ಸಾಂಸ್ಕೃತಿಕ

ಬೃಂದಾವನ ಸೀರಿಯಲ್​ ನೋಡಲ್ಲ ಎಂದ ಪ್ರೇಕ್ಷಕರು.. ಕಾರಣವೇನು?

Views: 97

ಬೃಂದಾವನ ಕತೆ ಈಗ ಎಲ್ಲರ ಅಚ್ಚು ಮೆಚ್ಚಿನ ಸೀರಿಯಲ್ ಆಗಿದೆ. ರಾಮ್​ಜಿ ಅವರ ನಿರ್ದೇಶನದಲ್ಲಿ ಬರ್ತಿರೋ ಈ ಕತೆ ಬರೋಬ್ಬರಿ 36 ಸದಸ್ಯರನ್ನ ಒಳಗೊಂಡಿದೆ. ಈ ಧಾರಾವಾಹಿ ಪರದೆ ಮೇಲೆ ಲಗ್ಗೆ ಇಟ್ಟ ಎರಡೇ ವಾರಕ್ಕೆ ಒಂದಷ್ಟು ಬದಲಾವಣೆಗಳಾಗಿವೆ. ಅದರಲ್ಲಿ ಧಾರಾವಾಹಿ ನಾಯಕ ಚೇಂಜ್ ಆಗಿದ್ದಾರೆ.

ಈ ಮುಂಚೆ ಗಾಯಕ ಹಾಗೂ ಬಿಗ್​ಬಾಸ್​ ಖ್ಯಾತಿಯ ವಿಶ್ವನಾಥ್ ಹಾವೇರಿ ಅವರು ಬೃಂದಾವನ ಕಥಾ ನಾಯಕ ಆಕಾಶ್ ಪಾತ್ರವನ್ನ ನಿಭಾಯಿಸುತ್ತಿದ್ದರು. ಆದ್ರೆ, ಅವರ ವೈಯಕ್ತಿಕ ಕಾರಾಣಾಂತರಗಳಿಂದ ವಿಶ್ವನಾಥ್ ಸೀರಿಯಲ್​ನಿಂದ ಹೊರ ನಡೆದಿದ್ದಾರೆ. ಇನ್ನೂ ಆಕಾಶ್ ಪಾತ್ರವನ್ನ ನಿಭಾಯಿಸಲು ಸೋಷಿಯಲ್ ಮೀಡಿಯಾ ರೀಲ್ ಸ್ಟಾರ್ ಎಂದೇ ಫೇಮಸ್ ಆಗಿರೋ ವರುಣ್ ಆರಾಧ್ಯ ಮೊಟ್ಟ ಮೊದಲನೇ ಬಾರಿಗೆ ಕಿರುತೆರೆಗೆ ಈ ಧಾರಾವಾಹಿ ನಾಯಕನಾಗಿ ಕಾಲಿಟ್ಟಿದ್ದಾರೆ.

ಈ ಬದಲಾಣೆ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಯಾಗ್ತಿದೆ. ಸೋಷಿಯಲ್ ಮೀಡಿಯಾ ಬಳಕೆ ಮಾಡುವವರಿಗೆ ವರುಣ್ ಆರಾಧ್ಯ ಯಾರು ಅನ್ನೋದು ಚೆನ್ನಾಗಿ ಗೊತ್ತಿದೆ. ರೀಲ್ಸ್ ವಿಡಿಯೋಸ್​​ ಮೂಲಕ ವರುಣ್ ಸೋಷಿಯಲ್ ಮೀಡಿಯಾದ ಜನರ ಮನ್ನಣೆಗೆ ಪಾತ್ರರಾಗಿದ್ದಾರೆ. ಇನ್ನೂ ವರುಣ್ ಆರಾಧ್ಯ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಮಿಕ್ಸ್ ಒಪಿನಿಯನ್ ಇದೆ. ಅವರ ವೈಯಕ್ತಿಕ ಕಾರಣಗಳಾಗಿರಬಹುದು ಅಥವಾ ಬೇರೆ ಬೇರೆ ವಿಚಾರಗಳಲ್ಲಿ ಅಭಿಮಾನಿಗಳು ಎಷ್ಟಿದ್ದಾರೋ ಅಷ್ಟೇ ವರುಣ್ ಅವರನ್ನ ಇಷ್ಟ ಪಡದೇ ಇರುವವರು ಇದ್ದಾರೆ.

ಹಾಗಾಗಿನೇ ಬೃಂದಾವನ ಧಾರಾವಾಹಿಯ ನಾಯಕ ಬದಲಾದಾಗ ಅದರಲ್ಲಿಯೂ ಆಕಾಶ್ ಪಾತ್ರ ಬದಲಾದಾಗ ವೀಕ್ಷಕರು ಒಂದು ಕ್ಷಣ ಶಾಕ್ ಆಗಿದ್ದಾರೆ. ವರುಣ್ ಆರಾಧ್ಯ ಅವರ ಮೇಲೆ ಒಂದಷ್ಟು ಬೇರೆ ಬೇರೆ ವೈಯಕ್ತಿಕ ಅಭಿಪ್ರಾಯಗಳಿಂದ ವೀಕ್ಷಕರಿಗೆ ಈ ಬದಲಾವಣೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ. ಆಕಾಶ್ ಪಾತ್ರಕ್ಕೆ ಇವರು ಸ್ಯೂಟ್ ಆಗಲ್ಲ. ಆ ಪಾತ್ರ ನಿಭಾಯಿಸೋಕೆ ಸೂಕ್ತ ಅಲ್ಲಾ ಅಂತಾ ನೇರವಾಗಿ ಈ ಬದಲಾವಣೆ ಬಗ್ಗೆ ವೀಕ್ಷಕರು ತಮ್ಮ ಅಭಿಪ್ರಾಯವನ್ನ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸ್ತಾ ಇದ್ದಾರೆ. ಇನ್ನೂ ಈಗ ಮದುವೆ ಸಂಭ್ರಮ ನಡೆಯುತ್ತಿದ್ದು ವೀಕ್ಷಕರ ಚಿತ್ತ ಮದುವೆ ಹೇಗೆ ಆಗಲಿದೆ ಎಂಬುದರ ಕಡೆ ಇತ್ತು, ಆದ್ರೆ ಈ ನಾಯಕನ ಬದಲಾವಣೆ ಬೃಂದಾವನ ತಂಡಕ್ಕೆ ಎಷ್ಟು ಪ್ಲಸ್ ಅಥವಾ ಮೈನಸ್ ಆಗ್ಬೋದು ಅನ್ನೋದನ್ನ ಕಾದು ನೋಡಬೇಕಿದೆ.

Related Articles

Back to top button
error: Content is protected !!