ಜನಮನ

19 ವಷ೯ಗಳ ನಂತರ ಅಪೂವ೯ ದೃಶ್ಯದ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸುತ್ತಿದೆಯೇ ?

Views: 0

ಮುಂದಿನ ತಿಂಗಳು ಮೇ 5 ರ ರಾತ್ರಿ 8.44 ಕ್ಕೆ ಸೂಯ೯ ಚಂದ್ರ ಮತ್ತು ಭೂಮಿಯು ಸಮಾಂತರ ರೇಖೆಗೆ ಬರಲಿದ್ದು ವಿಶೇಷವಾದ ಚಂದ್ರ ಗ್ರಹಣ ಉಂಟಾಗಲಿದೆ.

ಈ ಗ್ರಹಣವು ಅತ್ಯಂತ ವಿಶಿಷ್ಟವಾಗಿರಲಿದೆ. ಏಕೆಂದರೆ, ಮೇ ತಿಂಗಳ ಚಂದ್ರ ಗ್ರಹಣದ ಬಳಿಕ 19 ವಷ೯ಗಳ ಕಾಲ ಈ ಖಗೋಳ ವಿಸ್ಮಯ ನೋಡಲು ಸಿಗುವುದಿಲ್ಲ. ಮುಂದಿನ ಅರೆನೆರಳು ಚಂದ್ರಗ್ರಹಣ ಗೋಚರಿಸುವುದು 2042 ಕ್ಕೆ

ಭೂಮಿಯು ಸೂಯ೯ ಮತ್ತು ಚಂದ್ರರ ನಡುವೆ ಬಂದಾಗ ಚಂದ್ರನ ಮೇಲ್ಮೈ ಮೇಲೆ ಭೂಮಿಯ ನೆರಳು ಮೂಡುತ್ತದೆ. ಸೂಯ೯, ಭೂಮಿ, ಮತ್ತು ಚಂದ್ರರ ನಡುವಿನ ಈ ಸಾಲುಗೂಡುವಿಕೆಯನ್ನು ಅರೆ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ.

ತಡರಾತ್ರಿ 1 ಗಂಟೆಗೆ ಕೊನೆಗೊಳ್ಳುವ ಚಂದ್ರ ಗ್ರಹಣ ಯುರೋಪ್, ಏಷ್ಯಾ, ಆಸ್ಟ್ರೇಲಿಯ, ಆಫ್ರಿಕಾ, ಅಟ್ಲಾಂಟಿಕ್, ಹಿಂದೂ ಮಹಾಸಾಗರದಲ್ಲಿ ಗ್ರಹಣ ಗೋಚರಿಸಲಿದೆ.

Related Articles

Back to top button