ಕುಂದಾಪುರ: ತಾಯಿ ಮತ್ತು ಮಗು ನಾಪತ್ತೆ

Views: 801
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ಕೇಳಕೇರಿ ನಿವಾಸಿ ತಾಯಿ ತನ್ನ ಮಗನೊಂದಿಗೆ ನಾಪತ್ತೆಯಾದ ಘಟನೆ ನಡೆದಿದೆ.
ರೋಸ್ ಮೇರಿ ಕೋತಾ (39) ಮತ್ತು ಮಗ ರಿಶೋನ ಕೋತಾ (11) ನಾಪತ್ತೆಯಾದವರು.
ದಿನಾಂಕ:16.01.2025 ರಂದು ಬೆಳಿಗ್ಗೆ 8:30 ಗಂಟೆಗೆ ತಾಯಿ ಮಗನೊಂದಿಗೆ ಮಾವನ ಮನೆಯಾದ ಹೊಸನಗರಕ್ಕೆ ಹೋಗುವುದಾಗಿ ಹೇಳಿ ಹೊಸನಗರಕ್ಕೆ ಹೋಗಿದ್ದು, ದಿನಾಂಕ 18.01.2025 ರಂದು ಬೆಳಿಗ್ಗೆ 9:30 ಗಂಟೆಗೆ ಕಾಣೆಯಾದ ಹೆಂಡತಿ ತನ್ನ ಗಂಡನಿಗೆ ಕರೆ ಮಾಡಿ ಹೊಸನಗರದಿಂದ ಮಗುವಿನೊಂದಿಗೆ ಮನೆಗೆ ಬರುವುದಾಗಿ ಹೇಳಿದವರು ಈ ವರೆಗೂ ಮನೆಗೆ ಬಾರದೆ ಇದ್ದು, ಅಲ್ಲದೇ ಮೊಬೈಲ್ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿರುವುದಾಗಿದ್ದು, ಪಿರ್ಯಾದಿದಾರರು ಅವರ ಹೆಂಡತಿ ಮನೆಗೆ ಬರಬಹುದೆಂದು ತಿಳಿದು ದೂರು ನೀಡಲು ವಿಳಂಬವಾಗಿರುತ್ತದೆ.ಆದ್ದರಿಂದ ಕಾಣೆಯಾದ ರೋಸ್ ಮೇರಿ ಕೋತಾ ಹಾಗೂ ಮಗ ರಿಶೋನ ಕೋತಾ ಅವರ ಪತ್ತೆಗಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಾಪತ್ತೆಯಾದವರ ವಿವರ
ರೋಸ್ ಮೇರಿ ಕೋತಾ ವಯಸ್ಸು : 39 ವರ್ಷ ಎತ್ತರ: 5.6 ಅಡಿ,
ರಿಶೋನ ಕೋತಾ ವಯಸ್ಸು :11 ವರ್ಷ ಎತ್ತರ 4 ಅಡಿ, ವಿಧ್ಯಾಭ್ಯಾಸ: 5 ನೇ ತರಗತಿ, ಗೋಧಿ ಮೈಬಣ್ಣ, ಸಪೂರ ಶರೀರ, ಕನ್ನಡ,ಕೊಂಕಣಿ ಧರಿಸಿದ ಬಟ್ಟೆ,ಹಳದಿ ಬಣ್ಣದ ಟೀ ಶರ್ಟ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
ಕುಂದಾಪುರ ಪೊಲೀಸ್ ಠಾಣೆ: 08254-230338
ಪಿ.ಐ ಕುಂದಾಪುರ ಠಾಣೆ: 9480805455
ಕುಂದಾಪುರ ಪೊಲೀಸ್ ಠಾಣೆ: 08254-230338
ಪಿ.ಐ ಕುಂದಾಪುರ ಠಾಣೆ: 9480805455