ಸಾಂಸ್ಕೃತಿಕ

ಕನ್ನಡ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ ಪದಪ್ರಧಾನ ಸಮಾರಂಭ

Views: 38

ಉಡುಪಿ :ಕನ್ನಡ ಜಾನಪದ ಪರಿಷತ್ ಬೆಂಗಳೂರು ಕನ್ನಡ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ ಹಾಗೂ ಸೈoಟ್ ಮೇರಿಸ್ ಕೈಗಾರಿಕಾ ತರಬೇತಿ ಸಂಸ್ಥೆ ಚಿಟ್ಪಾಡಿ ಉಡುಪಿ ಇದರ ಆಶ್ರಯದಲ್ಲಿ ಜಿಲ್ಲಾ ಘಟಕದ ಪದ ಪ್ರಧಾನ ಸಮಾರಂಭ ಫೆ. 20ರಂದು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ, ಉದ್ಘಾಟಿಸಿ ಜನಪದ ಕಲೆಯನ್ನು ದಾಖಲೀಕರಣ ಮಾಡಬೇಕಾದ ತುರ್ತು ಅವಶ್ಯಕತೆ ಇದೆ ಮುಂದಿನ ಪೀಳಿಗೆಗೆ ಈ ಕಲೆಯನ್ನು ಉಳಿಸಿ ಬೆಳೆಸಬೇಕಾದ ಅಗತ್ಯತೆ ಇದೆ ಈ ಜನಪದ ಪರಿಷತ್ತಿನಿಂದ ಇದಕ್ಕೆ ಪೂರಕವಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೋಕ ಮಾತ ಚರ್ಚಿನ ಸಹಾಯಕ ಧರ್ಮ ಗುರು ಮೇಲ್ವಿನ್ ರೋಯ್ ಲೋಬೋ ವಹಿಸಿದ್ದರು. ಶ್ರೀ ಕ್ಷೇತ್ರ ಮೂಡು ಸಗ್ರಿಯ ಧರ್ಮದರ್ಶಿ ಭಾಸ್ಕರ ಗುಂಡಿಬೈಲು ಶುಭ ಹಾರೈಸಿದರು. ವೇದಿಕೆಯಲ್ಲಿ ಸೈಂಟ್ ಮೇರಿಸ್ ಐಟಿಐ ಕಾಲೇಜಿನ ಪ್ರಾಂಶುಪಾಲ ವಿಜಯ್ ಡಿಸೋಜ , ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ ಮುಂತಾದವರಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು, ಹಿರಿಯ ಕಲಾವಿದ ಗಂಗಾಧರ ಕಿದಿಯೂರು, ಸುರಭಿ ಮಹಿಳಾ ಚೆಂಡೆ ವಾದನ ಬಳಗದ ಸುನಂದ ಗೋಪಾಲ ಗಾಣಿಗ ಬೈoದೂರು, ರವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ವತಿಯಿಂದ ರಾಜ್ಯ ಅಧ್ಯಕ್ಷ ಡಾ. ಎಸ್ ಬಾಲಾಜಿ ಮತ್ತು ಜಿಲ್ಲಾ ಅಧ್ಯಕ್ಷ ಡಾ.ಗಣಿೀಶ್ ಗಂಗೊಳ್ಳಿ ಯವರನ್ನು ಗೌರವಿಸಲಾಯಿತು.

ಈ ಸಂದಭ೯ದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.

ಜಿಲ್ಲಾ ಕಾಯಾ೯ದ್ಯಕ್ಷ ಉದಯ ಕುಮಾರ್ ಹೈಕಾಡಿ ಸ್ವಾಗತಿಸಿದರು.ಚಂದ್ರ ಹಂಗಾರಕಟ್ಟೆ, ಫಾರುಕ್ ಚಂದ್ರನಗರ ಪರಿಚಯಿಸಿದರು. ಜಿಲ್ಲಾ ಸಂ.ಕಾಯ೯ದಶಿ೯ ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು. ಜಿಲ್ಲಾ ಕಾಯ೯ದಶಿ೯ ಪ್ರಕಾಶ ಸುವಣ೯ ಕಟಪಾಡಿ ವoದಿಸಿದರು.

ಸುರಭಿ ಮಹಿಳಾ ಚೆಂಡೆ ವಾದನ ಬಳಗದಿಂದ ಚೆಂಡೆ ವಾದನ ಪ್ರದಶ೯ನ ಮತ್ತು ಕಲಾವಿದರಿಂದ ಜಾನಪದ ಗಾಯನ ನಡೆಯಿತು.

Related Articles

Back to top button