ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಸಂಸತ್ ದಾಳಿ; ಹೇಗಿತ್ತು ಇವ್ರ ಪ್ಲಾನ್? ತನಿಖೆಯಲ್ಲಿ ಬಯಲು!

Views: 0
ಪಾರ್ಲಿಮೆಂಟ್‌ನಲ್ಲಿ ಭದ್ರತಾ ಲೋಪ ಎದುರಾಗಿತ್ತು.. ದಿಢೀರನೇ ಬಂದ ಕಿಡಿಗೇಡಿಗಳು ಲೋಕಸಭೆಗೆ ನುಗ್ಗಿ ಸ್ಮೋಕ್ ಬಾಂಬ್ ಸಿಡಿಸಿದ್ರು.. ಇದೀಗ ಭದ್ರತೆಗೆ ದಕ್ಕೆ ತಂದ ಆರೋಪಿಗಳಿಗೆ ತಕ್ಕಶಾಸ್ತಿ ಆಗುತ್ತಿದೆ. ಜೊತೆಗೆ ಆರೋಪಿಗಳು ದಾಳಿಗೆ ಮಾಡಿದ್ದ ಸಂಚಿನ ಕಹಾನಿ ತನಿಖೆಯಲ್ಲಿ ಬಯಲಾಗಿದೆ.
ಸಂಸತ್ ಮೇಲಿನ ಉಗ್ರರ ದಾಳಿಗೆ 22 ವರ್ಷ ತುಂಬಿದ ಸಂದರ್ಭದಲ್ಲೇ ಮತ್ತೆ ಆತಂಕದ ಛಾಯೆ ಆವರಿಸಿತ್ತು.. ಈ ಕೃತ್ಯ ಸಂಸತ್‌ನ ಭದ್ರತಾ ವೈಫಲ್ಯದ ಪ್ರಶ್ನೆ ಮರು ಹುಟ್ಟಿಗೆ ಕಾರಣವಾಗಿತ್ತು.. ಸಂಸದರಿಂದಲೇ ಪಾಸ್ ಪಡೆದವರು ಲೋಕಸಭೆಯಲ್ಲಿ ಲಡಾಯಿ ಎಬ್ಬಿಸಿ ನಡುಕ ಹುಟ್ಟಿಸಿದ್ರು.
ಸಂಸತ್ ಭವನದೊಳಗೆ ನುಗ್ಗಿ ಭದ್ರತೆಗೆ ದಕ್ಕೆ ತಂದಿದ್ದ 6 ಮಂದಿ ಕಿಡಿಗೇಡಿಗಳ ವಿರುದ್ಧ ಯುಎಪಿಎ ಌಕ್ಟ್ ಅಡಿ ಪ್ರಕರಣ ದಾಖಲಾಗಿದೆ.. ಅಲ್ಲದೇ ಈ ಪ್ರಕರಣ ದೆಹಲಿ ಪೊಲೀಸ್ ಸ್ಪೆಷಲ್ ಸೆಲ್‌ಗೆ ವರ್ಗಾವಣೆಯಾಗಿದೆ.. ಲೋಕಸಭೆಗೆ ನುಗ್ಗಿದ್ದ 6 ಮಂದಿ ವಿರುದ್ಧ ವಿವಿಧ ಕಾಯ್ದೆ ಮತ್ತು ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ. ಇದೀಗ ಸಂಸತ್‌ನಲ್ಲಿ ಕಲರ್ ಬಾಂಬ್ ಸ್ಫೋಟಿಸಿದ್ದವರ ಬದುಕು ಕಪ್ಪು ಕೋಣೆಯೊಳಗೆ ಕೊಳೆಯೋದು ಪಕ್ಕಾ ಆಗಿದೆ.
ಸ್ಮೋಕ್ ಬಾಂಬ್ ದಾಳಿ ನಡೆಸೋಕು ಮುನ್ನ ಆರೋಪಿಗಳು ಹಲವು ಬಾರಿ ಪಾರ್ಲಿಮೆಂಟ್‌ಗೆ ಭೇಟಿ ಕೊಟ್ಟಿರೋದು ಬೆಳಕಿಗೆ ಬಂದಿದೆ.. ಪಕ್ಕಾ ಪ್ಲಾನ್ ಮಾಡಿ ಅಟ್ಯಾಕ್ ಮಾಡಿದ್ದಾರೆ ಅನ್ನೋದು ತನಿಖೆಯಲ್ಲಿ ಬಯಲಾಗಿದೆ.
ಹಲವು ವರ್ಷಗಳಿಂದ ಆರು ಆರೋಪಿಗಳಿಗಿತ್ತು ಪರಿಚಯ ಭಗತ್ ಸಿಂಗ್ ಫ್ಯಾನ್ ಕ್ಲಬ್ ಗ್ರೂಪ್ನಲ್ಲಿ ಎಲ್ಲರೂ ಸಕ್ರಿಯರು ನಂತರ ಎಲ್ಲರೂ ಮೊಬೈಲ್ ನಂಬರ್ ಶೇರ್ ಮಾಡ್ಕೊಂಡಿದ್ರು 4 ವರ್ಷಗಳಿಂದ ಆರೋಪಿಗಳು ನಿರಂತರ ಸಂಪರ್ಕದಲ್ಲಿದ್ರು ಲೋಕಸಭೆಯಲ್ಲಿ ದಾಳಿಗೂ ಒಟ್ಟಿಗೆ ಯೋಜನೆ ರೂಪಿಸಿದ್ದಾರೆ. ಆರೋಪಿಗಳೂ ಹಲವು ಬಾರಿ ಸಂಸತ್ ಭವನಕ್ಕೆ ಭೇಟಿ ಇದಕ್ಕಾಗಿ ಮನೋರಂಜನ್ ಹಲವು ಬಾರಿ ದೆಹಲಿಗೆ ಬಂದಿದ್ದ ಕಳೆದ ಮಾರ್ಚ್ನಲ್ಲೂ ಅಧಿವೇಶನ ಸಂದರ್ಭದಲ್ಲಿ ಭೇಟಿ ಒಬ್ಬ ವ್ಯಕ್ತಿ ಮಾತ್ರ ಭೇಟಿ ಕೊಟ್ಟು, ಎಲ್ಲವನ್ನೂ ಪರಿಶೀಲಿಸಿದ್ದ ಒಳಗಡೆ ಯಾವ ರೀತಿಯಲ್ಲಿದೆ, ಎಲ್ಲಿಂದ ಎಂಟ್ರಿ ಕೊಡಬೇಕು ಭದ್ರತಾ ವ್ಯವಸ್ಥೆ, ಶೂಗಳನ್ನ ಪರಿಶೀಲಿಸದಿರುವುದು ಗಮನಿಸಿದ್ದ ಗುರುಗ್ರಾಮ್ನ ಮನೆಯಲ್ಲಿ ಕುಳಿತು ದಾಳಿ ರೂಪುರೇಷೆ ಸಿದ್ಧ ಎಲ್ಲವನ್ನೂ ಪಕ್ಕಾ ಟೈಮಿಂಗ್ ಪ್ರಕಾರ ಪ್ಲಾನ್ ಮಾಡಿ ಬಂದಿದ್ದರು
ಅಂದ್ಹಾಗೆ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿರೋ ಎಲ್ಲಾ ಆರೋಪಿಗಳು ನಿರುದ್ಯೋಗಿಗಳು. ಹೀಗಾಗಿ ನಿರುದ್ಯೋಗ ಸೇರಿದಂತೆ ಸಾಮಾಜಿಕ ವಿಷಯಗಳ ಕುರಿತು ಧ್ವನಿ ಎತ್ತಲು ನಿರ್ಧರಿಸಿದ್ರಂತೆ. ಹೀಗಾಗಿ ಸ್ಮೋಕ್ ಬಾಂಬ್ ಹಾಕುವ ಪ್ಲಾನ್ ರೂಪಿಸಿದ್ರಂತೆ.
ಹೇಗಿತ್ತು ದಾಳಿ ಪ್ಲಾನ್?
ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ದಾಳಿಯ ಎಲ್ಲಾ 6 ಆರೋಪಿಗಳಿಗೂ ಎಡಪಂಥೀಯ ಸಿದ್ಧಾಂತದ ಒಲವು ಇತ್ತು ಅನ್ನೋದು ಬೆಳಕಿಗೆ ಬಂದಿದೆ. ಅಲ್ಲದೇ ದಾಳಿಗೆ ಸ್ಮೋಕ್ ಬಾಂಬ್‌ಗಳನ್ನ ಆರೋಪಿ ಅಮೋಲ್ ಶಿಂಧೆ ಮಹಾರಾಷ್ಟ್ರದ ಲಾತೂರ್ನಲ್ಲಿ ಖರೀದಿಸಿದ್ದ ಎಂದು ತಿಳಿದುಬಂದಿದೆ. ಇನ್ನೂ ಲೋಕಸಭೆಯಲ್ಲಿ ಶ್ರೀ ಎಸೆಯದೇ ಅದನ್ನ ಕೈನಲ್ಲಿ ಹಿಡಿದುಕೊಳ್ಳಲು ನಿರ್ಧರಿಸಿದ್ದ. ಅಲ್ಲದೇ ಮತ್ತೊಬ್ಬ ಆರೋಪಿ ಸಾಗರ್ ಶರ್ಮಾ ಕೆಲ ಭಿತ್ತಿಪತ್ರ ತಂದಿದ್ದ, ಅವುಗಳನ್ನ ಎಸೆಯದಿರಲು ನಿರ್ಧರಿಸಿದ್ದ. ನಂತರ ಸ್ಮೋಕ್ ಬಾಂಬ್ ಇಟ್ಟುಕೊಳ್ಳಲು ಸಾಗರ್ ಶೂಗಳನ್ನ ತಂದಿದ್ದ ಅನ್ನೋದು ಬಹಿರಂಗವಾಗಿದೆ. ಹೀಗೆ ಶೂನಲ್ಲೇ ಸ್ಮೋಕ್ ಬಾಂಬ್ ಇಟ್ಟುಕೊಂಡು ಲೋಕಸಭೆಗೆ ಪ್ರವೇಶ ಮಾಡಿ ದಾಳಿ ಮಾಡಿರೋದು ತನಿಖೆಯಲ್ಲಿ ಬಯಲಾಗಿದೆ.
ಇನ್ನೂ ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ ದಾಳಿ ಪ್ರಕರಣದಲ್ಲಿ ಸಾಗರ್ ಶರ್ಮಾ, ಮನೋರಂಜನ್, ನೀಲಂ ಮತ್ತು ಅಮೋಲ್ ಶಿಂಧೆಯನ್ನ ಪೊಲೀಸರು ಬಂಧಿಸಿದ್ದಾರೆ.. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.. ಇದೀಗ ಪರಾರಿಯಾಗಿರೋ ಇಬ್ಬರು ಆರೋಪಿಗಳಿಗೂ ರಾಜ್ಯದ ಕರಾವಳಿ ಭಾಗದ ಬಿಜೆಪಿ ಸಂಸದರಿಂದ ಪಾಸ್ ಸಿಕ್ಕಿತ್ತಂತೆ.. ಆದ್ರೆ, ಸಮಯದ ಅಭಾವದಿಂದ ಇವರಿಬ್ಬರಿಗೆ ಸಂಸತ್ ಪ್ರವೇಶ ಸಾಧ್ಯವಾಗಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಪಾರ್ಲಿಮೆಂಟ್‌ನಲ್ಲಿ ಭದ್ರತಾ ಲೋಪ.. 8 ಮಂದಿ ಸಸ್ಪೆಂಡ್!
ಇನ್ನೂ ಲೋಕಸಭೆಯಲ್ಲಿ ಭದ್ರತಾ ಲೋಪದ ಆರೋಪದಲ್ಲಿ 8 ಮಂದಿಯನ್ನ ಅಮಾನತು ಮಾಡಲಾಗಿದೆ. 8 ಮಂದಿ ಸಿಬ್ಬಂದಿಯನ್ನ ಅಮಾನತು ಲೋಕಸಭೆಯ ಸೆಕ್ರೆಟರಿ ಆದೇಶ ಹೊರಡಿಸಿದ್ದಾರೆ.
ಒಟ್ಟಾರೆ, ಪ್ರಜಾಪ್ರಭುತ್ವದ ಮೇಲೆ ದಾಳಿಗೆ ಯತ್ನಿಸಿ 6 ಮಂದಿ ಘನಘೋರ ತಪ್ಪನ್ನ ಎಸಗಿದ್ದಾರೆ.. ತಮಗಿದ್ದ ಸಮಸ್ಯೆಗಳನ್ನ ಕಾನೂನಿನ ಮೂಲಕವೇ ಬಗೆಹರಿಸಿಕೊಳ್ಳೋದು ಬಿಟ್ಟು ಈ ರೀತಿಯ ಕೃತ್ಯಕ್ಕೆ ಕೈ ಹಾಕಿ ತಮ್ಮ ಭವಿಷ್ಯಕ್ಕೆ ತಾವೇ ಕೊಳ್ಳಿ ಇಟ್ಟುಕೊಂಡಿರೋದಂತೂ ಸತ್ಯ.






