ಮಾಹಿತಿ ತಂತ್ರಜ್ಞಾನ

ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರಿನಲ್ಲಿ ಡಾl ಶಿವಪ್ರಸಾದ್.ಕೆ ರವರ IQ Explore ಆ್ಯಪ್ ಲೋಕಾರ್ಪಣೆ

Views: 342

ಕನ್ನಡ ಕರಾವಳಿ ಸುದ್ದಿ: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಾl ಶಿವಪ್ರಸಾದ್ ಕೆ ಸೃಷ್ಟಿಸಿದ IQ Explore ಆ್ಯಪ್ ಜುಲೈ 3 ರಂದು ಲೋಕಾರ್ಪಣೆಗೊಳಿಸಲಾಯಿತು.

ದೇವಸ್ಥಾನದ ಆಡಳಿತ ಧರ್ಮದರ್ಶಿ ಬಾರ್ಕೂರು ರಂಗನಕೆರೆ ಶ್ರೀನಿವಾಸ ಶೆಟ್ಟಿಗಾರ್ ಆ್ಯಪ್ ಲೋಕಾರ್ಪಣೆಗೊಳಿಸಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ನಮ್ಮ ದೈನಂದಿನ ಜೀವನ ಇನ್ನಷ್ಟು ಸುಲಭ ಮತ್ತು ಪರಿಣಾಮಕಾರಿಯನ್ನಾಗಿಸಲು ವಿವಿಧ ವಿಷಯಗಳಿಂದ ಉನ್ನತ ಜ್ಞಾನ ಸಂಪಾದಿಸಿಕೊಳ್ಳಲು ಆ್ಯಪ್ ತುಂಬಾ ಸಹಕಾರಿಯಾಗಿದೆ ಎಲ್ಲರೂ ಸದುಪಯೋಗ ಮಾಡಿಕೊಳ್ಳಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಲಾವಿದ ಮತ್ತು ಯೂಟ್ಯೂಬರ್ ರಾಜೇಶ್ ಶಾನುಭೋಗ್ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಬುದ್ಧಿಯನ್ನು ಉಪಯೋಗಿಸಿಕೊಂಡರೆ ಏನನ್ನೂ ಸಾಧಿಸಬಹುದು. ಆ ನಿಟ್ಟಿನಲ್ಲಿ ಬಹು ಉಪಯೋಗಿ ಆ್ಯಪ್ ಸದುಪಯೋಗಪಡಿಸಿಕೊಂಡಾಗ ಜ್ಞಾನ ಸಂಪನ್ನ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.

ವೇದಿಕೆಯಲ್ಲಿ ದೇಗುಲದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾl ಜಯರಾಮ ಶೆಟ್ಟಿಗಾರ್ ಅವರು ಜನರಿಗೆ ಉತ್ತಮ ಜ್ಞಾನ ನೀಡುವ ಆ್ಯಪ್ ನಿಂದ ಎಲ್ಲರಿಗೂ ಉಪಯೋಗವಾಗಲಿ ಎಂದು ಶುಭ ಹಾರೈಸಿದರು.

ಲೋಕಾರ್ಪಣೆಗೊಂಡ IQ Explore ಆ್ಯಪ್ ಬಗ್ಗೆ ಸೃಷ್ಟಿಕರ್ತ ಡಾl ಶಿವಪ್ರಸಾದ್ ಕೆ ಅವರು ಸವಿಸ್ತಾರವಾದ ಮಾಹಿತಿ ನೀಡುತ್ತಾ- ಇದು ಕೇವಲ ಮನರಂಜನೆಗೆ ಮಾತ್ರವಲ್ಲದೆ ಕಲಿಕೆ,ಚಿಂತನೆ, ನೆನಪಿನ ಶಕ್ತಿ, ಭಾಷಾ ಕೌಶಲ್ಯ, ಮುಂತಾದ ತಾರ್ಕಿಕ ಸಾಮರ್ಥ್ಯವನ್ನು ಬೆಳೆಸುವ ಸಮಗ್ರ ವೇದಿಕೆಯಾಗಿದೆ.ಇದು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಜೀವನಕ್ಕೆ ಅಮೂಲ್ಯ ಕೊಡುಗೆ ಈ ಉದ್ದೇಶದಿಂದಲೇ ಆ್ಯಪ್ ರೂಪುಗೊಂಡಿದೆ ಎಂದರು.

ವೇದಿಕೆಯಲ್ಲಿ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಸದಾಶಿವ ಶೆಟ್ಟಿಗಾರ್ ಬ್ರಹ್ಮಾವರ,  ರಘುರಾಮ ಶೆಟ್ಟಿಗಾರ್ ವಕೀಲರು ಉಪಸ್ಥಿತರಿದ್ದರು.

ವೀರೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ್ ಶೆಟ್ಟಿಗಾರ ಉಡುಪಿ ಸ್ವಾಗತಿಸಿದರು. ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸುಧಾಕರ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ನಯನ ಶಿವಪ್ರಸಾದ್ ಶೆಟ್ಟಿಗಾರ್ ವಂದಿಸಿದರು.

IQ Explore – ಜ್ಞಾನ, ಕೌಶಲ್ಯ ಮತ್ತು ಬುದ್ಧಿಶಕ್ತಿಯನ್ನು ಬೆಳೆಸುವ ಸಮಗ್ರ ಕನ್ನಡ ವೇದಿಕೆ

ಇಂದಿನ ಡಿಜಿಟಲ್ ಯುಗದಲ್ಲಿ ಕಲಿಕೆಯ ವಿಧಾನಗಳು ವೇಗವಾಗಿ ಬದಲಾಗುತ್ತಿವೆ. ಪುಸ್ತಕಗಳ ಜೊತೆಗೆ ಮೊಬೈಲ್ ಮೂಲಕವೂ ಜ್ಞಾನವನ್ನು ವಿಸ್ತರಿಸಿಕೊಳ್ಳುವ ಅವಕಾಶಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ IQ Explore ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯೋಗಾಕಾಂಕ್ಷಿಗಳು ಹಾಗೂ ಸಾಮಾನ್ಯ ಸಾರ್ವಜನಿಕರಿಗಾಗಿ ರೂಪುಗೊಂಡಿರುವ ಸಮಗ್ರ ಜ್ಞಾನ ಮತ್ತು ಮೆದುಳು ಚುರುಕುಗೊಳಿಸುವ ವೇದಿಕೆಯಾಗಿದೆ.

IQ Explore ಕೇವಲ ಒಂದು ಕ್ವಿಜ್ ಆಪ್ ಅಲ್ಲ. ಇದು ಕಲಿಕೆ (Learning), ಚಿಂತನೆ (Thinking), ನೆನಪಿನ ಶಕ್ತಿ (Memory), ಪದಸಂಪತ್ತು (Vocabulary), ತಾರ್ಕಿಕತೆ (Reasoning) ಮತ್ತು ಏಕಾಗ್ರತೆ (Concentration) ಬೆಳೆಸುವ ಬಹುಮುಖ ವೇದಿಕೆಯಾಗಿದೆ.

 IQ Explore ನಲ್ಲಿ ಏನೆಲ್ಲಾ ಲಭ್ಯ?

📚 ಜ್ಞಾನ ಕ್ವಿಜ್ ಗಳು: ಸಾವಿರಾರು ಬಹು ಆಯ್ಕೆ (MCQ) ಪ್ರಶ್ನೆಗಳ ಮೂಲಕ ವಿವಿಧ ವಿಷಯಗಳಲ್ಲಿ ನಿಮ್ಮ ಜ್ಞಾನವನ್ನು ಪರೀಕ್ಷಿಸಬಹುದು.

 🧩 Word Find: ಅಕ್ಷರಗಳ ಜಾಲದಲ್ಲಿ ಅಡಗಿರುವ ಪದಗಳನ್ನು ಹುಡುಕುವ ಆಟ. ಇದು ಪದಸಂಪತ್ತನ್ನು ಹೆಚ್ಚಿಸುವುದರ ಜೊತೆಗೆ ಏಕಾಗ್ರತೆಯನ್ನು ವೃದ್ಧಿಸುತ್ತದೆ.

 🔤 Word Scramble : ಅವ್ಯವಸ್ಥಿತವಾಗಿ ನೀಡಿರುವ ಅಕ್ಷರಗಳನ್ನು ಸರಿಯಾದ ಪದವಾಗಿ ಜೋಡಿಸುವ ಚಟುವಟಿಕೆ. ಭಾಷಾ ಕೌಶಲ್ಯ ಹಾಗೂ ಚಿಂತನಾ ಸಾಮರ್ಥ್ಯವನ್ನು ಬೆಳೆಸುತ್ತದೆ.

 🔊 Spell Bee: ಸರಿಯಾದ ಕಾಗುಣಿತವನ್ನು ಕಲಿಯಲು ಮತ್ತು ಇಂಗ್ಲಿಷ್ ಪದಸಂಪತ್ತನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾದ ವಿಭಾಗ.

🔢 Sudoku: ತಾರ್ಕಿಕ ಚಿಂತನೆ, ಸಮಸ್ಯೆ ಪರಿಹಾರ ಕೌಶಲ್ಯ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ವಿಶ್ವಪ್ರಸಿದ್ಧ ಸಂಖ್ಯಾ ಆಟ.

 🎯 Daily Challenge: ಪ್ರತಿದಿನ ಹೊಸ ಸವಾಲುಗಳ ಮೂಲಕ ನಿರಂತರ ಕಲಿಕೆಗೆ ಪ್ರೇರಣೆ.

 🏆 Leaderboard & Achievements: ನಿಮ್ಮ ಸಾಧನೆಯನ್ನು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಅವಕಾಶ. ಉತ್ತಮ ಪ್ರದರ್ಶನ ನೀಡುವವರಿಗೆ ವಿಶೇಷ ಗುರುತಿನ ಚಿಹ್ನೆಗಳು ಹಾಗೂ ಸಾಧನೆಗಳ ದಾಖಲಾತಿ.

📈 Progress Tracking: ನಿಮ್ಮ ಕಲಿಕೆಯ ಪ್ರಗತಿ, ಅಂಕಗಳು ಮತ್ತು ಸುಧಾರಿಸಬೇಕಾದ ವಿಷಯಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ವಿಷಯಗಳ ವ್ಯಾಪ್ತಿ

IQ Explore ನಲ್ಲಿ ವಿವಿಧ ವಿಷಯಗಳ ಕ್ವಿಜ್ ಗಳು ಮತ್ತು ಚಟುವಟಿಕೆಗಳು ಲಭ್ಯವಿರುತ್ತವೆ.

* ಕರ್ನಾಟಕ * ಭಾರತ *ವಿಶ್ವ *ವಿಜ್ಞಾನ ಮತ್ತು ತಂತ್ರಜ್ಞಾನ* ಗಣಿತ* ಇತಿಹಾಸ* ಭೂಗೋಳ* ಕಂಪ್ಯೂಟರ್ ಜ್ಞಾನ* ಕ್ರೀಡೆ* ಸಾಹಿತ್ಯ* ಪ್ರಚಲಿತ ವಿದ್ಯಮಾನಗಳು* ವ್ಯಕ್ತಿತ್ವ ವಿಕಾಸ* ಸನಾತನ ಧರ್ಮ* ರಾಮಾಯಣ* ಮಹಾಭಾರತ* ಭಾಗವತ* ದೇವಾಲಯಗಳು* ಭಾರತೀಯ ಸಂಸ್ಕೃತಿ ಮತ್ತು ಪರಂಪರೆ

ಯಾರಿಗೆ ಉಪಯುಕ್ತ?

✅ ಶಾಲಾ ವಿದ್ಯಾರ್ಥಿಗಳು

✅ ಕಾಲೇಜು ವಿದ್ಯಾರ್ಥಿಗಳು

✅ NEET, JEE, CET, KPSC, UPSC, SSC, ಬ್ಯಾಂಕಿಂಗ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳು

✅ ಉದ್ಯೋಗಾಕಾಂಕ್ಷಿಗಳು

✅ ಶಿಕ್ಷಕರು ಮತ್ತು ತರಬೇತುದಾರರು

✅ ಪೋಷಕರು

✅ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಬಯಸುವ ಪ್ರತಿಯೊಬ್ಬ ನಾಗರಿಕ

 IQ Explore ನ ವಿಶೇಷತೆ

 ಇಂಗ್ಲಿಷ್ ನೊಂದಿಗೆ ಕನ್ನಡಕ್ಕೂ ಆದ್ಯತೆ ನೀಡಿರುವ ವೇದಿಕೆ

* ಎಲ್ಲ ವಯೋಮಾನದವರಿಗೂ ಸೂಕ್ತ

* ಪ್ರತಿದಿನ ಹೊಸ ಕಲಿಕೆಯ ಅನುಭವ

* ಮನರಂಜನೆಯ ಜೊತೆಗೆ ಜ್ಞಾನಾರ್ಜನೆ

* ಮೆದುಳಿನ ವ್ಯಾಯಾಮಕ್ಕೆ ವಿವಿಧ ಆಟಗಳು

* ಜ್ಞಾನ, ಭಾಷಾ ಕೌಶಲ್ಯ ಮತ್ತು ತಾರ್ಕಿಕ ಚಿಂತನೆಯನ್ನು ಒಟ್ಟಿಗೆ ಬೆಳೆಸುವ ವ್ಯವಸ್ಥೆ

 ನಮ್ಮ ಧ್ಯೇಯ

“ಪ್ರತಿದಿನ ಕಲಿಯೋಣ… ಪ್ರತಿದಿನ ಬೆಳೆಯೋಣ… ಜ್ಞಾನದಿಂದ ಜೀವನವನ್ನು ಶ್ರೀಮಂತಗೊಳಿಸೋಣ.”

IQ Explore ಮೂಲಕ ಪ್ರತಿಯೊಬ್ಬರೂ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಬಹುದು, ಹೊಸ ಪದಗಳನ್ನು ಕಲಿಯಬಹುದು, ಮೆದುಳಿನ ಚುರುಕುತನವನ್ನು ಹೆಚ್ಚಿಸಬಹುದು ಮತ್ತು ಕಲಿಕೆಯನ್ನು ಸಂತೋಷಕರ ಅನುಭವವನ್ನಾಗಿ ಮಾಡಬಹುದು.

IQ Explore – ನಿಮ್ಮ ಜ್ಞಾನದ ಹೊಸ ಸಂಗಾತಿ.

Related Articles

Back to top button
error: Content is protected !!