ಕರಾವಳಿ
ಹೆಬ್ರಿ: ಹೊಳೆ ದಾಟುವಾಗ ನೀರುಪಾಲಾದ ವ್ಯಕ್ತಿಗಾಗಿ ಹುಡುಕಾಟ

Views: 67
ಹೆಬ್ರಿ: ನಾಡ್ಪಾಲು ಗ್ರಾಮದ ಉಗ್ರಾಣಿಬೆಟ್ಟು ಎಂಬಲ್ಲಿ ಹೊಳೆ ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರುಪಾಲಾಗಿದ್ದ ವ್ಯಕ್ತಿಗಾಗಿ ಜು.19ರಂದು ಶುಕ್ರವಾರ ಅಗ್ನಿಶಾಮಕದವರು ಹುಡುಕಾಟ ನಡೆಸಿದರೂ ಇಲ್ಲಿಯವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಕೂಲಿ ಕಾರ್ಮಿಕರಾಗಿದ್ದ, ತಿಪಟೂರು ಮೂಲದ 55 ವರ್ಷದ ಆನಂದ ಅವರು ಜು.18ರಂದು ನದಿ ದಾಟುವಾಗ ನೀರುಪಾಲಾಗಿದ್ದರು. ಸ್ಥಳಕ್ಕೆ ಸಹಾಯಕ ಕಮಿಷನರ್ ರಶ್ಮಿ, ಹೆಬ್ರಿ ತಹಶೀಲ್ದಾರ್ ಪ್ರಸಾದ್ ಎಸ್. ಎ. ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.