ಕರಾವಳಿ
ನೇಜಾರು ಮನೆಗೆ ಹ್ಯುಮಾನಿಟಿ ಫೌಂಡೇಶನ್ ಭೇಟಿ ನೀಡಿ ಸಾಂತ್ವನ

Views: 0
ಉಡುಪಿ, ಇತ್ತೀಚೆಗೆ ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ನಡೆದ ಮನೆಗೆ ಹ್ಯುಮಾನಿಟಿ ಫೌಂಡೇಶನ್ ಮಂಗಳೂರು ಸಂಘಟನೆಯ ಸದಸ್ಯರು ಇಂದು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೂರು ಮುಹಮ್ಮದ್, ಅತೀ ಶೀಘ್ರವಾಗಿ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರ ಕ್ರಮ ಶ್ಲಾಘನೀಯ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂಬುದು ನನ್ನ ಆಗ್ರಹವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹ್ಯುಮಾನಿಟಿ ಫೌಂಡೇಶನ್ ಅಧ್ಯಕ್ಷ ನಾಸೀರ್ ಟಿ.ಎಸ್., ಕಾರ್ಯದರ್ಶಿ ಸೈಫುಲ್ಲಾ, ಕೋಶಾಧಿಕಾರಿ ಇಲ್ಯಾಸ್ ಚಾರ್ಮಾಡಿ, ಉಪಾಧ್ಯಕ್ಷ ಆಸೀಫ್ ಕುತ್ತಾರ್, ಸಂಚಾಲಕ ಮುಹಮ್ಮದ್ ಹನೀಫ್, ಝಮೀರ್, ಇಸ್ಮಾಯಿಲ್ ಕಾಟುಂಗರೆ, ಪತ್ರಕರ್ತ ಬಶೀರ್ ಕಲ್ಕಟ್ಟ, ಹಮೀದ್ ಉಡುಪಿ, ಸಜನ್ ಮೊದಲಾದವರು ಉಪಸ್ಥಿತರಿದ್ದರು.