ಕರಾವಳಿ

ಉಡುಪಿ:ಸ್ಥಿರಾಸ್ತಿ ಅವಿಭಾಜ್ಯ ಅಂಶದ ಪಾಲು ಕೋರಿ ರಾಜೇಶ್ವರಿ ಬಿ.ಶೆಟ್ಟಿ ವಿರುದ್ಧ ಸಲ್ಲಿಸಿದ್ದ ದಾವೆ ವಜಾ 

Views: 0

ಉಡುಪಿ: ಮೂಡ ನಿಡಂಬೂರು ಗ್ರಾಮದ ಕಟ್ಟಡ ಮತ್ತು ಸ್ಥಿರಾಸ್ತಿಯ ಅವಿಭಾಜ್ಯ ಅಂಶದ ಪಾಲು ಕೋರಿ ರಾಜೇಶ್ವರಿ ಬಿ.ಶೆಟ್ಟಿ ಹಾಗೂ ಇತರರ ವಿರುದ್ಧ ಸಲ್ಲಿಸಿದ ದಾವೆಯನ್ನು ಉಡುಪಿಯ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿದೆ.

ಮಣಿಪಾಲದ ಸೆಂಚುರಿ ಕಂಫ‌ರ್ಟ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣ ಶೆಣೈ ಮೃತ ಭಾಸ್ಕರ್‌ ಶೆಟ್ಟಿಗೆ ಸೇರಿದ ಶಂಕರ್‌ ವಿಟ್ಠಲ್‌ ಬಿಲ್ಡಿಂಗ್‌ ಮತ್ತು ಮೂಡನಿಡಂಬೂರು ಗ್ರಾಮದ 26 ಸೆಂಟ್ಸ್‌ ಸ್ಥಿರಾಸ್ತಿಯ ಅವಿಭಾಜ್ಯ ಅಂಶದ ಪಾಲು ಹಾಗೂ ತಡೆಯಾಜ್ಞೆ ಕೋರಿ 2013ರಲ್ಲಿ ರಾಜೇಶ್ವರಿ ಬಿ. ಶೆಟ್ಟಿ ಮೊದಲಾದವರ ವಿರುದ್ಧ ಉಡುಪಿಯ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದರು.

ಬಾಲಕೃಷ್ಣ ಶೆಣೈ, ಶಂಕರ್‌ ವಿಟ್ಠಲ್‌ ಮೋಟಾರ್ ಕಂಪೆನಿಯ ವ್ಯವಸ್ಥಾಪಕ ಪಾಲುದಾರ ಪ್ರಸಾದ್‌ ರಾವ್‌ ಅವರಿಂದ ಜಾಗ ಹಾಗೂ ಶಂಕರ್‌ ವಿಟ್ಠಲ್‌ ಬಿಲ್ಡಿಂಗ್‌ನಲ್ಲಿ ಶೇ. 60.95 ಅವಿಭಾಜ್ಯ ಅಂಶದ ಹಕ್ಕನ್ನು ಬೇರೆ ಬೇರೆ ನೋಂದಾಯಿತ ಕ್ರಯ ಸಾಧನದಂತೆ ಖರೀದಿ ಮಾಡಿರುವುದಾಗಿ ಹೇಳಿ ಪಾಲು ವ್ಯಾಜ್ಯವನ್ನು ಸಲ್ಲಿಸಿದ್ದರು. ಈ ಬಗ್ಗೆ ಭಾಸ್ಕರ್‌ ಶೆಟ್ಟಿ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ಕೂಡ ದಾಖಲಿಸಿದ್ದರು.

ದಾವೆಯನ್ನು ರುಜುವಾತುಪಡಿಸಲು 54 ದಾಖಲಾತಿಯನ್ನು ಸಲ್ಲಿಸಿದ್ದು, ನ್ಯಾಯಾಲಯವು 2013ರಿಂದ ಸುದೀರ್ಘ‌ ವಿಚಾರಣೆ ನಡೆಸಿತು.

ನ್ಯಾಯಾಧೀಶ ವಿಶ್ವೇಶ್‌ ಕುಮಾರ್‌ ಅವರು 2023ರ ನ.29ರಂದು ದಂಡ ಸಮೇತ ದಾವೆಯನ್ನು ವಜಾಗೊಳಿಸಿದರು.

ರಾಜೇಶ್ವರಿ ಬಿ. ಶೆಟ್ಟಿ ಪರ ವಿಜಯ ವಾಸು ಪೂಜಾರಿ ವಾದ ಮಂಡಿಸಿದ್ದರು. ನ್ಯಾಯವಾದಿಗಳಾದ ರಾಘವೇಂದ್ರ ಎಸ್‌. ಮತ್ತು ದೀಪಾ ಕೆ. ಶೆಟ್ಟಿ ಇದ್ದರು.

Related Articles

Back to top button