ಉಡುಪಿ: ಉಡುಪಿ ಸೀರೆ ಹಿರಿಯ ನೇಕಾರರಾದ ಸಂಜೀವ ಶೆಟ್ಟಿಗಾರ್, ಸೋಮಪ್ಪ ಜತ್ತನ್ನ ಅವರಿಗೆ “ನೇಕಾರ ರತ್ನ ಪ್ರಶಸ್ತಿ” ಪ್ರಧಾನ

Views: 78
ಉಡುಪಿ:ಕದಿಕೆ ಟ್ರಸ್ಟ್ ಮತ್ತು ಸೆಲ್ಕೋ ಇಂಡಿಯಾ ವತಿಯಿಂದ ದಕ್ಷಿಣ ಕನ್ನಡ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಹಿರಿಯ ಹಾಗೂ ಸಕ್ರಿಯ ನೇಕಾರರಿಬ್ಬರಿಗೆ ನೇಕಾರ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಗುರುವಾರ ನಡೆಯಿತು.
ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ 86 ವರ್ಷದ ಸಂಜೀವ ಶೆಟ್ಟಿಗಾರ್ ಈಗ ಅಳಿದು ಹೋಗಿರುವ ಮುತ್ತು ಬಾರ್ಡರ್ ನೇಯ್ಗೆಯನ್ನು 2019ರ ವರೆಗೂ ನೇಯುತ್ತಿದ್ದರು. ಈಗಲೂ ತಮ್ಮದೇ ವಿನ್ಯಾಸದ ಸೆರಗಿನಲ್ಲಿ ಬುಟ್ಟಾ ಇರುವ 60 ಕೌಂಟ್ ಸೀರೆಗಳನ್ನು ನೇಯುವುದರ ಜೊತೆಗೆ ಅನೇಕ ನೇಕಾರರಿಗೆ ಹಾಸು ಮತ್ತು ವಿನ್ಯಾಸ ಮಾಡುವ ಕೆಲಸ ಮಾಡುತ್ತಾ ಸಕ್ರಿಯರಾಗಿದ್ದಾರೆ. 74 ವರ್ಷದಿಂದ ನೇಯ್ಗೆ ಮಾಡುತ್ತಿರುವ ದಾಖಲೆ ಹೊಂದಿದ್ದಾರೆ.
ಸೋಮಪ್ಪ ಜತ್ತನ್ನ ಅವರು ಕಳೆದ 66 ವರುಷಗಳಿಂದ ನೇಕಾರಿಕೆಯ ಕಾಯಕದಲ್ಲಿ ನಿರತರಾಗಿದ್ದಾರೆ. ಅವರು 60 ಕೌಂಟ್ ನ ಸಣ್ಣ ಚೌಕುಳಿ ವಿನ್ಯಾಸದ ಅಪೂರ್ವ ಕಟ್ ಬಾರ್ಡರ್ ಉಡುಪಿ ಸೀರೆಗಳನ್ನು ನೇಯುತ್ತಿದ್ದಾರೆ.
ಉಡುಪಿ ಪ್ರಾಥಮಿಕ ನೇಕಾರದ ಸೇವಾ ಸಹಕಾರಿ ಸಂಘದ ನಿರ್ದೇಶಕ ಸೋಮಪ್ಪ ಜತ್ತನ್ನ ಶಿವಳ್ಳಿ ಪ್ರಾಥಮಿಕ ನೇಕಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಶೆಟ್ಟಿಗಾರ್ ಅವರು ಪ್ರಶಸ್ತಿ ಸ್ವೀಕರಿಸಿದರು.
ರಾಜ್ಯಸಭೆಯ ಮಾಜಿ ಸದಸ್ಯ ಅನಿಲ್ ಪ್ರಸಾದ್ ಹೆಗ್ಡೆ, ಸೆಲ್ಕೋ ಇಂಡಿಯಾ ಸಂಸ್ಥೆಯ ಡಿಜಿಎಂ ಗುರುಪ್ರಸಾದ್ ಶೆಟ್ಟಿ, ಜನಪದ ಸೇವಾ ಟ್ರಸ್ಟಿನ ಸಂತೋಷ್ ಕೌಲಗಿ, ಶಶಿಕಾಂತ್ ಶೆಟ್ಟಿಗಾರ್ ಚಂದ್ರನ್ ಉಪಸ್ಥಿತರಿದ್ದರು. ಬಿಸಿ ಶೆಟ್ಟಿ ಹಾಗೂ ಪುರುಷೋತ್ತಮ ಅಡ್ವೆ ಸನ್ಮಾನ ಪತ್ರ ವಾಚಿಸಿದರು. ಯುವ ನೇಕಾರರು ನೆಕಾರಿಕೆ ತೊರೆದು ಮರಳಿ ಬಂದವರನ್ನು ಕದಿಕೆ ಟ್ರಸ್ಟ್ ನ ಮಮತಾ ರೈ ಪರಿಚಯಿಸಿದರು. ವಿದುಷಿ ಪವನ್ ಬಿ ಆಚಾರ್. ಯ ಶಶಿಕಲಾ ಎನ್ ಭಟ್ ಶಿಲ್ಪಾ ಜೋಶಿ ಇವರಿಂದ ವೀಣಾ ವಾದನ ನೆರವೇರಿತು.