ಇತರೆ
ಹೆತ್ತ ತಾಯಿ ಪ್ರಿಯಕರನೊಂದಿಗೆ ಸೇರಿ ಪುಟ್ಟ ಕಂದಮ್ಮನನ್ನು ಉಸಿರುಗಟ್ಟಿಸಿ ಕೊಲೆ

Views: 89
ಕನ್ನಡ ಕರಾವಳಿ ಸುದ್ದಿ: ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯೇ ನಾಲ್ಕು ವರ್ಷದ ಪುಟ್ಟ ಕಂದಮ್ಮನನ್ನು ಉಸಿರುಗಟ್ಟಿಸಿ ಕೊಂದ ಭೀಕರ ಘಟನೆ ಹಾವೇರಿಯಲ್ಲಿ ನಡೆದಿದೆ.
ಆಗಸ್ಟ್ 5ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರೀಯಾಂಕಾ (4) ಹತ್ಯೆಯಾದ ಮಗು. ಆರೋಪಿ ಗಂಗಮ್ಮ ಹಾಗೂ ಪ್ರಿಯಕರ ಅಣ್ಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಗಂಗಮ್ಮಗೆ ಈಗಾಗಲೇ ಮದುವೆಯಾಗಿದ್ದು ಒಂದು ಮಗು ಕೂಡ ಇತ್ತು. ಆದರೂ ಪತಿ ಬಿಟ್ಟು ಪ್ರಿಯಕರ ಅಣ್ಣಪ್ಪ ಮಡಿವಾಳ ಜತೆಗೆ ಗಂಗಮ್ಮ ವಾಸವಾಗಿದ್ದಳು. ಆಗಸ್ಟ್ 5ರಂದು ಪ್ರಿಯಕರ ಅಣ್ಣಪ್ಪನ ಜೊತೆ ಸೇರಿ ಮಗಳು ಪ್ರಿಯಾಂಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ತುಂಗಾ ಮೇಲ್ದಂಡೆ ಕಾಲುವೆಯ ಬಳಿ ಸುಟ್ಟುಹಾಕಲು ಪ್ರಯತ್ನಿಸಿದ್ದಾರೆ. ಬಾಲಕಿಯ ದೇಹ ಅರ್ಧ ಸುಟ್ಟು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.