಾಜ್ ರವರ ನೇತ್ರತ್ವದಲ್ಲಿ ನಗರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸಂದೀಪ್ ಕುಮಾರ್ ಹಾಗೂ ಸುಬ್ರಹ್ಮಣ್ಯ ಹಾಗೂ ನಗರ ಠಾಣಾ ಸಿಬ್ಬಂದಿಗಳೊಂದಿಗೆ ಗುರುವಾರ ಸಂಜೆ ದಾಳಿ ನಡೆಯಿಸಿದ್ದಾರೆ.
ಖಚಿತ ಮಾಹಿತಿಯಂತೆ ಸಾರ್ವಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಿ ಅಕ್ರಮ ಲಾಭ ಪಡೆಯುತ್ತಿದ್ದ ಉಪೇಂದ್ರ ನಾಯಕ್ (ಯಾನೆ ಅವಿನಾಶ), ಪ್ರವೀಣ ಕುಮಾರ್ , ಗೋವರ್ಧನ, ಅಶೋಕ್ ಎಂಬವರನ್ನು ಕಾರ್ಕಳ ನಗರ ಪೊಲೀಸರು ವಶಕ್ಕೆ ಪಡೆದು ಒರ್ವ ಮಹಿಳೆಯನ್ನು ರಕ್ಷಿಸಿರುತ್ತಾರೆ.