52 ಗ್ರಾಮ, 4,000 ಪ್ರಕರಣ ಬ್ರಹ್ಮಾವರದ ನ್ಯಾಯಾಲಯ ವ್ಯಾಪ್ತಿ ಗೆ

Views: 0
ಬ್ರಹ್ಮಾವರ ತಾಲೂಕು ಆರಂಭವಾದ ಮೇಲೆ ಪ್ರತ್ಯೇಕ ನ್ಯಾಯಾಲಯ ಬೇಕೆಂಬ ಬೇಡಿಕೆಯಂತೆ 52 ಗ್ರಾಮ ಮತ್ತು ಬ್ರಹ್ಮಾವರ ಸಂಚಾರಿ ನ್ಯಾಯಾಲಯದ ವ್ಯಾಪ್ತಿಯಲ್ಲಿ ಸಿವಿಲ್, ಕ್ರಿಮಿನಲ್, ಚೆಕ್ ಬೌನ್ಸ್ ಸೇರಿದಂತೆ 4,000 ಪ್ರಕರಣಗಳು ಸೇರಿದೆ.
2018 ರಲ್ಲಿ ಬ್ರಹ್ಮಾವರ ತಾಲೂಕು ಆರಂಭವಾಗಿದ್ದು, 52 ಗ್ರಾಮಗಳಲ್ಲಿ 33 ಕುಂದಾಪುರ, 19 ಉಡುಪಿಗಳಲ್ಲಿ ಹಂಚಿಕೆಯಾಗಿತ್ತು. ಸೋಮವಾರ ಮತ್ತು ಮಂಗಳವಾರ ನ್ಯಾಯಾಲಯ ಕಾರ್ಯಾಚರಣೆ ನಡೆಸಲಿದ್ದು, ಈ ವ್ಯಾಪ್ತಿಯ ಕಕ್ಷಿದಾರರು ಕುಂದಾಪುರ ಮತ್ತು ಉಡುಪಿಗೆ ಹೋಗುವುದು ತಪ್ಪಿದಂತಾಗಿದೆ.
ಶನಿವಾರ ಬ್ರಹ್ಮಾವರ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಉದ್ಘಾಟನೆಯಲ್ಲಿ ಕೇವಲ ಎರಡು ದಿನ ನ್ಯಾಯಾಲಯದ ಕಲಾಪ ನಡೆಯುವ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರವಾದ್ದರಿಂದ ಪೂರ್ಣ ಪ್ರಮಾಣ ಶಾಶ್ವತ ನ್ಯಾಯಾಲಯ ಹಾಗೂ ಸ್ವಂತ ಕಟ್ಟಡಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಕೋರ್ಟ್ ಕಲಾಪಕ್ಕೆ ಬೇಕಾದ ಸಭಾಂಗಣ, ವಕೀಲರಿಗೆ, ಶಿರಸ್ತೇದಾರರಿಗೆ, ಸರ್ಕಾರಿ ವಕೀಲರಿಗೆ ಪ್ರತ್ಯೇಕ ಕೊಠಡಿಗಳನ್ನು ಉದ್ಘಾಟಿಸಲಾಯಿತು. ನ್ಯಾಯಾಲಯದ ಪ್ರಕ್ರಿಯೆ ಅಧಿಕೃತ ಚಾಲನೆ ನೀಡಲಾಯಿತು.