ಕರಾವಳಿ
ಕಾಪು: ಉದ್ಯಾವರ ಸೇತುವೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ಯುವಕ ನಾಪತ್ತೆ: ನದಿಗೆ ಹಾರಿರುವ ಶಂಕೆ?

Views: 0
ಕಾಪು: ಉದ್ಯಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಸೇತುವೆಯ ಬದಿಯಲ್ಲಿ ಸ್ಕೂಟರ್, ಚಪ್ಪಲಿ ಬಿಟ್ಟು ಯುವಕನೋರ್ವ ನಾಪತ್ತೆಯಾಗಿರುವ ಘಟನೆ ಇಂದು ನಡೆದಿದೆ.
ನಾಪತ್ತೆಯಾದ ಯುವಕ ಉಡುಪಿಯ ಖಾಸಗಿ ಇಲೆಕ್ಟ್ರಾನಿಕ್ ಸಂಸ್ಥೆಯೊಂದರ ಉದ್ಯೋಗಿ ಎಂದು ತಿಳಿದುಬಂದಿದೆ. ಈತ ಸೇತುವೆಯ ಪುಟ್ ಪಾತ್ ಸ್ಕೂಟರ್ ನಿಲ್ಲಿಸಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.
ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯ ಮೀನುಗಾರರ ಸಹಾಯದಿಂದ ದೋಣಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ.