ವಸುದೈವ ಕುಟುಂಬಕಂ: ಯೋಗ ‘ಒಂದೇ ವಿಶ್ವ -ಒಂದೇ ಕುಟುಂಬ’

Views: 51
ವಿಶ್ವಸಂಸ್ಥೆ ಅಂಗಳದಲ್ಲಿ ಪ್ರಧಾನಿ ನೇತೃತ್ವದಲ್ಲಿ ಯೋಗ ಪ್ರದರ್ಶನ ನಡೆದಿದೆ. ‘ವಸುದೈವ ಕುಟುಂಬಕಂ’ ಎಂಬ ಘೋಷ ವಾಕ್ಯದೊಡನೆ ಯೋಗ ವಿದ್ಯೆ ಉತ್ತಮ ಆರೋಗ್ಯದ ಸಂದೇಶ ರವಾನಿಸುವುದರೊಂದಿಗೆ 9ನೇ ಅಂತರಾಷ್ಟ್ರೀಯ ಯೋಗ ದಿನದ ಬೃಹತ್ ಕಾರ್ಯಕ್ರಮದಲ್ಲಿ ಹಾಗೂ ವಿಶ್ವದ ವಿವಿದೆಡೆ ನಡೆದ ಕಾರ್ಯಕ್ರಮಗಳು 180 ದೇಶಗಳು ಪ್ರತಿದ್ವನಿಸಿದೆ.
ವಿಶ್ವಸಂಸ್ಥೆಯ ಸಿಬ್ಬಂದಿಗಳು ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ವಿವಿಧ ದೇಶಗಳ ಸಾವಿರಾರು ಪ್ರಜೆಗಳು ಓಂಕಾರದೊಂದಿಗೆ ಯೋಗಾಸನ ಪ್ರದರ್ಶಿಸುವ ಮೂಲಕ ಯೋಗ ದಿನಕ್ಕೆ ಮುನ್ನುಡಿ ಬರೆಯಲಾಯಿತು.
ಅಂತರಾಷ್ಟ್ರೀಯ ಯೋಗ ದಿನದ ಮೂಲಕ ಭಾರತದ ಪುರಾತನ ವಿದ್ಯೆಯಾದ ಯೋಗ ಅಂತರಾಷ್ಟ್ರೀಯ ಆಂದೋಲನವಾಗಿ, ಜಾಗತಿಕ ಭಾವನೆಯಾಗಿ ಮಾರ್ಪಟ್ಟಿದೆ.
ಗಿನ್ನೆಸ್ ದಾಖಲೆಯಾದ ಯೋಗ ಕಾರ್ಯಕ್ರಮ: ಪ್ರಧಾನ ಮಂತ್ರಿ ಮೋದಿ ನೇತೃತ್ವದಲ್ಲಿ ನ್ಯೂಯಾರ್ಕ್ ನಲ್ಲಿ ಇರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಯೋಗ ದಿನದ ಕಾರ್ಯಕ್ರಮ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ.
ಗಿನ್ನೆಸ್ ದಾಖಲೆಗಳ ಮೌಲ್ಯಮಾಪಕ ಮೈಕಲ್ ಎಂಪ್ರಿಕ್ ಅವರು 140 ದೇಶಗಳ ನಾಗರಿಕರು ಭಾಗವಹಿಸುವ ಸಂದೇಶದಲ್ಲಿ 135 ದೇಶದವರು ಭಾಗವಹಿಸಿದ್ದಾರೆ ಎಂದಿದ್ದಾರೆ.
ಸೂರತ್ ನಲ್ಲಿಯೂ ಗಿನ್ನೆಸ್ ವಿಶ್ವದಾಖಲೆ :ಗುಜರಾತ್ ಸೂರತ್ ನಲ್ಲಿ 1.53 ಲಕ್ಷ ಮಂದಿ ಯೋಗಭ್ಯಾಸ ಮಾಡುವುದರ ಮೂಲಕ ನೂತನ ಗಿನ್ನೆಸ್ ವಿಶ್ವ ದಾಖಲೆ ಮಾಡಿದರು.