ಸಾಂಸ್ಕೃತಿಕ

ಕಾಂತಾರ -2 ಸಿನಿಮಾದ ಹೊಸ ಅಪ್ಡೇಟ್​ ಅದೇನು ಗೊತ್ತಾ?

Views: 0

ರಿಷಬ್ ಶೆಟ್ಟಿ‌ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ದೊಡ್ಡ ಹಿಟ್​ ನೀಡಿತ್ತು. ಈ ಸಕ್ಸಸ್​ ಬಳಿ ಕಾಂತಾರ 2 ಸಿನಿಮಾ ಮಾಡಲು ರಿಷಬ್​ ಶೆಟ್ಟಿ ಮುಂದಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದಕ್ಕಾಗಿ ಚಿತ್ರತಂಡ ಹುಟ್ಟೂರಿನಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೀಗ ಅದಕ್ಕೂ ಮುನ್ನ ಕಾಂತಾರ -2 ಸಿನಿಮಾದ ಹೊಸ ಅಪ್ಡೇಟ್​ ಸಿಕ್ಕಿದೆ. ಅದೇನು ಗೊತ್ತಾ?

ಕಾಂತಾರ -2 ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಇದ್ದು, ಏಳು ಭಾಷೆಯಲ್ಲಿ ಬಿಡುಗಡೆ ಯಾಗಲಿದೆಯಂತೆ. ಕನ್ನಡ ಸೇರಿ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಳಿ ಹಾಗೂ ಇಂಗ್ಲೀಷ್​​ನಲ್ಲೂ ರಿಲೀಸ್ ಮಾಡುವ ನಿರ್ಧಾರವಾಗಿದೆ ಎನ್ನಲಾಗಿದೆ. ಸದ್ಯ ಪ್ರಿಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಆರಂಭವಾಗಲಿದೆ.

ಇತ್ತೀಚೆಗೆ ಕಾಂತಾರ-2 ಸಿನಿಮಾಕ್ಕಾಗಿ ರಿಷಬ್​ ಅವರ ಹೊಸ ಅವತಾರ ವೈರಲ್​ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಪ್ರಗತಿ ಮತ್ತು ಮಕ್ಕಳೊಂದಿಗೆ ಫೋಟೋಶೂಟ್​ ಮಾಡಿಸಿಕೊಳ್ಳುವ ಮೂಲಕ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕಾಂತಾರ ಸಿನಿಮಾದ ಕುರಿತು ಹೊಸ ಅಪ್ಡೇಟ್​ ಹೊರಬಿದ್ದಿದೆ. 7 ಭಾಷೆಯಲ್ಲಿ ಸಿನಿಮಾ ಬಿಡುಗೆಯಾಹಲಿದೆ ಎಂದು ಹೇಳಲಾಗುತ್ತಿದೆ.

ಫ್ಯಾನ್ಸ್​ಗಂತೂ ಈ ವಿಚಾರ ಸಂತಸಕ್ಕೆ ಕಾರಭಣವಾಗಿದ್ದು, ಕಾಂತಾರ -2 ಯಾವಾಗ ಬರಲಿದೆ ಎಂದು ಕಾದು ಕುಳಿತ್ತಿದ್ದಾರೆ.

Related Articles

Back to top button
error: Content is protected !!