ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ 22 ವರ್ಷದ ಕರ್ನಾಟಕದ ಸ್ನಾತಕೋತ್ತರ ವಿದ್ಯಾರ್ಥಿ ನಿಗೂಢ ನಾಪತ್ತೆ!
Views: 24
ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ಮೂಲದ 22 ವರ್ಷದ ವಿದ್ಯಾರ್ಥಿ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದಾರೆ. ಸಾಕೇತ್ ಶ್ರೀನಿವಾಸಯ್ಯ ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿದ್ದಾರೆ.
ಸಾಕೇತ್ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ MS ಓದುತ್ತಿದ್ದರು.
ಕಳೆದ ಎರಡು ದಿನಗಳಿಂದ ಅವರಿಗೆ ಯಾರೊಂದಿಗೂ ಸಂಪರ್ಕ ಸಾಧ್ಯವಾಗಿಲ್ಲ ಎಂದು ಕುಟುಂಬಸ್ಥರು ಮತ್ತು ಸ್ನೇಹಿತರು ತಿಳಿಸಿದ್ದಾರೆ.
ಸಾಕೇತ್ ಕೊನೆಯ ಬಾರಿಗೆ ಫೆಬ್ರವರಿ 12ರಂದು ಕಾಣಿಸಿಕೊಂಡಿದ್ದರು ಎನ್ನಲಾಗಿದ್ದು, ಆ ದಿನ ಅವರು ಕ್ಯಾಲಿಫೋರ್ನಿಯಾದ ಟಿಲ್ಡೆನ್ ರೀಜನಲ್ ಪಾರ್ಕ್‌ನಲ್ಲಿರುವ ಕೆರೆಯ ಬಳಿ ಕಂಡುಬಂದಿದ್ದರು ಎಂದು ಮಾಹಿತಿ ಇದೆ. ಆ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ತಾಯಿಗೆ ಸಾಕೇತ್ ಕಾಲ್ ಮಾಡಿದ್ದರು . ಆದರೆ ವಾಪಸ್ ಕರೆ ಮಾಡಿದಾಗ ಮಗ ಪಿಕ್ ಮಾಡಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ. ಮಗ ಸಂಪರ್ಕಕ್ಕೆ ಸಿಗದಿರುವುದರಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ಸಾಕೇಶ್ ಕಣ್ಮರೆಯಾಗುವುದಕ್ಕೂ ಮುನ್ನ ಅವರನ್ನು ಕಡೆಯದಾಗಿ ಕ್ಯಾಲಿಫೋರ್ನಿಯ ವಿವಿ ಕ್ಯಾಂಪಸ್‌ನಿಂದ 1 ಕಿಮೀ ದೂರದಲ್ಲಿ ಬರ್ಕಲಿ ಹಿಲ್ಸ್ ಪ್ರದೇಶದ ಆಂಝಾ ಸರೋವರದ ಬಳಿ ಜನರು ಆ ಕಂಡಿದ್ದರು. ಕಂಡಿದ್ದ ಆ ನಂತರದಲ್ಲಿ ಸಾಕೇತ್‌ರ ಬ್ಯಾಕ್ ಪ್ಯಾಕ್ ಬ್ಯಾಗ್ ಮತ್ತು ಲ್ಯಾಪ್‌ಟಾಪ್ ಟಿಲ್ಡೆನ್ ರೀಜನಲ್ ಪಾರ್ಕ್‌ನಲ್ಲಿ, ಮನೆಯೊಂದರ ಸಮೀಪದಲ್ಲಿ ಬಿದ್ದಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಭಾರತೀಯ ವಿದ್ಯಾರ್ಥಿಗಳು ಹೀಗೆ ಅಮೆರಿಕದಲ್ಲಿ ಕಾಣೆಯಾಗುತ್ತಿರುವುದು ಇದೇ ಮೊದಲೇನೂ ಅಲ್ಲ. ಭಾರತೀಯ ವಿದ್ಯಾರ್ಥಿಗಳ ಮೇಲೆ ವಿದೇಶಿ ವಿದ್ಯಾರ್ಥಿಗಳು, ವರ್ಣಭೇದ, ಅನ್ಯದೇಶೀಯ, ನಮ್ಮ ಅವಕಾಶ ಕಿತ್ತುಕೊಳ್ಳಲು ಬಂದವರು ಎಂಬೆಲ್ಲಾ ಕಾರಣಕ್ಕೂ ಹಲ್ಲೆಗೆ, ದೌರ್ಜನ್ಯಕ್ಕೆ ಒಳಗಾಗಿರುವುದು, ಅಪಹರಣಕ್ಕೂ ಒಳಗಾಗಿರುವ ಪ್ರಕರಣಗಳು ಈ ಹಿಂದೆಯೂ ವರದಿಯಾಗಿವೆ.






