ಕರಾವಳಿ

ಬೆಂಗಳೂರು ಕಂಬಳಕ್ಕೆ ಕುಂದಾಪುರ ಬೈಂದೂರಿನ ಕೋಣಗಳಿಗೆ ಸ್ವಾಗತ 

Views: 0

ಕುಂದಾಪುರ: ಬೆಂಗಳೂರಿನ  ಕಂಬಳೋತ್ಸವಕ್ಕೆ ತೆರಳುತ್ತಿರುವ ಹಲವಾರು ಪ್ರಶಸ್ತಿಯನ್ನು  ತನ್ನದಾಗಿಸಿಕೊಂಡ   ಈ ಬೈಂದೂರಿನ ಹೆಸರಾಂತ ದುರ್ಗಾಫ್ರೆಂಡ್ಸ್ ಸಮೃದ್ಧಿ ಪ್ರಸಿದ್ಧಿ ದೇವಾಡಿಗ ಕೋಣದ ಮಾಲೀಕರಾದ ಜನಾರ್ಧನ್ ದೇವಾಡಿಗ, ಸುಧೀರ್ ದೇವಾಡಿಗ ಇವರ ಕೋಣಗಳು ಇಂದು ಬೆಂಗಳೂರು ಕಂಬಳೋತ್ಸವಕ್ಕೆ ಭಾಗವಹಿಸಲು ಹೊರಟಿದ್ದಾರೆ..

ಬೆಂಗಳೂರು ಅರಮನೆ ಮೈದಾನದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜನೆ ಮಾಡಲಾಗಿದ್ದು, ಬೆಂಗಳೂರಿಗೆ ತೆರಳುತ್ತಿದ್ದ ಕಂಬಳದ ಕೋಣಗಳಿಗೆ ದಾರಿ ಮಧ್ಯೆ ಸ್ವಾಗತ ಕೋರಲಾಗಿದೆ.

ಬಹುನಿರೀಕ್ಷಿತ ಬೆಂಗಳೂರು ಕಂಬಳಕ್ಕೆ ಕ್ಷಣಗಣನೆ ಆರಂಭವಾಗಿದೆ. ಕರಾವಳಿ ಸಂಸ್ಕೃತಿಯ ಭಾಗವಾಗಿರುವ ಕಂಬಳ ಕ್ರೀಡೆಯನ್ನು ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಕಂಬಳವನ್ನು ನೇರವಾಗಿ ಕಣ್ತುಂಬಿಕೊಳ್ಳುವ ಆಸೆ ಇರುವವರು ನಾಳೆ ಹಾಗೂ ನಾಡಿದ್ದು (ನ.25, 26) ರಂದು ಬೆಂಗಳೂರಿನ ಅರಮನೆಯ ಮೈದಾನಕ್ಕೆ ಭೇಟಿ ನೀಡಬಹುದು.

ಕಂಬಳ ಕರಾವಳಿಯ ಗ್ರಾಮೀಣ ಕ್ರೀಡೆ. ನೂರಾರು ವರ್ಷಗಳ ಇತಿಹಾಸವಿರುವ ಕಂಬಳ ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ನಾಳೆ (ನ.25) ಮಹಾನಗರಿಯಲ್ಲಿ ಅದ್ಧೂರಿ ಕಂಬಳ ಮಹೋತ್ಸವ ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನ ಈಗಾಗಲೇ ಕಂಬಳಕ್ಕೆ ಸಕಲ ಸಜ್ಜಾಗಿದೆ.

ಈಗಾಗಲೇ ಕರಾವಳಿಯ ಬೈಂದೂರಿನಿಂದ ಕಾಸರಗೋಡಿನವರೆಗಿನ ಕೋಣಗಳು ಬೆಂಗಳೂರಿನ ಕಂಬಳಕ್ಕಾಗಿ ಸಿಲಿಕಾನ್‌ ಸಿಟಿ ತಲುಪಿವೆ. ʼಅಲೇ ಬುಡಿಯರ್‌ʼ ಎನ್ನುತ್ತಾ ಕೋಣಗಳನ್ನು ಅರಮನೆ ಮೈದಾನದ ಕೆಸರುಗದ್ದೆಯಲ್ಲಿ ಓಡಿಸಲು ಮಾಲೀಕರು ಸಿದ್ಧತೆ ನಡೆಸಿದ್ದಾರೆ.

ಪುತ್ತೂರಿನ ಶಾಸಕ ಅಶೋಕ್‌ ಕುಮಾರ್‌ ರೈ ಅವರ ಸಾರಥ್ಯದಲ್ಲಿ ಬೆಂಗಳೂರು ಕಂಬಳ ಬಹಳ ವಿಜೃಂಭಣೆಯಿಂದ ಜರುಗಲಿದೆ.

ಸುಮಾರು 300ಕ್ಕೂ ಹೆಚ್ಚು ಕೋಣಗಳು ಬೆಂಗಳೂರು ಕಂಬಳದಲ್ಲಿ ಭಾಗಿಯಾಗಲಿವೆ. ಬೆಂಗಳೂರು ಕಂಬಳದಲ್ಲಿ ಗೆದ್ದ ಕೋಣಗಳಿಗೆ ವಿಶೇಷ ಬಹುಮಾನ ಕೂಡ ಸಿಗಲಿದೆ.

ಅರಮನೆ ಮೈದಾನದಲ್ಲಿ ಕೋಣಗಳ ಓಟ ಮಾತ್ರವಲ್ಲ ಕರಾವಳಿಯ ವಿವಿಧ ಬಗೆಯ ಖಾದ್ಯಗಳನ್ನೂ ಸವಿಯಬಹುದು

ವಿವಿಧ ಭಾಷೆಯ ಸಿನಿತಾರೆಯರ ದಂಡು ಬೆಂಗಳೂರು ಕಂಬಳ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.

ಕರಾವಳಿ ಭಾಗದಲ್ಲಿ ಮಾತ್ರ ನಡೆಯುವ ಕಂಬಳದಲ್ಲಿ ಎರಡು ವಿಧಗಳಿವೆ. ಸಾಂಪ್ರದಾಯಿಕ ಕಂಬಳ ಹಾಗೂ ಜೋಡುಕೆರೆ ಕಂಬಳ ಎಂಬ ಎರಡು ವಿಧಗಳಿವೆ ಸಾಮಾನ್ಯವಾಗಿ ನವೆಂಬರ್‌ 15 ರಿಂದ ಆರಂಭವಾಗುವ ಕಂಬಳ ಜನವರಿವರೆಗೆ ನಡೆಯುತ್ತದೆ.

 

Related Articles

Back to top button