ಕೋಟೇಶ್ವರ: ಯೋಗ ಶಿಬಿರ ಸಮಾರೋಪ

Views: 209
ಕೋಟೇಶ್ವರ: ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ 9ನೇ ವರ್ಷದ ಯೋಗ ಶಿಬಿರದ ಸಮಾರೋಪ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಶ್ರೀ ಜಗದೀಶ್ ಮೊಗವೀರ ನಿಯೋಜಿತ ರೋಟರಿ ಕ್ಲಬ್ ನ ಅಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕುಂದಾಪುರದ ಶಾಸಕ ಶ್ರೀ ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನಸ್ಸು ಮತ್ತು ಬುದ್ಧಿಯನ್ನು ಒಂದುಗೂಡಿಸಿ ಜ್ಞಾನ ಸಂಪಾದಿಸುವುದೇ ಯೋಗ. ಪ್ರತಿ ದಿನ ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದರು.
ಪ್ರಸೂತಿ ತಜ್ಞೆ ಡಾ. ಪ್ರಿಯಾಂಕ ಜೋಗಿ ಆರೋಗ್ಯ ಮತ್ತು ಯೋಗದ ಬಗ್ಗೆ ಮಾಹಿತಿಯನ್ನು ನೀಡಿದರು,ಇಂಜಿನಿಯರ್ ಗುರುರಾಜ್ ರಾವ್ ಇದ್ದರು.ಶ್ರೀಮತಿ ಗೀತಾ ಯೋಗದ ಮಹತ್ವವನ್ನು ತಿಳಿಸಿದರು. ಯೋಗ ಶಿಕ್ಷಕ ಶ್ರೀ ಅಣ್ಣಪ್ಪ ಶಿಬಿರಾರ್ಥಿಗಳಿಗೆ ಯೋಗದ ಪ್ರಾತ್ಯಕ್ಷಿತೆ ನೀಡಿದರು. ಶ್ರೀಮತಿ ಸುಧಾ ಪುರಾಣಿಕ್ ಯೋಗ ಗೀತೆಯನ್ನು ಹಾಡಿದರು. ಶ್ರೀಮತಿ ಜ್ಯೋತಿಲಕ್ಷ್ಮಿ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಸುಜಾತ ಶೆಟ್ಟಿಗಾರ್ ನಿರೂಪಿಸಿದರು. ಓಂ ಯೋಗ ವಿದ್ಯಾಮಂದಿರದ ಆಶ್ರಯದಲ್ಲಿ ನಡೆದ ಶಿಬಿರದ ಸದುಪಯೋಗವನ್ನು ನೂರಾರು ಮಂದಿ ಪಡೆದರು.