ಕರಾವಳಿ

ಹೊನ್ನಾವರ: ಖಾಸಗಿ ಬಸ್ ಪಲ್ಟಿ; ಇಬ್ಬರು ಸಾವು, ಹಲವರಿಗೆ ಗಾಯ

Views: 190

ಉತ್ತರ ಕನ್ನಡ, ಜಿಲ್ಲೆಯ ಹೊನ್ನಾವರದ ಸುಳೆಮುರ್ಕಿ ತಿರುವಿನಲ್ಲಿ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನಡೆದಿದೆ. ತುಮಕೂರಿನ ಲೋಕೇಶ್ (26), ಚಿಕ್ಕಬಳ್ಳಾಪುರದ ರುದ್ರೇಶ್ (38) ಅಫಘಾತದಲ್ಲಿ ಸಾವಿಗೀಡಾದವರು

ಇನ್ನುಳಿದಂತೆ ಗೌರಿಬಿದನೂರಿನ ರಜನಿ (30) ಎಂಬುವವರು ಒಂದು ಕೈ ಕಳೆದುಕೊಂಡಿದ್ದು, ಉಳಿದ 49 ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಗೌರಿ ಬಿದನೂರಿನಿಂದ ಧರ್ಮಸ್ಥಳಕ್ಕೆ ಬಸ್ ಮೂಲಕ 53 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ಅತೀ ವೇಗದ ಕಾರಣ ಸುಳೆಮುರ್ಕಿ ತಿರುವಿನಲ್ಲಿ ಬಸ್ ಪಲ್ಟಿಯಾಗಿದೆ. ಇನ್ನು ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಹಾಗೂ ಹೊನ್ನಾವರ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

Back to top button
error: Content is protected !!