ಹಿರಿಯ ನಟ, ರಾಜಕಾರಣಿ ಕ್ಯಾಪ್ಟನ್ ವಿಜಯ್ ಕಾಂತ್ ನಿಧನ

Views: 1
ಹಿರಿಯ ನಟಿ ಹಾಗೂ ದೇಸಿಯಾ ಮುರ್ಪೊಕ್ಕು ದ್ರಾವಿಡಾ ಕಝಾಗಮ್ (DMDK) ಅಧ್ಯಕ್ಷ ಕ್ಯಾಪ್ಟನ್ ವಿಜಯ್ ಕಾಂತ್ (71) ಇಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಸಿನಿಮಾ ಆ್ಯಕ್ಟರ್ ಹಾಗೂ ರಾಜಕಾರಣಿ ಆಗಿದ್ದ ವಿಜಯ್ ಕಾಂತ್ ಅವರಿಗೆ ಇತ್ತೀಚೆಗೆ ಕೋವಿಡ್ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಆಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದರ ಜೊತೆಗೆ ಇವರು ದೀರ್ಘಕಾಲದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ಆಸ್ಪತ್ರೆಯಲ್ಲಿ ವಿಜಯ್ ಕಾಂತ್ ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು.
ವಿಜಯ್ ಕಾಂತ್ ಅವರಿಗೆ ನ್ಯುಮೋನಿಯಾ ಇದ್ದಿದ್ದರಿಂದ ವೆಂಟಿಲೇಟರ್ ಸಪೋರ್ಟ್ ನೀಡಲಾಗಿತ್ತು. ಅವರನ್ನು ಉಳಿಸಿಕೊಳ್ಳಲು ಆಸ್ಪತ್ರೆಯ ವೈದ್ಯಕೀಯ ತಂಡ ಎಲ್ಲ ರೀತಿಯಿಂದಲೂ ಪ್ರಯತ್ನಿಸಲಾಯಿತು. ಕೊನೆಗೂ ಉಳಿಸಿಕೊಳ್ಳಲು ಆಗಲಿಲ್ಲ. ನಿನ್ನೆ ಅವರಿಗೆ ಉಸಿರಾಟದ ಸಮಸ್ಯೆ ತೀವ್ರವಾಗಿತ್ತು. ಹೀಗಾಗಿ ಡಯೋಗ್ನಸ್ಟಿಕ್ ಟೆಸ್ಟ್ ಮಾಡಿದಾಗ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ ಎಂದು Miot ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ಸಿನಿಮಾಗಳಲ್ಲಿ ಹೆಚ್ಚಾಗಿ ಮಿಲಿಟರಿ ಪಾತ್ರದಲ್ಲಿ ಅಭಿನಯಿಸಿದ್ದರಿಂದ ಜನರು ಪ್ರೀತಿಯಿಂದ ವಿಜಯ್ ಕಾಂತ್ ಅವರಿಗೆ ಕ್ಯಾಪ್ಟನ್ ಎನ್ನುತ್ತಿದ್ದರು. ಇವರು ಸುಮಾರು 150ಕ್ಕೂ ಹೆಚ್ಚು ತಮಿಳು ಸಿನಿಮಾಗಳಲ್ಲಿ ನಟನೆ ಮಾಡಿ ಅಪಾರ ಅಭಿಮಾನವನ್ನು ಗಳಿಸಿದ್ದರು. ಅಲ್ಲದೇ ಸಿನಿಮಾಗಳಲ್ಲಿ ತಮ್ಮದೇ ಸಾಧನೆ ಕೂಡ ಮಾಡಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಸಿನಿಮಾದಲ್ಲಿ ಯಶಸ್ಸು ಇದ್ದರು ತಮಿಳುನಾಡಿನ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು.
2005ರಲ್ಲಿ ದೇಸಿಯಾ ಮುರ್ಪೊಕ್ಕು ದ್ರಾವಿಡಾ ಕಝಾಗಮ್ (DMDK) ಪಕ್ಷವನ್ನು ಸ್ಥಾಪನೆ ಮಾಡಿದರು. ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ತಮಿಳುನಾಡಿನಲ್ಲಿ ಪರ್ಯಾಯ ರಾಜಕೀಯ ವೇದಿಕೆಯನ್ನು ಒದಗಿಸುವ ಗುರಿಯೊಂದಿಗೆ ಪಕ್ಷವನ್ನು ವಿಜಯ್ ಕಾಂತ್ ಅವರು ಸ್ಥಾಪನೆ ಮಾಡಿದ್ದರು.






