ಸಾಂಸ್ಕೃತಿಕ

ದಿಢೀರ್ ಹೆಣ್ಣು ವೇಷದಲ್ಲಿ ಕಾಣಿಸಿಕೊಂಡ ಖ್ಯಾತ ನಟನ ಫೋಟೋ ವೈರಲ್

Views: 51

ತಮಿಳು ಚಿತ್ರರಂಗದ ಖ್ಯಾತ ನಟ ಕೆವಿನ್ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವೈರಲ್ ಆದ ಫೋಟೋ ನೋಡಿ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ನಟ ಕೆವಿನ್ ಅವರು ದೊಡ್ಡ ರಿಯಾಲಿಟಿ ಶೋ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡವರು.

ಈ ಮೂಲಕ ತಮಿಳು ಕಿರುತೆರೆಯ ಮೂಲಕ ಕೆವಿನ್‌ ಅವರು ಇನ್ನೂ ಫೇಮಸ್ ಆಗಿದ್ದರು. ಇದೀಗ ನಟ ಕೆವಿನ್‌ ಅವರು ದಿಢೀರ್ ಹೆಣ್ಣು ಮಕ್ಕಳ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಮ್ ಖಾತೆಯಲ್ಲಿ ನಟ ಹೊಸ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಶೇರ್ ಮಾಡಿಕೊಂಡ ಫೋಟೋದಲ್ಲಿ ನಟ ಕೆವಿನ್ ಅವರು ಗ್ರ್ಯಾಂಡ್ ಆಗಿರೋ ಬಟ್ಟೆಯನ್ನು ತೊಟ್ಟುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ನೋಡಿದ ಫ್ಯಾನ್ಸ್ ಫುಲ್ ಶಾಕ್ ಆಗಿದ್ದಾರೆ. ನಟ ಕೆವಿನ್ ಸದ್ಯ ಸ್ಟಾರ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸಿದ್ದಾರೆ. ಸ್ಟಾರ್‌ ಸಿನಿಮಾದ ಮೊದಲ ಸಿಂಗಲ್ ಇಂದು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಕೆವಿನ್‌ ಯುವತಿಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.

Related Articles

Back to top button
error: Content is protected !!