ರಾಜಕೀಯ

40 ಸಾವಿರ ಕೋಟಿ ಅಕ್ರಮ ಆರೋಪ; ಕಾಂಗ್ರೆಸ್‌‌ಗೆ ಅಸ್ತ್ರ, ಯತ್ನಾಳ್​​ ವಿರುದ್ಧ ದೂರು

Views: 51

ಬೆಂಗಳೂರು: ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದಾ ಒಂದಲ್ಲ ಮತ್ತೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಬರೋಬ್ಬರಿ 40 ಸಾವಿರ ಕೋಟಿ ಕೋವಿಡ್ ಅವ್ಯವಹಾರ ನಡೆದಿದೆ ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಸದ್ಯ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರೋ ಹೊತ್ತಲ್ಲೇ ಯತ್ನಾಳ್​ಗೆ ಸಂಕಷ್ಟ ಎದುರಾಗಿದೆ.

ಹೌದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾಂಗ್ರೆಸ್​ ದೂರು ನೀಡಿದೆ. ಲೋಕಾಯುಕ್ತಗೆ ದೂರು ನೀಡಿರೋ ವಕೀಲ & ಕೆಪಿಸಿಸಿ ಲೀಗಲ್​ ಸೆಲ್​​ ಕಾರ್ಯದರ್ಶಿ ಭೀಮನಗೌಡ ಪರಗೊಂಡ ಯತ್ನಾಳ್​​ ಅವರಿಗೆ ನೋಟಿಸ್​ ನೀಡಬೇಕು. 40 ಸಾವಿರ ಕೋಟಿ ಅಕ್ರಮ ಆರೋಪ ಮಾಡಿದ್ದ ಯತ್ನಾಳ್ ಅವರ ಮೂಲಕವೇ ತನಿಖೆ ಶುರು ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಏನಿದು ಆರೋಪ..?

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇತ್ತೀಚೆಗೆ ಬಿಜೆಪಿಗರ ಮೇಲೆ ಹರಿಹಾಯುತ್ತಲೇ ಇರುತ್ತಾರೆ. ಅದರಲ್ಲೂ ಬಿಎಸ್‌‌ವೈ ಹಾಗೂ ಪುತ್ರ ವಿಜಯೇಂದ್ರ, ಮುರುಗೇಶ ನಿರಾಣಿಯೇ ಇವರ ಮೊದಲ ಟಾರ್ಗೆಟ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೊರೊನಾ ಕಾಲದಲ್ಲಿ 40 ಸಾವಿರ ಕೋಟಿ ಅಕ್ರಮ ಆಗಿದೆ ಎಂದು ಯತ್ನಾಳ್​ ಹೇಳಿಕೆ ನೀಡಿದ್ದು, ಇದು ಕಾಂಗ್ರೆಸ್‌‌ಗೆ ಅಸ್ತ್ರವಾಗಿದೆ.

Related Articles

Back to top button
error: Content is protected !!