ಕರಾವಳಿ

ಸಾಕೇತ್ ರಾಜನ್ ಗರಡಿಯಲ್ಲಿ ಪಳಗಿದ್ದ ಮೋಸ್ಟ್‌ ವಾಂಟೆಂಡ್‌ ನಕ್ಸಲೈಟ್ ವಿಕ್ರಂಗೌಡ ಕತೆ ಮುಗಿಸಿದ ಎಎನ್ಎಫ್!

Views: 176

ಕನ್ನಡ ಕರಾವಳಿ ಸುದ್ದಿ: ನಕ್ಸಲ್ ಕಮಾಂಡರ್ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಲಾಗಿದೆ. ಉಡುಪಿ ಜಿಲ್ಲೆಯ ಸೀತಂಬೈಲು ಪೀತಬೈಲ್ ಅರಣ್ಯದಲ್ಲಿ ನಡೆದ ಕೂಂಬಿಂಗ್ ವೇಳೆ ವಿಕ್ರಂ ಗೌಡನ ಕತೆ ಮುಗಿದಿದೆ.

ಕೇರಳದಲ್ಲಿ ಕಾರ್ಯಾಚರಣೆ ಚುರುಕು ಪಡೆದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ನಕ್ಸಲ್ ಟೀಂ ಎಂಟ್ರಿಕೊಟ್ಟಿತ್ತು. ಈ ವಿಚಾರವನ್ನು ಅರಿತಿದ್ದ ಕರ್ನಾಟಕದ ಎಎನ್ಎಫ್ ನಕ್ಸಲರ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿತ್ತು. ಕಳೆದ ಮೂರು ದಿನಗಳಿಂದ ಮಾರುವೇಷ ತೊಟ್ಟು ANF ಹೊಂಚು ಹಾಕಿ ಕೂತಿತ್ತು.

ನಿನ್ನೆ ರಾತ್ರಿ 5 ಮಂದಿ ನಕ್ಸಲರು ಸೀತಂಬೈಲು ಸಮೀಪ ಪತ್ತೆಯಾಗಿದ್ದರು. ರೇಷನ್ ಸಂಗ್ರಹಕ್ಕೆ ಬಂದಾಗ ಎಎನ್ಎಫ್ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ನಕ್ಸಲರಿಂದ ANF ತಂಡದ ಮೇಲೆ ಗುಂಡಿನ ದಾಳಿಯಾಗಿದೆ. ನಿನ್ನೆ ಸಂಜೆ ವಿಕ್ರಮ್ ಗೌಡ ತಂಡ ಮತ್ತು ANF ಮುಖಾಮುಖಿಯಾಗಿದೆ. ದಟ್ಟಾರಣ್ಯದಲ್ಲಿ ರಾತ್ರಿ ನಡೆದ ಗುಂಡಿನ ಚಕಮಕಿ ವೇಳೆ ವಿಕ್ರಮ್ ಗೌಡ ಸಾವನ್ನಪ್ಪಿದ್ದಾನೆ. ಮಿಕ್ಕುಳಿದವ್ರು ಪರಾರಿಯಾಗಿದ್ದಾರೆ. ನಕ್ಸಲರ ತಂಡದಲ್ಲಿ ಕೇರಳದ ಯುವತಿ‌ಯೋರ್ವಳು ಇರುವ ಮಾಹಿತಿ ಇದೆ.

ನಕ್ಸಲ್ ವಿಕ್ರಂ ಗೌಡ ಯಾರು?

ವಿಕ್ರಮ್ ಗೌಡ ಉಡುಪಿಯ ಹೆಬ್ರಿ ತಾಲೂಕಿನ ಕೂಡ್ಲ ಬಳಿ ಇರುವ ನಾಡ್ವಾಲು ಗ್ರಾಮದ ನಿವಾಸಿ. ಈತ ಕಾರ್ಮಿಕ ಸಂಘಟನೆಯಿಂದ ನಕ್ಸಲನಾಗಿ ಕಾಡು ಸೇರಿದ್ದ. ಕರ್ನಾಟಕ ಮಾತ್ರವಲ್ಲದೇ, ಕೇರಳ, ತಮಿಳುನಾಡುವಿನಲ್ಲಿ ಸಕ್ರಿಯನಾಗಿದ್ದ. ಮೂರು ಬಾರಿ ಕರ್ನಾಟಕದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ. ಸುಮಾರು 20 ಪ್ರಕರಣಗಳಲ್ಲಿ ದಿ ಮೋಸ್ಟ್‌ ವಾಂಟೆಂಡ್‌ ಆಗಿದ್ದ.

ನಕ್ಸಲ್ ನಾಯಕ ಸಾಕೇತ್ ರಾಜನ್ ಗರಡಿಯಲ್ಲಿ ವಿಕ್ರಮ್ ಗೌಡ ಪಳಗಿದ್ದ. ಸಾಕೇತ್ ರಾಜನ್ ಕಾಲದಲ್ಲಿ ನಕ್ಸಲ್ ಚಟುವಟಿಕೆಗಳು ಉತ್ತುಂಗದಲ್ಲಿದ್ದವು. 2005 ಫೆಬ್ರವರಿ 5ರಂದು ಮೆಣಸಿನ ಹಾಡ್ಯದಲ್ಲಿ ಸಾಕೇತ್ ರಾಜನ್ನನ್ನು ಎನ್ಕೌಂಟರ್ ಮಾಡಲಾಗಿದೆ. ಸಾಕೇತ್ ರಾಜನ್ ಜೊತೆಯಿದ್ದ ವಿಕ್ರಮ್ ಗೌಡ ಅಲ್ಲಿಂದ ತಪ್ಪಿಸಿಕೊಂಡಿದ್ದ. ಬಳಿಕ ವಿಕ್ರಂಗೌಡ ನಕ್ಸಲ್ ತಂಡವನ್ನು ಮುನ್ನಡೆಸ್ತಿದ್ದ. ತನ್ನ ನಾಯಕನ ಸಾವಿಗೆ ರಿವೇಂಜ್ ತೀರಿಸುವ ಸಲುವಾಗಿ ಹೊಂಚು ಹಾಕಿದ್ದ.

ವಿಕ್ರಂಗೌಡ ಕಳೆದ 20 ವರ್ಷಗಳಿಂದ ನಕ್ಸಲೈಟ್ ಆಗಿ ತಲೆಮರೆಸಿಕೊಂಡಿದ್ದ. 2016ರಲ್ಲಿ ಕೇರಳದ ನೀಲಾಂಬುರ್‌ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ನಕ್ಸಲ್‌ ನಿಗ್ರಹ ಪಡೆಯೊಂದಿಗೆ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಹತರಾಗಿದ್ದರು. ಆಗಲೂ ವಿಕ್ರಂ ಗೌಡ ತಲೆಮರೆಸಿಕೊಂಡಿದ್ದ. ಕೇರಳದಲ್ಲಿ ಚಟುವಟಿಕೆಗಳನ್ನು ನಡೆಸ್ತಿದ್ದ ವಿಕ್ರಂಗೌಡ ಕರ್ನಾಟಕಕ್ಕೆ ಆಗಮಿಸಿದ್ದ. ಹೆಬ್ರಿ-ಕಾರ್ಕಳ ಪ್ರದೇಶದಲ್ಲಿ ನಕ್ಸಲ್ ಓಡಾಟ ಹೆಚ್ಚಾಗಿತ್ತು.

Related Articles

Back to top button