ಇತರೆ

ಕೋಟೇಶ್ವರ: ಹಳೆ ಅಳಿವೆ – ಕಿನಾರ ಜಂಕ್ಷನ್ ರಸ್ತೆಯಲ್ಲಿ  ಬೈಕ್‌ ಜಾರಿ ಬಿದ್ದು ಸವಾರ ಸಾವು 

Views: 115

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ: ಹಳೆ ಅಳಿವೆ – ಕಿನಾರ ಜಂಕ್ಷನ್ ರಸ್ತೆಯಲ್ಲಿ  ಬೈಕ್‌ ಜಾರಿ ಬಿದ್ದು ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.

ಸವಾರ ಗಣೇಶ (46) ಮೃತಪಟ್ಟವರು.

ಅಪಘಾತದಿಂದಾಗಿ ಗಂಭೀರ ಗಾಯಗೊಂಡು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗಣೇಶ್ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.

ಕೋಟೇಶ್ವರ ಗ್ರಾಮದ ಕುಂಬ್ರಿ ಮೂಲದವರಾದ ಗಣೇಶ್ ವಿವಾಹಿತರಾಗಿದ್ದು, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕೆ. ರಮೇಶ ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!