ಜನಮನ
ಗುಜರಾತ್ ಕರಾವಳಿ ತೀರಕ್ಕೆ ಅಪ್ಪಳಿಸಿದ “ಬಿಪರ್ ಜಾಯ್ “ಚಂಡಮಾರುತ

Views: 130
ಬಿಪರ್ ಜಾಯ್ ಚಂಡಮಾರುತ ಗುಜರಾತ್ ಕರಾವಳಿ ತೀರಕ್ಕೆ ಗುರುವಾರ ಅಪ್ಪಳಿಸಿದೆ.
ಗಂಟೆಗೆ 125 ರಿಂದ 150 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಹವಾಮಾನ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಜೊತೆಗೂಡಿ ಸಂಭಾವ್ಯ ಹಾನಿಯನ್ನು ತಡೆಯುವ ಪ್ರಯತ್ನ ಮಾಡುತ್ತಿವೆ.
ಚಂಡಮಾರುತ ಮುಂದುವರಿದು ಸೌರಾಷ್ಟ್ರ ಕಛ್ ಅನ್ನು ದಾಟಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯ ದ ಕರಾವಳಿಯತ್ತ ಚಂಡಮಾರುತ ಸಾಗಿದೆ.
ಗಾಳಿಯ ರಭಸ ತೀವ್ರವಾಗಿ ಭಾವಸಾಗರದಲ್ಲಿ ನೆರೆ ನೀರಿನಲ್ಲಿ ಸಿಲುಕಿದ ಆಡುಗಳನ್ನು ರಕ್ಷಿಸಲು ಹೋಗಿದ್ದ ತಂದೆ ಮಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.ಗುಜರಾತ್ ನ ಕರಾವಳಿ ಭಾಗದಲ್ಲಿ ಎಲ್ಲೆಲ್ಲೂ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ






