ಮಿಚಾಂಗ್ ಚಂಡಮಾರುತಕ್ಕೆ ತತ್ತರಿಸಿರುವ ಆಂಧ್ರಪ್ರದೇಶ, ಕರಾವಳಿ ಸೇರಿದಂತೆ 8 ಜಿಲ್ಲೆಗಳಲ್ಲಿ ಗಾಳಿ-ಮಳೆ, ರೆಡ್ ಅಲರ್ಟ್ ಘೋಷಣೆ!

Views: 58
ವಿಶಾಖಪಟ್ಟಣಂ: ಆಂಧ್ರ ಪ್ರದೇಶದಲ್ಲಿ ಮೈಚಾಂಗ್ ಚಂಡಮಾರುತದ ಆರ್ಭಟ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಚಂಡ ಮಾರುತದ ಅವಾಂತರ ಅಷ್ಟಿಷ್ಟಲ್ಲ. ಸೈಕ್ಲೋನ್ ಆರ್ಭಟ ಮತ್ತಷ್ಟು ಜೋರಾಗಿದೆ. ಮಳೆ ನೀರು ಜನ ವಸತಿ ಪ್ರದೇಶಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿದೆ. ದೊಡ್ಡ ದೊಡ್ಡ ಕಟ್ಟಡಗಳಿಗೆ ಜಲದಿಗ್ಬಂಧನ ಆಗಿದೆ. ತುಂಬಿ ಹರಿಯುತ್ತಿರೋ ಮಳೆ ನೀರಿನಲ್ಲೇ ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ.
ಇನ್ನು, ಆಂಧ್ರದ ಬಾಪಟ್ಲಾ ಪ್ರದೇಶಕ್ಕೆ ಚಂಡಮಾರುತ ಬಂದಪ್ಪಳಿಸಿದೆ. ನಲ್ಲೂರಿನ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಧರೆಗುರುಳಿದು ಅವಾಂತರ ಸೃಷ್ಟಿಸಿದೆ. ಬಾಪಟ್ಲದಲ್ಲಿ ಮತ್ತೊಂದು ಬೃಹತ್ ಗಾತ್ರದ ಮರ ವಾಹನಗಳ ಮೇಲೆ ಬಿದ್ದು ಬಿಟ್ಟಿದೆ. ದುಬಾರಿ ಬೆಲೆಯ ವಾಹನಗಳು ಮರ ಬಿದ್ದು ಜಖಂ ಆಗಿವೆ.
ತಿರುಪತಿ, ನೆಲ್ಲೂರು, ಪ್ರಕಾಶಂ, ಬಾಪಟ್ಲ, ಕೃಷ್ಣಾ, ಮತ್ತು ಪಶ್ಚಿಮ ಗೋದಾವರಿ, ಕೋನಸೀಮಾ ಮತ್ತು ಕಾಕಿನಾಡ ಸೇರಿ ಒಟ್ಟು ಎಂಟು ಜಿಲ್ಲೆಗಳಿಗೆ ಆಂಧ್ರ ಸರ್ಕಾರ ಸೈಕ್ಲೋನ್ ಎಚ್ಚರಿಕೆ ಕೊಟ್ಟಿತ್ತು
ಮಿಚಾಂಗ್ ಸೈಕ್ಲೋನ್ ಅಬ್ಬರದಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಜನರು ಸಮುದ್ರಕ್ಕೆ ಇಳಿಯದಂತೆ ಸರ್ಕಾರ ಸೂಚನೆ ಕೊಟ್ಟಿದೆ. ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ಭಾರೀ ಮಳೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಮಳೆಯಿಂದ ಇನ್ನು ಏನೇನ್ ಕಷ್ಟ ಅನುಭವಿಸಬೇಕೋ ಗೊತ್ತಿಲ್ಲ ಅಂತಿದ್ದಾರೆ ಜನ್ರು. ಜತೆಗೆ ಕರ್ನಾಟಕದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.