ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕುಂದಾಪುರದ ಕುವರಿ “ಕಿನ್ನರಿ ಭೂಮಿ ಶೆಟ್ಟಿ”

Views: 239
ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಅವರ ತಂದೆ ಭಾಸ್ಕರ್ ಮತ್ತು ಬೇಬಿ ಶೆಟ್ಟಿ ದಂಪತಿಗೆ ಜನಿಸಿದರು ಇವರು ಕುಂದಾಪುರದಲ್ಲಿ ಹುಟ್ಟಿ ಬೆಳೆದುದರಿಂದ ಅಲ್ಲಿಂದಲೇ ಶಾಲಾ ಶಿಕ್ಷಣವನ್ನು ಪಡೆದರು ಕುಂದಾಪುರದ ಆರ್.ಎನ್.ಶೆಟ್ಟಿ ವಿದ್ಯಾ ಸಂಸ್ಥೆ ಯಿಂದ ಪಿ ಯುಸಿ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಪಡೆದ ನಂತರ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡು ಎ.ಎಂ.ಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ದಾಖಲಾತಿ ಪಡೆದರು.ಬಿಗ್ ಬಾಸ್ ಸ್ಪರ್ಧಿ ಮತ್ತು ನಟಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಭೂಮಿ ಶೆಟ್ಟಿ ಲಾಕ್‌ಡೌನ್ ದಿನಗಳನ್ನು ತಮ್ಮ ಹುಟ್ಟೂರಿನಲ್ಲಿ ಕಳೆದಿದ್ದಾರೆ ಕಲರ್ಸ್ ಸೂಪರ್‌ನಲ್ಲಿ ಮಜಾ ಭಾರತ ಸೀಸನ್ ಮೂರರ ನಿರೂಪಕಿಯಾಗಿ ಕಾಣಿಸಿಕೊಂಡ ಭೂಮಿ ಕಾರ್ಯಕ್ರಮದಿಂದ ಹೊರ ಬಂದು ತೆಲುಗು ಧಾರಾವಾಹಿಗೆ ಸಹಿ ಮಾಡಿದ್ದರು. ಕಾರಣಾಂತರಗಳಿಂದ ಧಾರಾವಾಹಿ ಅರ್ಧದಲ್ಲಿ ನಿಂತಿತ್ತು
ಬಾಲ್ಯದಿಂದಲೂ ಇವರು ಯಕ್ಷಗಾನ ಮತ್ತು ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರಿಂದ ಚಲನಚಿತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಲು ನಿರ್ಧರಿಸಿದರು ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಇವರು ಎಂಜಿನಿಯರಿಂಗ್ ಓದುತ್ತಿರುವಾಗಲೇ ಕಿನ್ನರಿ ಸೀರಿಯಲ್ ಗೆ ಓಡೀಶನ್ ಕೊಟ್ಟು ಕಿನ್ನರಿ ಸೀರಿಯಲ್ ಮೂಲಕ ಫೇಮಸ್ ಆಗುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿ ಬಿಗ್ ಬಾಸ್ ಗೆ ಹೋಗಿದ್ದರು ಹಾಗೆಯೇ ತೆಲುಗು ಸೀರಿಯಲ್ ಗಳಲ್ಲಿ ನಟಿಸಿ ಅಲ್ಲಿಯೂ ಹೆಸರು ಮಾಡಿದ್ದರು ಇತ್ತೀಚೆಗೆ ಬಿಡುಗಡೆಯಾದ ಇಕ್ಕಟ್ಟು ಸಿನಿಮಾವನ್ನು ನೋಡಿ ಎಲ್ಲರೂ ಮೆಚ್ಚಿಕೊಂಡರು
ಕನ್ನಡ ಕಿರುತೆರೆಯ ‘ಕಿನ್ನರಿ’ ಭೂಮಿ ಶೆಟ್ಟಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಅನಿತಾ ಬನಾರ ‘ಕಿನ್ನರಿ’ಯಾಗಿ ಕಿರುತೆರೆಗೆ ಪರಿಚಿತರಾದ ಕುಂದಾಪುರದ ಕುವರಿ ಹೆಸರು ಭೂಮಿ ಶೆಟ್ಟಿ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ಬೆಡಗಿ ಭೂಮಿ ಶೆಟ್ಟಿ
ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿರುವ ಭೂಮಿ ಶೆಟ್ಟಿ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿಯೂ ಬಹಳಷ್ಟು ಖ್ಯಾತಿಯನ್ನು ಗಳಿಸಿದರು. ಇದೀಗ ಕನ್ನಡದ ಕಿನ್ನರಿ ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದಾರೆ. ತಮಿಳು ಸಿನಿಮಾವೊಂದರಲ್ಲಿ ನಟಿಸಲಿರುವ ಭೂಮಿ ಶೆಟ್ಟಿ ಸಖತ್ ಖುಷಿಯಲ್ಲಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಕೂಡಾ ಬಿಡುಗಡೆಯಾಗಿದ್ದು, ಸಿನಿ ಪ್ರಿಯರು ಮೆಚ್ಚಿಕೊಂಡಿದ್ದಾರೆ. ಒಂದು ಭಾಷೆಯಲ್ಲಿ ನಮ್ಮನ್ನು ನಾವು ಕಲಾವಿದರಾಗಿ, ಒಳ್ಳೆಯ ನಟರಾಗಿ ಸಾಬೀತು ಮಾಡಿದಾಗಲೇ ಬೇರೆ ಭಾಷೆಯಲ್ಲಿ ಅವಕಾಶ ಸಿಗುವುದು ಎಂದು ಎಂಬುದು ಭೂಮಿ ಶೆಟ್ಟಿಯ ಅಭಿಪ್ರಾಯ. ಭಾಷೆ ಯಾವುದೇ ಇರಲಿ, ಒಳ್ಳೆಯ ಪಾತ್ರಗಳು ಸಿಕ್ಕರೆ ನಾನು ನಟಿಸಲು ಸಿದ್ಧ ಎಂದು ಭೂಮಿ ಶೆಟ್ಟಿ ಹೇಳುತ್ತಾರೆ.
ಇದೀಗ ತಮಿಳು ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ ನಟಿ ಭೂಮಿ ಶೆಟ್ಟಿ. ಇದರ ಜೊತೆಗೆ ಭಾಷೆಯ ಬಗ್ಗೆ ಒಂದಷ್ಟು ಅಂಜಿಕೆ ಆಕೆಗಿದೆ. ಆದರೆ, ಆದಷ್ಟು ಬೇಗ ಭಾಷೆಯನ್ನು ಸುಲಲಿತವಾಗಿ ಕಲಿಯುತ್ತೇನೆ ಎಂಬ ಆತ್ಮವಿಶ್ವಾಸವನ್ನು ಆಕೆ ಬೆಳೆಸಿಕೊಂಡಿದ್ದಾರೆ.
ಇನ್ನು ‘ವಾಸಂತಿ’ ಎನ್ನುವ ಕಲಾತ್ಮಕ ಸಿನಿಮಾದಲ್ಲಿ ಭೂಮಿ ಬಣ್ಣ ಹಚ್ಚಿದ್ದು, ವೆಬ್ ಸಿರೀಸ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ.