ಕರ್ನಾಟಕದ ಸೊಸೆ ಆಗಲು ಹೊರಟಿದ್ದೇನೆ ಪೂಜಾ ಗಾಂಧಿ ಮದುವೆಯ ಮಮತೆಯ ಕರೆಯೋಲೆ..

Views: 123
ಸ್ಯಾಂಡಲ್ವುಡ್ ನಟಿ ಪೂಜಾ ಗಾಂಧಿ ವಿವಾಹ ಬಂಧನಕ್ಕೆ ಸಜ್ಜಾಗಿದ್ದಾರೆ. ಪ್ರೀತಿಸಿದ್ದ ಯುವಕನ ಜೊತೆಗೆ ಹಸೆಮಣೆ ಏರುತ್ತಿದ್ದಾರೆ. ನಾಳೆ ಕುವೆಂಪುರವರ ಮಂತ್ರ ಮಾಂಗಲ್ಯದಂತೆ ನಟಿ ವಿವಾಹವಾಗುತ್ತಿದ್ದು, ಅಭಿಮಾನಿಗಳಿಗೆ ಮದುವೆಯ ಮಮತೆಯ ಕರೆಯೋಲೆಯನ್ನು ಕಳುಹಿಸಿದ್ದಾರೆ.

ಪೂಜಾಗಾಂಧಿ ಬೆಂಗಳೂರಿನಲ್ಲಿ ಲಾಜೆಸ್ಟಿಕ್ ಕಂಪನಿ ಮಾಲೀಕ ವಿಜಯ್ ಅವರನ್ನು ವಿವಾಹವಾಗ್ತಿದ್ದಾರೆ. ಪೂಜಾ ಗಾಂಧಿ- ವಿಜಯ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ನಾಳೆ ಯಲಹಂಕದಲ್ಲಿ ಮಂತ್ರ-ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾಗಲಿದ್ದಾರೆ. ಹೀಗಾಗಿ ತಮ್ಮ ಫ್ಯಾನ್ಸ್ಗೂ ಈ ಸುದ್ದಿ ತಲುಪಿಸಿರುವ ನಟಿ ಪೂಜಾ ಗಾಂಧಿ ಕರೆಯೋಲೆಯನ್ನ ಕಳುಹಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ನಟಿ ಕನ್ನಡದಲ್ಲೇ ಬರೆಯುವ ಮೂಲಕ ಕರೆಯೋಲೆಯನ್ನ ಹಂಚಿಕೊಂಡಿದ್ದಾರೆ.
ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿ ಪೂಜಾ ಗಾಂಧಿ, ಕನ್ನಡವನ್ನು ಕಲಿತು ಈಗಾಗಲೇ ಭೇಷ್ ಎನಿಸಿಕೊಂಡಿದ್ದಾರೆ. ಒಂದು ಟೈಮ್ನಲ್ಲಿ ಕನ್ನಡದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದ ಈ ನಟಿಮಣಿ ರಾಜಕಾರಣಕ್ಕೂ ಎಂಟ್ರಿ ಕೊಟ್ಟಿದ್ದರು. ಇದೀಗ ಕನ್ನಡಿಗನ ಕೈ ಹಿಡಿದು ಕರ್ನಾಟಕದ ಸೊಸೆ ಆಗಲು ಉತ್ತರ ಭಾರತದ ಬೆಡಗಿ ಪೂಜಾ ಗಾಂಧಿ ಮುಂದಾಗಿದ್ದಾರೆ.








