ಪಡ್ಡೆ ಹುಡುಗರ ನಿದ್ದೆಗೆಡಿಸಿದ ಪುತ್ತೂರಿನ ಬೆಡಗಿ ಜ್ಯೋತಿ ರೈ ಹಾಟ್ ಲುಕ್ ಪೋಟೋ ವೈರಲ್….!

Views: 0
ಸಿರಿಯಲ್ ಗಳಲ್ಲಿ ಸಾಂಪ್ರದಾಯಿಕ ಡ್ರೆಸ್ ಗಳಲ್ಲಿರುವ ನಟಿ ಜ್ಯೋತಿ ರೈ ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಹಾಟ್ ಪೋಟೋಗಳನ್ನು ಪೋಸ್ಟ್ ಮಾಡಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಈಗಾಗಲೇ ಈ ಪೋಟೋಗಳು ಸಖತ್ ವೈರಲ್ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾಗಿರುವ ಜ್ಯೋತಿ ರೈ ಕನ್ನಡದ ಸಿರಿಯಲ್ ಗಳಲ್ಲಿ ಮಿಂಚಿ ಹೆಸರು ಮಾಡಿದ್ದಾರೆ. ಈಗ ತೆಲುಗು ಸೀರಿಯಲ್, ಸಿನಿಮಾ ಹಾಗೂ ವೆಬ್ ಸಿರೀಸ್ಗಳಲ್ಲಿ ನಟಿಸೋದ್ರಲ್ಲಿ ಬಿಝಿಯಾಗಿದ್ದಾರೆ.

ಸದಾ ಸೀರಿಯಲ್ ಗಳಲ್ಲಿ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸುತ್ತಿದ್ದ ಜ್ಯೋತಿ ರೈ ಈಗಂತೂ ಮಾಡರ್ನ್ ಡ್ರೆಸ್ ನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಬ್ಲ್ಯಾಕ್ ಟ್ರಾನ್ಸ್ಪರೆಂಟ್ ಡ್ರೆಸ್ ಹಾಕ್ಕೊಂಡಿರೋ ಹಾಟ್ ಲುಕ್ ಫೋಟೋ ಶೇರ್ ಮಾಡಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿದೆ.

ಜ್ಯೋತಿ ರೈ ಲೇಸ್ ವರ್ಕ್ನ ಬ್ಲ್ಯಾಕ್ ಡ್ರೆಸ್ ಧರಿಸಿದ್ದು, ಮಿರರ್ ಮುಂದೆ ನಿಂತು ಸ್ಮೈಲ್ ಕೊಟ್ಟಿದ್ದಾರೆ. ಈ ಬಟ್ಟೆ ತುಂಬಾ ಟ್ರಾನ್ಸ್ಪರೆಂಟ್ ಆಗಿದೆ. ತಮ್ಮ ಬೋಲ್ಡ್ ಅವತಾರದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಶಾರ್ಟ್ ಡ್ರೆಸ್ ಆಗಿ ಸ್ಟೈಲಿಶ್ ವಾಕ್, ಹಾಟ್ ಫೋಸ್ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ.

ತಮ್ಮ ಮೇಕ್ ಓವರ್ ಜೊತೆಗೆ ತಮ್ಮ ಪರ್ಸನಲ್ ಲೈಫ್ನಿಂದಾನೂ ನಟಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಈಗಾಗಲೇ ಮದುವೆಯಾಗಿ ವಿಚ್ಚೇದನ ಪಡೆದಿದ್ದ ನಟಿ

ಇದೀಗ ತೆಲುಗು ನಿರ್ದೇಶಕ ಪೂರ್ವಜ್ ಜೊತೆ ಮತ್ತೆ ಮದುವೆಯಾಗಿದ್ದು, ಇಬ್ಬರು ಜೊತೆಯಾಗಿರುವ ಸಾಕಷ್ಟು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.

ತೆಲುಗಿನ ಯುವ ನಿರ್ದೇಶಕ ಸುಕು ಪುರ್ವಜ್ ಅವರ ಎ ಮಾಸ್ಟರ್ ಪೀಸ್ ಎಂಬ ಸಿನಿಮಾದಲ್ಲಿ ಜ್ಯೋತಿ ರೈ ನಟಿಸುತ್ತಿದ್ದು, ಇವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮದುವೆಯಾಗಿದ್ದಾರೆ ಎಂಬ ವದಂತಿಗಳು ಇವೆ. ಇವರಿಬ್ಬರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಕತ್ ವೈರಲ್ ಆಗುತ್ತಿವೆ.

ಸೀರಿಯಲ್ನಲ್ಲಿ ಅಮ್ಮ, ಅಕ್ಕನ ಪಾತ್ರ ಮಾಡುತ್ತಿದ್ದ ಜ್ಯೋತಿ ರೈ ಈಗ ಯಾವ ಹಿರೋಯಿನ್ಗೂ ಕಮ್ಮಿಯಿಲ್ಲ

ಜ್ಯೋತಿ ರೈ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಆಗಿದ್ದು, ಸಿಕ್ಕಾಪಟ್ಟೆ ಹಾಟ್ ಫೋಟೊ, ವಿಡಿಯೋ ಶೇರ್ ಮಾಡುತ್ತಾರೆ. ಕೆಲವೊಮ್ಮೆ ತಮ್ಮ ಫೋಟೋಗಳಿಗೆ ಕಾಮೆಂಟ್ ಬಾಕ್ಸ್ ಆಫ್ ಮಾಡಿಕೊಂಡಿರುತ್ತಾರೆ.

ಯುವ ನಟಿಯರಿಗೆ ಸವಾಲು ಹಾಕುವಂತೆ ಜ್ಯೋತಿ ರೈ ಸೌಂದರ್ಯ ಕಾಪಾಡಿಕೊಂಡು ಮೋಡಿ ಮಾಡುತ್ತಿದ್ದಾರೆ. ತಾವು ಇಷ್ಟು ಸುಂದರವಾಗಿ ಕಾಣಲು ತುಂಬಾ ಕಷ್ಟಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ತೆಲುಗಿನಲ್ಲಿ 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ.

ಬಂದೇ ಬರುತಾವ ಕಾಲ, ಕಿನ್ನರಿ, ಕಸ್ತೂರಿ ನಿವಾಸ, ಜೋಗುಳ, ತೆಲುಗಿನಲ್ಲಿ ‘ಗುಪ್ಪೆಡಂತ ಮನಸು’ ಸೇರಿ ಬಹುತೇಕ ಧಾರಾವಾಹಿಗಳಲ್ಲಿ ಜ್ಯೋತಿ ರೈ ಸೀರೆಯಲ್ಲಿ ಕಂಗೊಳಿಸಿದ್ದು ಹೆಚ್ಚು. ಹಲವರಿಗೆ ಅವರು ಸೀರೆಯಲ್ಲಿ ತುಂಬಾ ಚೆನ್ನಾಗಿ ಕಾಣುತ್ತಾರೆ ಎಂಬುದೇ ಖುಷಿ.








