ಕರಾವಳಿ ಚೆಲುವೆ ‘ಶ್ವೇತಾ ಡಿಸೋಜಾ’ ಫಸ್ಟ್ ಲುಕ್ ಗೆ ಸಿನಿಪ್ರಿಯರು ಫಿದಾ

Views: 0
ಮಾಸ್ ಮರಿ ಟೈಗರ್ ವಿನೋದ್ ಅವರಿಗೆ ಜೋಡಿಯಾಗಿ ಶ್ವೇತಾ ಡಿಸೋಜಾ ಕಾಂಬಿನೇಷನ್ನ ನೆಲ್ಸನ್ ಸಿನಿಮಾದ ಟೀಸರ್ ಧೂಳೆಬ್ಬಿಸಿದೆ.
ಕರಾವಳಿ ಚೆಲುವೆ ಶ್ವೇತಾ ಡಿಸೋಜಾ ನೆಲ್ಸನ್ ಬಳಗ ಸೇರಿಕೊಂಡಿದ್ದಾರೆ. ಹಿಂದಿ ಸಿನಿಮಾ ʻYʼ ಮೂಲಕ ಸಿನಿಮಾ ಜರ್ನಿ ಆರಂಭಿಸಿದ್ದ ಈ ಸುಂದರಿ ʻಖಾಸಗಿ ಪುಟಗಳುʼ ಹಾಗೂ ʻಹೆಜ್ಜಾರುʼ ಚಿತ್ರದಲ್ಲಿ ನಟಿಸಿದ್ದಾರೆ. ಹೆಜ್ಜಾರು ಸಿನಿಮಾಗಾಗಿ ಕಾಯ್ತಿರುವ ಶ್ವೇತಾ, ಈಗ ನೆಲ್ಸನ್ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
1960-90ರ ದಶಕದಲ್ಲಿ ಚಾಮರಾಜನಗರದಲ್ಲಿ ನಡೆಯುವ ನೈಜ ಘಟನೆಯಾಧಾರಿತ ಚಿತ್ರ ನೆಲ್ಸನ್. ಗ್ಯಾಂಗ್ ಸ್ಟರ್ ಕಥಾಹಂದರ ಹೊಂದಿದ್ದು, ವಿನೋದ್ ಪ್ರಭಾಕರ್ ಹಿಂದೆಂದೂ ಕಾಣದ ಅವತಾರದಲ್ಲಿ ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಸಿನಿಮಾದಲ್ಲಿ ನಿಮಗೆ ಕಾಣಸಿಗ್ತಾರೆ.
ಮಾಸ್ ಮರಿ ಟೈಗರ್ ವಿನೋದ್ಗೆ ಜೋಡಿಯಾಗಿ ಶ್ವೇತಾ ಡಿಸೋಜಾ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಶ್ವೇತಾ ಡಿಸೋಜಾ ಅವರ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದೆ.
ಸಿನಿಪ್ರಿಯರು ಈ ನಟಿಯ ಲುಕ್ಗೆ ಫಿದಾ ಆಗಿದ್ದಾರೆ. ಹಾಗಂತ ಇದು ಶ್ವೇತಾ ಡಿಸೋಜಾ ಅವರ ಮೊದಲ ಸಿನಿಮಾ ಅಲ್ಲ.
ಕರಾವಳಿಯ ಚೆಲುವೆ ಶ್ವೇತಾ ಡಿಸೋಜಾ ನೆಲ್ಸನ್ ಬಳಗ ಸೇರಿಕೊಳ್ಳುವುದಕ್ಕೂ ಮುನ್ನ ‘ಖಾಸಗಿ ಪುಟಗಳು’ ಹಾಗೂ ‘ಹೆಜ್ಜಾರು’ ಸಿನಿಮಾದಲ್ಲಿ ನಟಿಸಿದ್ದಾರೆ. ‘ಹೆಜ್ಜಾರು’ ಸಿನಿಮಾಗಾಗಿ ಕಾಯ್ತಿರುವ ಶ್ವೇತಾ, ಈಗ ನೆಲ್ಸನ್ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಈ ನಟಿಯ ಪೂರ್ತಿ ಹೆಸರು ಲಿಯೋನಿಲ್ಲಾ ಶ್ವೇತಾ ಡಿಸೋಜಾ. ಕನ್ನಡ ಚಿತ್ರರಂಗದ ಉದ್ಯೋನ್ಮುಖ ನಟಿ.
ಇವರು ಮೂಲತಃ ಮಂಗಳೂರಿನವರು. ಹಿಂದಿಯ ‘Y’ ಸಿನಿಮಾದ ಮೂಲಕ ಜರ್ನಿ ಆರಂಭಿಸಿದ್ದರು. ಅಲ್ಲಿಂದ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಶ್ವೇತಾ ಡಿಸೋಜಾ ‘ನೆಲ್ಸನ್’ ಡಿಗ್ಲಾಮರ್ ಲುಕ್ ನೋಡಿ ಜಡ್ಜ್ ಮಾಡುವಂತಿಲ್ಲ. ರಿಯಲ್ ಲೈಫ್ನಲ್ಲಿ ಶ್ವೇತಾ ಮಾಡರ್ನ್ ಹುಡುಗಿ ಇವರ ಇನ್ಸ್ಟಾಗ್ರಾಂಗೆ ಹೋದರೆ, ಶ್ವೇತಾ ಇಂದಿನ ಕಾಲದ ಮಾಡರ್ನ ಹುಡುಗಿ ಅನ್ನೋದು ಅರಿಗೆ ಬರುತ್ತೆ.
1960-90ರ ದಶಕದಲ್ಲಿ ಚಾಮರಾಜನಗರದಲ್ಲಿ ನಡೆಯುವ ನೈಜ ಘಟನೆಯಾಧಾರಿತ ಚಿತ್ರ ನೆಲ್ಸನ್. ಗ್ಯಾಂಗ್ಸ್ಟರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಹಿಂದೆಂದೂ ನಟಿಸಿಲ್ಲ. ಈ ಸಿನಿಮಾದಲ್ಲಿ ಶ್ವೇತಾ ಡಿಸೋಜಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ.