ಸಾಂಸ್ಕೃತಿಕ

ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಡಿವೋರ್ಸ್​..? ಬ್ರೇಕಿಂಗ್ ಸುದ್ದಿಯ ಅಸಲಿಯೇನು..?

Views: 0

ಬಾಲಿವುಡ್​​ನ ಮೋಸ್ಟ್​ ಬ್ಯೂಟಿಫುಲ್​ ಕಪಲ್ಸ್​ ಎಂದರೆ ಅದು ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್. ಈ ಜೋಡಿಯನ್ನು ಕಂಡರೆ ಫ್ಯಾನ್ಸ್​ ಸಖತ್​​ ಖುಷಿ. ಕಾರಣ ಈ ಕಪಲ್ಸ್​ ಎಂದು ಯಾವುದೇ ಒಂದು ವಿವಾದಕ್ಕೂ ಸಿಲುಕಿಲ್ಲ. ಅನಗತ್ಯ ಸುದ್ದಿಯೂ ಆಗಿಲ್ಲ. ಹೀಗಿರುವಾಗ ಬಿ-ಟೌನ್​ನಲ್ಲೇ ಬ್ರೇಕಿಂಗ್​ ಸುದ್ದಿಯೊಂದು ಹರಿದಾಡುತ್ತಿದೆ.

ಹೌದು, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ವಿಚ್ಛೇದನದ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅದರಲ್ಲೂ ಅಭಿಷೇಕ್ ಬಚ್ಚನ್​ ಇತ್ತೀಚೆಗೆ ತಮ್ಮ ಮದುವೆ ರಿಂಗ್ ಧರಿಸುತ್ತಿಲ್ಲ. ಜತೆಗೆ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ವರದಿಯಾಗಿದೆ. ಈ ಸುದ್ದಿಯೇ ಡಿವೋರ್ಸ್​​ ಊಹಾಪೋಹಕ್ಕೆ ಕಾರಣವಾಗಿದೆ.

ಇನ್ನು, ಈ ಸುದ್ದಿ ಎಲ್ಲೆಡೆ ವೈರಲ್​ ಆಗಿದೆ. ಇಷ್ಟಾದ್ರೂ ಈ ಬಗ್ಗೆ ಬಚ್ಚನ್​ ಕುಟುಂಬದ ಯಾರೊಬ್ಬರೂ ತುಟಿ ಬಿಚ್ಚಿಲ್ಲ. ಹೀಗಾಗಿಯೇ ಬಚ್ಚನ್​​ ಮನೆಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಮಾತುಗಳು ಕೇಳಿ ಬಂದಿವೆ.

ಅಭಿಷೇಕ್ ಯಾವಾಗಲೂ ರಿಂಗ್​ ಧರಿಸುತ್ತಿದ್ದರು. ಆದರೆ, ಇತ್ತೀಚೆಗೆ ಯಾಕೋ ಅಭಿಷೇಕ್​​ ಈ ರಿಂಗ್​ ಹಾಕುತ್ತಿಲ್ಲ. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್‌ ಆಗುತ್ತಾರೆ ಎಂಬುದು ನಿಜ ಎಂದು ಸೋಷಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ಬರೆದುಕೊಂಡಿದ್ದಾರೆ.

Related Articles

Back to top button
error: Content is protected !!