ಹೋಟೆಲ್ ಉದ್ಯಮಿ ಕಾಳಾವರ ಸೀತಾರಾಮಯ್ಯ ನಿಧನ

Views: 69
ಕುಂದಾಪುರ:ಕುಂದಾಪುರ ತಾಲೂಕು ಕಾಳಾವರದ ನಿವಾಸಿಯಾಗಿದ್ದು, ಆಂಧ್ರಪ್ರದೇಶ ರಾಜ್ಯದ, ಶ್ರೀ ಸತ್ಯ ಸಾಯಿ ಜಿಲ್ಲೆಯ ಧರ್ಮಾವರಮ್ ನಲ್ಲಿ ಏಳು ದಶಕಗಳಿಂದ ಹೋಟೆಲ್ ಉದ್ಯಮದ ಮೂಲಕ ಜನಪ್ರಿಯರಾಗಿದ್ದ ಕಾಳಾವರ ಸೀತಾರಾಮಯ್ಯ (93) ಏ.14 ರ ಭಾನುವಾರ ಹೃದಯಾಘಾತದಿಂದ ನಿಧನರಾದರು.
ಎರಡು ತಿಂಗಳ ಹಿಂದೆಯಷ್ಟೇ ಇವರ ಪತ್ನಿ ಸ್ವರ್ಗಸ್ಥರಾಗಿದ್ದು, ಇದರಿಂದ ಸೀತಾರಾಮಯ್ಯ ವಿಚಲಿತರಾಗಿದ್ದರು. ಕಳೆದ ಏಳು ದಶಕಗಳಿಂದಲೂ ಧರ್ಮಾವರಮ್ ನಲ್ಲಿ ಕಾರ್ಯಾಚರಿಸುತ್ತಿದ್ದ ಇವರ ಹೋಟೆಲ್ ಸ್ವಾದಿಷ್ಟ ತಿನಿಸುಗಳು ಸೌಹಾರ್ದ ಸೇವೆಗಳಿಂದ ಆ ಪರಿಸರದಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಅಲ್ಲಿನ ಬ್ರಾಹ್ಮಣ ಪರಿಷತ್ ಮತ್ತಿತರ ಸಂಘ – ಸಂಸ್ಥೆಗಳಲ್ಲಿಯೂ ಸಕ್ರಿಯರಾಗಿದ್ದ ಅವರು, ಕೊಡುಗೈ ದಾನಿಗಳೂ ಆಗಿದ್ದರು.ಹುಟ್ಟೂರು ಕಾಳಾವರದ ಶ್ರೀ ಕಾಳಿಂಗ ಸುಬ್ರಹ್ಮಣ್ಯ ದೇವರಿಗೆ ರಜತ ಮುಖವಾಡ, ಮತ್ತಿತರ ದೇಣಿಗೆಗಳನ್ನು ನೀಡಿದ್ದರು.
ಕಾಳಾವರ ದೇವಳದ ಮಾಜಿ ಮೊಕ್ತೇಸರರಾಗಿದ್ದ ಪ್ರೊ.ಶಂಕರ ರಾವ್ ಕಾಳಾವರ ಇವರ ಕಿರಿಯ ಸಹೋದರ. ಸೀತಾರಾಮಯ್ಯನವರು ಈರ್ವರು ಪುತ್ರರು, ಈರ್ವರು ಪುತ್ರಿಯರು, ಕುಟುಂಬ ವರ್ಗದವರನ್ನು ಅಗಲಿದ್ದಾರೆ.