ಕರಾವಳಿ

ಬಸ್ರೂರು ವಲಯ ಪದ್ಮಶಾಲಿ ಕ್ರಿಯಾ ವೇದಿಕೆಯ 22ನೇ ವಾರ್ಷಿಕ ಮಹಾಸಭೆ

Views: 45

ಕುಂದಾಪುರ:ಬಸ್ರೂರು ವಲಯ ಪದ್ಮಶಾಲಿ ಕ್ರಿಯಾ ವೇದಿಕೆ ಬಸ್ರೂರು ಇದರ 22ನೇ ವಾರ್ಷಿಕ ಮಹಾಸಭೆ ಇತ್ತೀಚಿಗೆ ಬಸ್ರೂರು ಶ್ರೀ ಶಾರದಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶೆಟ್ಟಿಗಾರ್ ಇಂಡಸ್ಟ್ರೀಸ್ ಮಾಲಕ ಬಾರ್ಕೂರು- ರಂಗನಕೆರೆ ಶ್ರೀ ಶ್ರೀನಿವಾಸ ಶೆಟ್ಟಿಗಾರ ಅವರು ಮಾತನಾಡಿ,

ಕಠಿಣ ಪರಿಶ್ರಮ ಮತ್ತು ಇಚ್ಛಾಶಕ್ತಿಯಿಂದ ಏನನ್ನೂ ಸಾಧಿಸಬಹುದು. ಆ ನಿಟ್ಟಿನಲ್ಲಿ ನಿಸ್ವಾರ್ಥ ಭಾವನೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಿ ಎಂದರು.

ಕೈಲ್ಕೆರೆ ಶ್ರೀ ಚಂದ್ರಶೇಖರ್ ಶೆಟ್ಟಿಗಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು,ನಂತರ ಅವರು ಮಾತನಾಡಿ, ಜೀವನ ನಮ್ಮ ಕೈಯಲ್ಲಿದೆ. ಅದನ್ನು ತಮಗೆ ಬೇಕಾದಂತೆ ರೂಪಿಸಿಕೊಳ್ಳಬಹುದು. ಸಮಾಜ ಸೇವಾ ಮನೋಭಾವದಿಂದ ಎಲ್ಲರ ಏಳಿಗೆ ಸಾಧಿಸಿದಾಗ ತಮ್ಮ ವ್ಯಕ್ತಿತ್ವ ಬೆಳೆದು ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಸಂಘದ ಸ್ಥಾಪಕ ಅಧ್ಯಕ್ಷ ಬಸ್ರೂರು ಶ್ರೀ ರಾಜೇಂದ್ರ ಶೆಟ್ಟಿಗಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜೀವನ ಅಮೂಲ್ಯವಾದದ್ದು ಈ ಕ್ಷಣಕ್ಕಾಗಿ ಬಾಳುವುದನ್ನು ರೂಢಿಸಿಕೊಂಡು ನಾವು ಎಷ್ಟು ಸುಖ ಸಂತೋಷದಿಂದ ಇದ್ದೇವೆ ಎಂಬುದನ್ನು ಬಿಟ್ಟು ನಮ್ಮಿಂದ ಎಷ್ಟು ಮಂದಿ ಸುಖ ಸಂತೋಷದಿಂದ ಇದ್ದಾರೆ ಎಂಬುದನ್ನು ಅರಿತು ಸಮಾಜ ಸೇವೆಯಲ್ಲಿ ಸಮರ್ಪಣಾ ಭಾವನೆಯಿಂದ ಅರ್ಪಿಸಿಕೊಳ್ಳಿ ಎಂದರು.

ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಅವರು ಮಾತನಾಡಿ, ನೈಕಾರಿಕೆ ಪದ್ಮಶಾಲಿ/ ಶೆಟ್ಟಿಗಾರ ಸಮಾಜ ಬಾಂಧವರ ಕುಲಕಸುಬು. ಪ್ರಸ್ತುತ ಸೀರೆಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಇದೆ.ಉಡುಪಿ ಕೈಮಗ್ಗದ ಸೀರೆಗಳಿಗೆ ದೇಶದ ಮೂಲೆ ಮೂಲೆಗಳಿಂದ ಪೂರೈಸಲಾಗದಷ್ಟು ಬೇಡಿಕೆ ಇದೆ ಉಡುಪಿ ಪದ್ಮಶಾಲಿ ನೇಕರ ಪ್ರತಿಷ್ಠಾನವು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಉಡುಪಿ ಕೈಮಗ್ಗದ ಸೀರೆಗಳನ್ನು ಉತ್ಪಾದಿಸಲು ಶ್ರಮಿಸುತ್ತಿದೆ ಇದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಅತ್ಯಗತ್ಯ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಡಿಪ್ಕೋ ಸಹಕಾರಿ ಸಂಘ ಮಂಗಳೂರು ಇದರ ಸ್ಥಾಪಕ ನಿರ್ದೇಶಕರಾದ ಶ್ರೀ ವಿಶ್ವನಾಥ ಶೆಟ್ಟಿಗಾರ ದೇರೆಬೈಲು

ಹೋಟೆಲ್ ಉದ್ಯಮಿ ಶ್ರೀ ಚಂದ್ರಶೇಖರ್ ಶೆಟ್ಟಿಗಾರ ಸುಣ್ಣಾರಿ, ಜಿಲ್ಲಾ ವಿದ್ಯಾವರ್ಧಕ ಸಂಘದ ಮಾಜಿ ಜೊತೆ ಕಾರ್ಯದರ್ಶಿ ಶ್ರೀ ದೀಪಕ್ ಕುಮಾರ್ ಶೆಟ್ಟಿಗಾರ್ ಕಿನ್ನಿಮುಲ್ಕಿ,  ಪದ್ಮಶಾಲಿ  ನೇಕಾರ ಪ್ರತಿಷ್ಠಾನದ ಯುವ ವಿಭಾಗದ ಅಧ್ಯಕ್ಷ ,ಬಸ್ರೂರು ಕ್ರಿಯಾ ವೇದಿಕೆಯ ಗೌರವಾಧ್ಯಕ್ಷ  ಗೋಪಾಲಕೃಷ್ಣ ಶೆಟ್ಟಿಗಾರ್,  ಬಸ್ರೂರು ಸಂಘದ ಕಾರ್ಯದರ್ಶಿ ಶ್ರೀ ಸುಬ್ಬಯ್ಯಶೆಟ್ಟಿಗಾರ್ ಸಭೆಯಲ್ಲಿ ಇದ್ದರು.

ಸಂಘದ ಸ್ಥಾಪಕ ಅಧ್ಯಕ್ಷ ಶ್ರೀ ರಾಜೇಂದ್ರ ಶೆಟ್ಟಿಗಾರ ಬಸ್ರೂರು ಇವರ ವೈಯಕ್ತಿಕ ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

ಕು.ಹಂಸಿನಿ ಪ್ರಾರ್ಥಿಸಿದರು. ಶ್ರೀಮತಿ ಶೋಭಾ ಶೆಟ್ಟಿಗಾರ್ ಜಪ್ತಿ ಸ್ವಾಗತಿಸಿದರು, ಕಾರ್ಯದರ್ಶಿ ಶ್ರೀ ಸುಬ್ಬಯ್ಯ ಶೆಟ್ಟಿಗಾರ್ ವರದಿ ವಾಚಿಸಿದರು. ಕೋಶಾಧಿಕಾರಿ ಶ್ರೀ ಆನಂದ ಶೆಟ್ಟಿಗಾರ್ ಆಯ-ವ್ಯಯ ಮಂಡಿಸಿದರು. ಶ್ರೀ ವಿಜಯ ಶೆಟ್ಟಿಗಾರ್ ಸಂದೇಶ ವಾಚನ ಮಾಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ,ವಿದ್ಯಾರ್ಥಿ ಪುರಸ್ಕಾರ ಮತ್ತು 5000ಕ್ಕೂ ಹೆಚ್ಚು ವಿದ್ಯಾನಿಧಿ ನೀಡಿದ ದಾನಿಗಳಿಗೆ ಹಾಗೂ ಪರಿಹಾರ ನಿಧಿ ಸಂಗ್ರಹಿಸಿದವರಿಗೆ ಸಭೆಯಲ್ಲಿ ಗೌರವಿಸಲಾಯಿತು.

ಅಂಗನವಾಡಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ನೀಡಲಾಯಿತು.ಶ್ರೀಮತಿ ಶ್ರೀದೇವಿ ಸತ್ಯನಾರಾಯಣ ಶೆಟ್ಟಿಗಾರ್ ಬಸ್ರೂರು ಅವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಶೋಭಾ ಶೆಟ್ಟಿಗಾರ್, ಉಳ್ಳೂರು ವಂದಿಸಿದರು.

 

Related Articles

Back to top button