ಕರಾವಳಿ
ಉಡುಪಿ:ಕಾಪು ಮೀನುಗಾರಿಕೆಗೆ ತೆರಳಿದ ವ್ಯಕ್ತಿ ನಾಪತ್ತೆ

Views: 0
ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿರುವುದಾಗಿ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರು ರಮೇಶ್ ವಿ. ಮೆಂಡನ್ ಎಂದು ತಿಳಿದು ಬಂದಿದೆ.
ಕಾಪು ಪಡು ಗ್ರಾಮದ ನಿವಾಸಿ ರಮೇಶ್ ವಿ. ಮೆಂಡನ್ ನ. 25 ರಂದು ಮೀನುಗಾರಿಕೆಕ್ಕೆಂದು ತೆರಳಿದ್ದವರು ಮರಳಿ ಬಾರದೇ ಕಾಣೆಯಾಗಿದ್ದಾರೆ ಎಂದು ಅವರ ಪುತ್ರ ಮಿಥುನ್ ಕುಮಾರ್ ಕಾಪು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾಪು ಪೊಲೀಸರು ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದಾರೆ.