60 ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ವೃದ್ಧಾಪ್ಯದಲ್ಲಿ ಮದುವೆ.. ಸಖತ್ ವೈರಲ್..!!!

Views: 73
ಪ್ರೀತಿಗೆ ಮತ್ತು ಮದುವೆಗೆ ವಯಸ್ಸಿನ ಮಿತಿ ಇಲ್ಲ ಎಂಬಂತೆ 60 ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ವೃದ್ಧರ ಜೋಡಿ ಅಂತೂ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಅಪರೂಪದ ಘಟನೆ ಮಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ.80 ವರ್ಷದ ಸಮೀದಾ ನಾಯ್ಕ, 70 ವರ್ಷದ ಗೋಗುಲೋತ್ ಲಾಲಿ ಎಂಬ ತನ್ನ ಪ್ರೇಯಸಿ ಗೆಳತಿಯನ್ನು ಮದುವೆಯಾಗಿದ್ದಾರೆ.
ಅವರಿಬ್ಬರು ಒಟ್ಟಿಗೆ ಜೀವನ ನಡೆಸುತ್ತಾ ಇದ್ದರು ಆದರೆ, ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿರಲಿಲ್ಲ ಇವರಿಬ್ಬರಿಗೂ ಮಕ್ಕಳು ಕೂಡಾ ಇದ್ದಾರೆ. ಇಬ್ಬರೂ ಪ್ರೀತಿಸಿ ಹಿಂದಿನ ಕಾಲದಲ್ಲಿ ಆಗುವ ಹಾಗೆ ಗಂಧರ್ವ ವಿವಾಹವಾಗಿದ್ದಾರೆ. ಕೇವಲ ಹಾರ ಮಾತ್ರ ಬದಲಾಯಿಸಿಕೊಂಡಿದ್ದಾರೆ. ಹಿಂದಿನ ಕಾಲದಲ್ಲಿ ತಾಳಿ ಕಟ್ಟುವ ಸಂಪ್ರದಾಯ ಇರಲಿಲ್ಲ. ಹಾಗಾಗಿ ಹಾರ ಮಾತ್ರ ಬದಲಾಯಿಸಿಕೊಂಡು ಸಂಸಾರ ನಡೆಸಿದ್ದಾರೆ. ಇವರಿಗೆ ನಾಲ್ಕು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗಳಿದ್ದಾಳೆ.
ಮದುವೆಯಾಗದೆ ಒಟ್ಟಿಗೆ ಜೀವನ ನಡೆಸುತ್ತಿದ್ದ ಇವರಿಬ್ಬರಿಗೆ ಮಕ್ಕಳು ಮೊಮ್ಮಕ್ಕಳು ಸೇರಿ ಮದುವೆ ಮಾಡಿಸಿದ್ದಾರೆ. ತಾಯಿಯ ಕೊರಳಲ್ಲಿ ತಾಳಿ ಇರಲಿಲ್ಲ. ಈ ನೋವನ್ನು ಅರ್ಥ ಮಾಡಿಕೊಂಡ ಈ ಕಾರ್ಯವನ್ನು ಮಾಡಿದ್ದಾರೆ. ಈ ವೃದ್ಧ ದಂಪತಿಗೆ ಸಂಪ್ರದಾಯದಂತೆ ಕುಟುಂಬದವರು ಸೆರಿಕೊಂಡು ಮದುವೆ ಮಾಡಿಸಿದ್ದಾರೆ.ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಾ ಇದೆ.






