ಮಾಹಿತಿ ತಂತ್ರಜ್ಞಾನ

ಮದುವೆ ಆಹ್ವಾನದ ಹೆಸರಿನ ಎಪಿಕೆ ಫೈಲ್ ತೆರೆಯುವ ಮೂಲಕ 9.96 ಲಕ್ಷ ಸೈಬರ್ ವಂಚನೆ

Views: 5

ಕನ್ನಡ ಕರಾವಳಿ ಸುದ್ದಿ: ವಾಟ್ಸ್‌ಆ್ಯಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಬಂದ ಮದುವೆ ಆಹ್ವಾನ ಪತ್ರಿಕೆಯ ಹೆಸರಿನ ಎಪಿಕೆ ಫೈಲ್ ಅನ್ನು ತೆರೆಯುವ ಮೂಲಕ ಸರಕಾರಿ ಅಧಿಕಾರಿಯೊಬ್ಬರು ಸುಮಾರು 9.96 ಲಕ್ಷರು. ಕಳೆದುಕೊಂಡಿದ್ದಾರೆ.

ಪ್ರಕರಣ ಸಂಬಂಧ ಬೆಂಗಳೂರು ಉತ್ತರ ವಿಭಾಗದ ಸೈಬ‌ರ್ ಪೊಲೀಸ್ ‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸರಕಾರಿ ಅಧಿಕಾರಿಯ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಮದುವೆ ಆಹ್ವಾನ ಪತ್ರಿಕೆ ಎಂಬ ಸಂದೇಶದೊಂದಿಗೆ ಎಪಿಕೆ ಫೈಲ್ ಕಳುಹಿಸಲಾಗಿತ್ತು. ಅದನ್ನು ನಿಜವಾದ ಆಹ್ವಾನ ಪತ್ರಿಕೆ  ಎಂದು ಭಾವಿಸಿದ ಅವರು, ಫೈಲ್ ಅನ್ನು ತೆರೆದಿದ್ದಾರೆ.

ಬಳಿಕ ಅದು ಎಪಿಕೆ ಫೈಲ್ ಎಂಬುದು ಗೊತ್ತಾದರೂ ಹೆಚ್ಚಿನ ಗಮನ ಹರಿಸಿಲ್ಲ. ಆದರೆ, ಸುಮಾರು 15 ನಿಮಿಷಗಳಲ್ಲೇ ಅವರ ಮೊಬೈಲ್‌ಗೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತಿರುವ ಸಂದೇಶಗಳು ಬರಲಾರಂಭಿಸಿವೆ. ತಕ್ಷಣ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ವಿವಿಧ ಹಂತಗಳಲ್ಲಿ ಒಟ್ಟು 9.96 ಲಕ್ಷ ರು. ವಂಚಕರ ಖಾತೆಗಳಿಗೆ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಇದರಿಂದ ಬೆಚ್ಚಿಬಿದ್ದ ಅಧಿಕಾರಿ, ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರು ಬಳಸಿದ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆಗಳ ವಿವರಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!