ಸಾಂಸ್ಕೃತಿಕ

ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ ಕೊಡಗಿನ ಸ್ವಪ್ನ ಸುಂದರಿ ʻಪವಿ ಪೂವಪ್ಪʼ ಬಿಕಿನಿ  ಪೋಟೊಸ್‌ ವೈರಲ್‌!

Views: 84

ಇದೀಗ ಪವಿ ಪೂವಪ್ಪ ಅವರ ಬೋಲ್ಡ್‌ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್‌ ಆಗುತ್ತಿದೆ. ಪವಿ ಪೂವಪ್ಪ ಅವರು ಮೂಲತಃ ಮಾಡೆಲ್ ಆಗಿದ್ದು, ಪಾನಿಕುಟ್ಟೀರ ಪವಿತ್ರ ಪೂವಪ್ಪ ಇವರ ಪೂರ್ತಿ ಹೆಸರು. ಕಳೆದ 10 ವರ್ಷಗಳಿಂದ ಮಾಡೆಲಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಮಿಸ್ ಕರ್ನಾಟಕ ಬೆಸ್ಟ್ ಬಾಡಿ ಎಂಬ ಟೈಟಲ್ ಕೂಡ ಪಡೆದಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಬಿಕಿನಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ 1 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ. ಖತ್ ಬೋಲ್ಡ್ ಆಗಿ ಅವರು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಪೋಸ್ಟ್‌ ಮಾಡುತ್ತಲೇ ಇರುತ್ತಾರೆ.

ಸದ್ಯ ಮನೆಯಲ್ಲಿ ಮೈಕಲ್‌ ಈ ವಾರ ಕ್ಯಾಪ್ಟನ್‌ ಆಗಿದ್ದಾರೆ. ಬಿಗ್‌ಬಾಸ್‌ ಕನ್ನಡ ಇತಿಹಾಸದಲ್ಲಿಯೇ, ಕ್ಯಾಪ್ಟನ್‌ಶಿಪ್‌ನಲ್ಲಿ ಇದ್ದು, ಎಲಿಮಿನೇಟ್‌ ಆದ ಮೊದಲ ಸ್ಪರ್ಧಿಯಾಗಿ ನೀತು ಹೊರಗೆ ಹೋಗಿದ್ದಾರೆ.

ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ ಕೊಟ್ಟಿರೋ ಪವಿ ಸಖತ್​ ಡ್ಯಾಶಿಂಗ್​ ಆಗಿ ದೊಡ್ಮನೆಗೆ ಕಾಲಿಟ್ಟರು. ಆದರೀಗ ಎಲ್ಲರ ಕಣ್ಣು ಅವರ ಮೇಲಿದೆ. ಕಾರಣ ಎಲ್ಲರಿಗೂ ಟಕ್ಕರ್​ ಕೊಡೋ ರೀತಿಯಲ್ಲಿ ಕಾಣ್ತಿದ್ದಾರೆ ಈ ಬಡೆಗಿ.

ಅಷ್ಟು ಮಾತ್ರವಲ್ಲದೆ, ಕ್ಯಾಪ್ಟನ್ಸಿ ಓಟಕ್ಕೆ ಆಟ ಆಡ್ತಿದ್ದಾರೆ. ಅಷ್ಟಕ್ಕೂ ಈ ಪವಿ ಯಾರು ಗೊತ್ತಾ? ಅವರ ಹಿನ್ನೆಲೆ ಏನು? ಈ ಸ್ಟೋರಿ ಓದಿ.

ಪವಿ ಅವರ ಪೂರ್ಣ ಹೆಸರು ಪಾನಿಕೂಟ್ಟಿರಾ ಪವಿತ್ರಾ ಪೂವಪ್ಪ. ಹುಟ್ಟಿಬೆಳದಿದ್ದೆಲ್ಲಾ ಬೆಂಗಳೂರಿನ ರಾಜಾಜಿನಗರದಲ್ಲಿ. ಮೂಲತಃ ಕೂರ್ಗ್​ನವರು. ಓದಿರೋದು ಬಿಕಾಂ. ಪಿಯುಸಿಯಲ್ಲಿದ್ದಾಗಲೇ ಡ್ಯಾನ್ಸ್​ ಕ್ಲಾಸ್​ಗೆ ಜಾಯಿನ್​ ಆದ ಪವಿಗೆ ಇಂಟ್ರಸ್ಟ್​ ಶುರುವಾಗಿದ್ದು ಮಾಡ್ಲಿಂಗ್​ನಲ್ಲಿ. ಮತ್ತೊಂದು ಇಂಟ್ರಸ್ಟಿಂಗ್​ ವಿಚಾರ ಅಂದ್ರೆ ಈ ನಟ ಹಾಗೂ ಮಾಜಿ ಬಿಗ್​ ಬಾಸ್​ ಸ್ಪರ್ಧಿ ದರ್ಶ್​ ಚಂದ್ರಪ್ಪ ಇವ್ರನ್ನ ಮಾಡ್ಲಿಂಗ್​ಗೆ ಪರಿಚಿಯಿಸಿದ್ದಂತೆ.

ಇನ್ನು ಪವಿ ಇದೇ ಮೊದಲ ಬಾರಿಗೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ತಿರೋದಲ್ಲ. ಈ ಹಿಂದೆ ತಮಿಳಿನ ಸನ್​ ಲೈಫ್​ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಮಾಡ್ಲಿಂಗ್​ಗೆ ಸಂಬಂಧಪಟ್ಟ ಸ್ವಪ್ನ ಸುಂದರಿ ರಿಯಾಲಿಟಿ ಶೋನಲ್ಲಿ ಭಾಗವಾಹಿಸಿದ್ರು. ಹೀಗಾಗಿ ಕನ್ನಡಕ್ಕಿಂತ ಹೆಚ್ಚು ತಮಿಳಿನಲ್ಲಿ ಫೇಮಸ್​ ಪವಿ.

ಇನ್ನು ಪವಿ ಮಾತು ಕಮ್ಮಿ ಕೆಲಸ ಜಾಸ್ತಿ ಅನ್ನೋ ಗುಣ. ಸೋಷಿಯಲ್​ ಆಗಿ ಇರೋದನ್ನ ಇಷ್ಟಪಡದ ವ್ಯಕ್ತಿತ್ವ. ಆದರೆ​ ಬಿಗ್​ ಬಾಸ್​ಗೆ ಬರ್ಬೇಕು ಅನ್ನೋ ಕನಸು ಕಂಡವರು. ಆ ಕನಸು ಸದ್ಯ ಸೀಸನ್​ 10ಕ್ಕೆ ನೆರವೇರಿದೆ. ಖದರ್​ ಆಗಿಯೇ ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ ಪಡೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಪವಿ ಪೂವಪ್ಪ ಬಿಗ್​ ಬಾಸ್​ ಮನೆಯಲ್ಲಿ ಆಟ ಶುರು ಮಾಡಿ ಜಸ್ಟ್​ ಎರಡು ದಿನ ಆಗಿದೆ. ಸಾಫ್ಟ್​ ಆಗಿಯೇ ಟಕ್ಕರ್​ ಕೊಡ್ತಾರಾ? ಇಲ್ಲ ಪ್ಲಾನ್ ಮಾಡಿ ದಾಳ ಬಿಡ್ತಾರಾ? ಎಲ್ಲವನ್ನು ಕಾದು ನೋಡಬೇಕಾಗಿದೆ.

 

Related Articles

Back to top button
error: Content is protected !!