ಸಾಂಸ್ಕೃತಿಕ

ಇಹಲೋಕ ಯಾತ್ರೆ ಮುಗಿಸಿದ ಕನ್ನಡದ ಹಿರಿಯ ನಟಿ ಕರಾವಳಿಯ ಲೀಲಾವತಿ ಬಂಟರ ಸಂಪ್ರದಾಯದಂತೆ ಇಂದು ಅಂತ್ಯಕ್ರಿಯೆ 

Views: 0

ಬಾರದ ಲೋಕಕ್ಕೆ ತೆರಳಿರುವ ಕನ್ನಡದ ಕಲಾವತಿಗೆ ಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮರೆಯಾದ ಚಂದನವನದ ಹಿರಿಯ ನಟಿಗೆ ಅಭಿಮಾನಿಗಳು ಕಣ್ಣೀರ ವಿದಾಯ ಹೇಳಿದ್ದಾರೆ. ಅಗಲಿದ ರಂಗನಾಯಕಿಗೆ ಅಂತಿಮ ನಮನದ ಬಳಿಕ ಇಂದು ಅಂತ್ಯಸಂಸ್ಕಾರ ನೆರವೇರಲಿದೆ.

ವಯೋಸಹಜ ಕಾಯಿಲೆಯಿಂದ ಲೀಲಾವತಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಆರೋಗ್ಯದಲ್ಲಿ ಪದೇ ಪದೆ ಸಮಸ್ಯೆ ಕಾಣಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಲೀಲಾವತಿಯನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಏನೋ ಕಾಣಿಸಿತ್ತು. ನಿನ್ನೆ ಮಧ್ಯಾಹ್ನ ದಿಢೀರ್ ಬಿಪಿ ಲೋ ಆಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದಾರೆ.

1938ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಜನನ ಲೀಲಾವತಿ ಅವರ ಮೂಲ ಹೆಸರು ಲೀಲಾ ಕಿರಣ್ 6ನೇ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡರು. ಚಿಕ್ಕ ವಯಸ್ಸಲ್ಲೇ ನಾಟಕ, ರಂಗಭೂಮಿಯತ್ತ ಆಸಕ್ತಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಲೀಲಾವತಿ ನಟನೆ, 400ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯ, 50ಕ್ಕೂ ಹೆಚ್ಚು ವರ್ಷಗಳು ಚಿತ್ರರಂಗದಲ್ಲಿ ಸಕ್ರಿಯ ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಅಭಿನಯ ಮೈಸೂರಿನ ರಂಗಭೂಮಿಯಲ್ಲಿ ವೃತ್ತಿಜೀವನ ಆರಂಭ 1949ರಲ್ಲಿ ‘ನಾಗಕನ್ನಿಕ’ ಚಿತ್ರದಲ್ಲಿ ಮೊದಲ ಸಲ ನಟನೆ 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್

ಮಗಳು, ಸಖಿ, ನಾಯಕಿ, ಅಮ್ಮ, ಸಹೋದರಿ ಆಗಿ ನಟನೆ  ಗೆಜ್ಜೆ ಪೂಜೆ, ಮಹಾತ್ಯಾಗ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ

ತಾಯಿಯ ಅಗಲಿಕೆ ಸುದ್ದಿ ಕೇಳಿ ಕುಸಿದು ಬಿದ್ದ ವಿನೋದ್​

ಅಮ್ಮನೇ ಸರ್ವಸ್ವ ಆಗಿಸಿಕೊಂಡಿದ್ದ ವಿನೋದ್​​ ರಾಜ್​​, ತಾಯಿ ಇನ್ನಿಲ್ಲ ಅನ್ನೋದು ಗೊತ್ತಾಗ್ತಿದ್ದಂತೆ ಕುಸಿದು ಬಿದ್ರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿನೋದ್​ ರಾಜ್, ಇಂತಹ ತಾಯಿ ಮತ್ತೆ ಸಿಗೋಕೆ ಸಾಧ್ಯ ಇಲ್ಲ ಅಂತ ಕಣ್ಣೀರಿಟ್ಟರು.

ಮಧ್ಯಾಹ್ನ 2.30ಕ್ಕೆ ಸೋಲದೇವನಹಳ್ಳಿಯಲ್ಲಿ ಅಂತ್ಯಕ್ರಿಯೆ

ಬೆಳಗ್ಗೆ 5.30ರಿಂದ ಲೀಲಾವತಿ ಅಂತಿಮ ದರ್ಶನಕ್ಕೆ ನೆಲಮಂಗಲದ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳಿಕ ಬೆಳಗ್ಗೆ 10.30ಕ್ಕೆ ರವೀಂದ್ರ ಕಲಾಕ್ಷೇತ್ರಕ್ಕೆ ಮೃತದೇಹವನ್ನ ತೆಗೆದುಕೊಂಡು ಹೋಗಲಾಗುತ್ತೆ. ಆ ನಂತರ ಸೋಲದೇವನಹಳ್ಳಿಯ ವಿನೋದ್ ರಾಜ್​ ಅವರ ತೋಟದಲ್ಲಿ ಮಧ್ಯಾಹ್ನ ಅಲ್ಲಿಂದ 2.30 ಸುಮಾರಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಬಂಟರ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.

ಒಟ್ನಲ್ಲಿ 85 ವರ್ಷಗಳ ಲೀಲಾವತಿಯವರ ಸಾರ್ಥಕದ ಬದುಕಿನ ಪಯಣ ಕೊನೆಗೊಂಡು ಅಭಿಮಾನಿಗಳ ಕಣ್ಣಿರಿಗೆ ಕಾರಣವಾಗಿದೆ. ಚಂದನವನದಲ್ಲಿ ಚಂದದ ಪಾತ್ರಗಳಿಗೆ ಜೀವ ತುಂಬಿದ್ದ ಲೀಲಮ್ಮ ಆತ್ಮಕ್ಕೆ ಸದ್ಘತಿ ಸಿಗಲಿ ಅನ್ನೋದು ಅಭಿಮಾನಿಗಳ ಪ್ರಾರ್ಥನೆ.

Related Articles

Back to top button
error: Content is protected !!