ಕುಂದಾಪುರ ಕಸಾಪದಿಂದ ಹಿರಿಯರೆಡೆಗೆ ಸಾಹಿತ್ಯದ ನಡಿಗೆ:ಕೆ.ಕೆ. ಕಾಳಾವರ್ಕರ್ ಅವರಿಗೆ ಸನ್ಮಾನ

Views: 1
ಕುಂದಾಪುರ: ಕಸಾಪ ತಾಲೂಕು ಘಟಕದಿಂದ ‘ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮ ಕಾಳಾವರದಲ್ಲಿ ನಡೆಯಿತು.ಹಿರಿಯ ಸಾಹಿತಿ ಕೆ.ಕೆ.ಕಾಳಾವರ್ಕರ್ ಅವರನ್ನು ಅವರ ಸ್ವಗೃಹ ಕಾಳಾವರದಲ್ಲಿ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ಘಟಕ ಇವರ “ಹಿರಿಯರಡೆಗೆ ಸಾಹಿತ್ಯದ ನಡಿಗೆ” ಕಾರ್ಯಕ್ರಮದಡಿ ನ19 ರಂದು ಹಿರಿಯ ಸಾಹಿತಿ, ನಾಟಕಕಾರ, ನಟ -ನಿರ್ದೇಶಕ, ಯಕ್ಷಗಾನ ಪ್ರಸಂಗ ಕರ್ತ, ಹರಿದಾಸ್ ಕೆ.ಕೆ.ಕಾಳಾವರ್ಕರ್ ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾದ ಡಾ. ಉಮೇಶ್ ಪುತ್ರನ್ ವಹಿಸಿದ್ದರು.
ಗೌರವ ಕಾರ್ಯದರ್ಶಿ ದಿನಕರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು 64 -65 ನೇ ದಶಕದಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಯುವಕನೊಬ್ಬ ಬಿ.ಕಾಂ ಪದವಿ ಪಡೆದಿರುವುದೇ ಮಹತ್ತರ ಸಾಧನೆ ಎಂದರು.
ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ ಕಾಳಾವರ್ಕರ್ ರಂತಹ ಸಾಧಕರನ್ನು ಸನ್ಮಾನಿಸುವುದರಿಂದ ಅವರ ಘನತೆ ಹೆಚ್ಚುವುದಕ್ಕಿಂತ ನಮ್ಮ ಪರಿಷತ್ತಿನ ಘನತೆ ಹೆಚ್ಚುತ್ತದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ರಘುವೀರ್ ಕಾಳಾವರ ಅವರು ಕೆ.ಕೆ.ಕಾಳಾವರ್ಕರ್ ಅವರನ್ನು ಪರಿಚಯಿಸಿದರು. ಬಸ್ರೂರು ನಿವೇದಿತಾ ಪ್ರೌಢ ಶಾಲಾ ಮುಖ್ಯಶಿಕ್ಷಕ ಸುಬ್ಬಣ್ಣ ಕೋಣಿ ಪ್ರಾರ್ಥಿಸಿ, ಸ್ವಾಗತಿಸಿದರು. ಕ.ಸಾ.ಪ. ಕುಂದಾಪುರ ತಾಲೂಕು ಘಟಕದ ಖಜಾಂಚಿ ಕೆ.ಎಸ್. ಮಂಜುನಾಥ್ ಸನ್ಮಾನ ಪತ್ರ ವಾಚಿಸಿದರು.
ಸಾಮಾಜಿಕ ಕಾರ್ಯಕರ್ತ ಮೋಹನ್ ಚಂದ್ರ ಕಾಳಾವರ್ಕರ್ ಸೇರಿದಂತೆ ಕಾಳಾವರ್ಕಾರ್ ರವರ ಬಂಧುಗಳು, ಅಭಿಮಾನಿಗಳು ಉಪಸ್ಥಿತರಿದ್ದರು.







