ಕರಾವಳಿ
ಕುಂದಾಪುರ ಎಪಿಎಂ ಬಸ್ ಡ್ರೈವರ್ ‘ಅರವಿಂದಣ್ಣ’ ಹೃದಯಘಾತದಿಂದ ಸಾವು

Views: 2
ಕುಂದಾಪುರ :ಕಳೆದ 25 ವರ್ಷಗಳಿಂದ ಎಪಿಎಂ ಬಸ್ ಡ್ರೈವರ್ ಆಗಿದ್ದ ಅರವಿಂದ (50) ಅವರು ಇಂದು ಅಪರಾಹ್ನ ತೀರ್ಥಳ್ಳಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕುಂದಾಪುರದಲ್ಲಿ ಹೆಂಡತಿ ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಕಳೆದ ನಾಲ್ಕು ದಿನಗಳ ಹಿಂದೆ ಅವರು ಮನೆಯ ತೋಟದ ಕೆಲಸಕ್ಕೆಂದು ರಜೆ ಹಾಕಿ ಅವರ ಹುಟ್ಟೂರಾದ ತೀರ್ಥಳ್ಳಿಗೆ ಹೋಗಿದ್ದು, ಇಂದು ಅಪರಾಹ್ನ ತೋಟದ ಕೆಲಸ ಮಾಡುತ್ತಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ. ಕುಂದಾಪುರದ ಪರಿಸರದಲ್ಲಿ ಡ್ರೈವರ್ ‘ಅರವಿಂದಣ್ಣ’ ಎಂದೇ ಖ್ಯಾತರಾಗಿರುವ ಅವರು ಪ್ರಯಾಣೆಕತೆಯಿಂದ ಎಲ್ಲರೊಂದಿಗೆ ಬೆರೆಯುತ್ತಿದ್ದರು, ಕುಂದಾಪುರದಲ್ಲಿ ಅನೇಕ ಪ್ರಯಾಣಿಕರ ಅಪಾರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಪ್ರಾಮಾಣಿಕ ಡ್ರೈವರ್ ಅರವಿಂದ ಅವರನ್ನು ಕಳೆದುಕೊಂಡ ಅಭಿಮಾನಿಗಳು ಶೋಕ ವ್ಯಕ್ತಪಡಿಸಿ, ಕಂಬನಿ ಮಿಡಿದಿದ್ದಾರೆ.