ಇತರೆ

ಗೋವಾ ಪ್ರವಾಸಕ್ಕೆ ಬಂದ ಇಬ್ಬರು ರಷ್ಯಾ ಸುಂದರಿಯರ ನಿಗೂಢ ಹತ್ಯೆ ಬಯಲು!

Views: 243

ಕನ್ನಡ ಕರಾವಳಿ ಸುದ್ದಿ: ರಷ್ಯಾ ಮೂಲದ ಅಲೆಕ್ಸಿ ಲಿಯೋನಲ್ ಎಂಬಾತ ತನ್ನ ಸ್ನೇಹಿತೆಯರಿಬ್ಬರನ್ನೂ ಒಂದು ದಿನದ ಅಂತರದಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಉತ್ತರ ಗೋವಾದ ಅರಾಂಬೋಲ್ ಹಾಗೂ ಮೊರ್ಜಿಮ್ ಗ್ರಾಮದಲ್ಲಿ ವಾಸವಾಗಿದ್ದ ಎಲೆನಾ ವನೀತಾ (37) ಹಾಗೂ ಎಲೆನಾ ಕಸ್ತನೋವಾ (37) ಕೊಲೆಯಾದ ಮಹಿಳೆಯರು.

ಜನವರಿ 14ರಂದು ಆರೋಪಿ ತನ್ನ ಸ್ನೇಹಿತೆ ಮೊರ್ಜಿಮ್ ನಲ್ಲಿ ವಾಸವಿದ್ದ ಎಲೆನಾ ವನಿವಾ ಅವರನ್ನು ಕತ್ತು ಸೀಳಿ ಕೊಲೆಗೈದಿದ್ದಾನೆ. ಬಳಿಕ ಜನವರಿ 15ರಂದು ಅಲ್ಲಿಂದ 8 ಕಿ.ಮೀ ದೂರದಲ್ಲಿರುವ ತನ್ನ ಮತ್ತೋರ್ವ ಸ್ನೇಹಿತೆ ಎಲೆನಾ ಕಸ್ತನೋವಾಳನ್ನು ಭೇಟಿಯಾಗಲೆಂದು ಆಕೆ ಮನೆಗೆ ಹೋದವನು ಆಕೆಯನ್ನು ಹಗ್ಗದಿಂದ ಕಟ್ಟಿ ಹಾಕಿ ಕತ್ತು ಸೀಳಿ ಕೊಲೆಗೈದು ಎಸ್ಕೇಪ್ ಆಗಿದ್ದಾನೆ. ಮರುದಿನ ಬೆಳಿಗ್ಗೆ ಮನೆಯ ಮಾಲೀಕರು ಗಮನಿಸಿದಾಗಲೇ ಕೊಲೆಯಾಗಿರುವುದು ಬೆಳಕಿಗೆ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಕೊಲೆಗೆ ಕಾರಣವೇನು?

ಮೂಲಗಳ ಪ್ರಕಾರ, ಮಹಿಳೆಯರಲ್ಲಿ ಒಬ್ಬರು ರಷ್ಯಾದ ವ್ಯಕ್ತಿಯಿಂದ ಹಣವನ್ನು ಎರವಲು ಪಡೆದಿದ್ದರೆ, ಇನ್ನೊಬ್ಬರು ಆರೋಪಿಯಿಂದ 100 ರೂ. ಮೌಲ್ಯದ ‘ರಬ್ಬರ್ ಕಿರೀಟ’ವನ್ನು ಎರವಲು ಪಡೆದಿದ್ದರು . ಆದರೇ, ಅದನ್ನು ಅವರಿಬ್ಬರೂ ಅವನಿಗೆ ಹಿಂತಿರುಗಿಸಲಿಲ್ಲ. ಇದರಿಂದ ಪ್ರಚೋದಿಸಲ್ಪಟ್ಟ ಅವರು ಜನವರಿ 14 ಮತ್ತು 15 ರಂದು ಎರಡು ವಿಭಿನ್ನ ದಿನಗಳಲ್ಲಿ ತಮ್ಮ ಕೋಣೆಗಳಲ್ಲಿ ಇಬ್ಬರ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಕೊಲೆಗಳು “ಪೂರ್ವ ಯೋಜಿತವಲ್ಲ” ಆದರೆ “ಪ್ರಚೋದಿತ ಕೊಲೆಗಳು” ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಲೆಕ್ಸೆಯ್ “ಅತಿಯಾದ ಗೀಳು” ಹೊಂದಿದ್ದನು . ಇಬ್ಬರು ಮಹಿಳೆಯರ ಭಾರಿ ಹಚ್ಚಿಕೊಂಡಿದ್ದ. ಸುಲಭವಾಗಿ ಪ್ರಚೋದಿಸಲ್ಪಡಬಹುದಾದ ವ್ಯಕ್ತಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.

Related Articles

Back to top button
error: Content is protected !!