ರಾಜಕೀಯ

ಹಿಜಾಬ್ ಸಂಘರ್ಷ: ಸಿಎಂ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಅಲರ್ಟ್, ಸೂಕ್ಷ್ಮ ವಿಷಯದಲ್ಲಿ ಎಚ್ಚರಿಕೆ ವಹಿಸಿ..!

Views: 0

ರಾಜ್ಯದಲ್ಲಿ ಮತ್ತೆ ಹಿಜಾಬ್ ಹಂಗಾಮ ಶುರುವಾಗಿದೆ. ಕ್ಲಾಸ್‌ ರೂಂಗಳಲ್ಲಿ ಹಿಜಾಬ್ ನಿಷೇಧ ಆದೇಶ ವಾಪಸ್‌ಗೆ ಕೈ ಹಾಕಿ ಸಿಎಂ ಮತ್ತೆ ಹಿಜಾಬ್ ಕಿಚ್ಚಿಗೆ ತುಪ್ಪು ಸುರಿದಿದ್ದಾರೆ. ಹಿಜಾಬ್‌ ನಿಷೇಧ ವಾಪಸ್ ಇಲ್ಲ ಅಂತ ಸಿಎಂ ಸಮಜಾಯಿಷಿ ಕೊಟ್ರೂ ಕೇಸರಿ ಪಡೆ ಕೆಂಡಕಾರುತ್ತಲೇ ಇದೆ. ಮಕ್ಕಳ ಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡ್ತಿದೆ ಅಂತ ಕಮಲ ಪಡೆ ಮುಗಿಬಿದ್ದಿದೆ.

2022ರಲ್ಲಿ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳ ಶಾಂತಿಗೆ ಕಿಚ್ಚು ಹಚ್ಚಿದ್ದ ಹಿಜಾಬ್ ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿದೆ. ಉಡುಪಿಯಲ್ಲಿ ಹುಟ್ಟಿ ಕರುನಾಡಿನೆಲ್ಲೆಡೆ ಹಂಗಾಮಾ ಸೃಷ್ಟಿಸಿದ್ದ ಹಿಜಾಬ್‌ ಬೆಂಕಿಗೆ ಸಿದ್ದರಾಮಯ್ಯ ತುಪ್ಪವಲ್ಲ. ಪೆಟ್ರೋಲ್‌ನೆ ಸುರಿದಿದ್ದಾರೆ. ಇದು ಕೇಸರಿ ನಾಯಕರ ಕಿಚ್ಚು ಹೆಚ್ಚಾಗುವಂತೆ ಮಾಡಿದೆ. ಸಿಎಂ ವಿರುದ್ಧ ಬಿಜೆಪಿ ಪಾಳಯ ಹಿಜಾಬ್ ಬಾಣವನ್ನ ತೂರಿ ಬಿಟ್ಟಿದೆ.

ಹಿಜಾಬ್ ನಿಷೇಧ ವಾಪಸ್ ನಿರ್ಧಾರಕ್ಕೆ ‘ಕೇಸರಿ’ ಕೆಂಡ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ‘ಕಮಲ’ ಪಡೆ

ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಿಜಾಬ್‌ ನಿಷೇಧ ವಾಪಸ್‌ ಬಗ್ಗೆ ಮಾತನಾಡಿದ್ದರು. ಹಿಜಾಬ್ ನಿಷೇಧ ವಾಪಸ್ ಪಡೆಯಲು ಸರ್ಕಾರ ನಿರ್ಧಾರ ಮಾಡಿದೆ ಅಂತ ಹೇಳಿದ್ರು. ಯಾವಾಗ ಕೇಸರಿ ಪಡೆ ಸಿದ್ದು ವಿರುದ್ಧ ಮುಗಿ ಬೀಳ್ತೋ ಸಿಎಂ ಉಲ್ಟಾ ಹೊಡೆದಿದ್ರು. ಇದು ನಿರ್ಧಾರವಲ್ಲ. ಕೇವಲ ಚಿಂತನೆ ಅಂತ ಸಮಾಜಾಯಿಷಿ ಕೊಟ್ಟಿದ್ರು. ಇಷ್ಟಾದ್ರೂ ಕೇಸರಿ ಪಾಳಯ ಮಾತ್ರ ಸಿದ್ದು ವಿರುದ್ಧ ಕೆಂಡವನ್ನು ಉಗುಳುತ್ತಿದೆ. ಸಿದ್ದರಾಮಯ್ಯ ಮಕ್ಕಳ ಭವಿಷ್ಯ ಜೊತೆ ಚೆಲ್ಲಾಟವಾಡ್ತಿದ್ದಾರೆ ಅಂತ ಬಿ.ವೈ. ವಿಜಯೇಂದ್ರ ಗುಡುಗಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಜಾತಿ ವಿಷಬೀಜ ಬಿತ್ತುವ ಕೆಲಸವನ್ನು ನಿಲ್ಲಿಸಬೇಕು ಅಂತ ಬಿಎಸ್‌ವೈ ಕಿವಿಮಾತು ಹೇಳಿದ್ದಾರೆ.

ಸಿಎಂ ವಿರುದ್ಧ ಮಾತಿನ ವಾಗ್ಬಾಣ ಮುಂದುವರಿಸಿರೋ ಕೇಸರಿ ನಾಯಕರು. ಹಿಜಾಬ್ ವಿಷಯದಲ್ಲಿ ಸಿದ್ದರಾಮಯ್ಯ ಮೂರ್ಖರಂತೆ ಮಾತಾಡ್ತಿದ್ದಾರೆ ಅಂತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಕ್‌ಪ್ರಹಾರ ನಡೆಸಿದ್ದಾರೆ. ಇತ್ತ ಶಾಲಾ-ಕಾಲೇಜುಗಳ ಯೂನಿಫಾರ್ಮ್‌ಗೆ ಬೆಲೆ ಇಲ್ವಾ ಅಂತ ಸಿದ್ದರಾಮಯ್ಯಗೆ ಕೇಂದ್ರ ಸಚಿವೆ ಶೋಬಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

ಸಿಎಂ ‘ಹಿಜಾಬ್‌’ ಮಾತನ್ನು ಸಮರ್ಥಿಸಿಕೊಂಡ ಪರಮೇಶ್ವರ್!

ತರಗತಿಗಳಲ್ಲಿ ಹಿಜಾಬ್ ನಿಷೇಧ ವಾಪಸ್ ಪಡಿತೀವಿ ಎಂಬ ಸಿಎಂ ಸಿದ್ದರಾಮಯ್ಯ ಮಾತನ್ನು ಕೈ ನಾಯಕರು ಸಮರ್ಥಿಸಿಕೊಳ್ತಿದ್ದಾರೆ. ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ಹಕ್ಕು ಎಂಬ ಅರ್ಥದಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ ಅಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಬ್ಯಾಟ್ ಬೀಸಿದ್ದಾರೆ.

ಪ್ರತಿಯೊಬ್ಬ ಪ್ರಜೆಗೂ ಕೂಡ ತಾನು ಮಾಡುವಂತ ಊಟವೇನು, ವಸ್ತ್ರವೇನೆ ಎಂಬುವುದು ಸಂವಿಧಾನದಲ್ಲಿ ಇದೆ. ಹೀಗಾಗಿ ಆ ಅರ್ಥದಲ್ಲಿ ಸಿದ್ದರಾಮಯನವರು ಹೇಳಿದ್ದಾರೆ. ಆದರೆ ಪ್ರತಿ ಪಕ್ಷದವರು ಬೇರೆ ರೀತಿಯಲ್ಲಿ ಹಿಜಾಬ್​​ ವಿಚಾರವನ್ನು ತೆಗೆದುಕೊಂಡು ಹೋಗುತ್ತೀದ್ದಾರೆ.

ಹಿಜಾಬ್‌ ನಿಷೇಧ ವಾಪಸ್‌ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಎಂಟ್ರಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಅಲರ್ಟ್ ಅಗಿದೆ. ಹಿಜಾಬ್ ಸೇರಿದಂತೆ ಸೂಕ್ಷ್ಮ ವಿಷಯದಲ್ಲಿ ಎಚ್ಚರಿಕೆ ವಹಿಸಿ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇರಲಿ, ಪಕ್ಷಕ್ಕೆ ಡ್ಯಾಮೇಜ್ ಬೇಡ ನಿಮ್ಮ ಮಾತಿನಿಂದ ಬೇರೆ ರಾಜ್ಯದಲ್ಲಿ ಡ್ಯಾಮೇಜ್ ಆಗಬಾರದು ಲೋಕಸಭೆ ಎಲೆಕ್ಷನ್​​ ಇದೆ, ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು ಸೂಕ್ಷ್ಮ ವಿಚಾರ ಅಸ್ತ್ರವಾಗಿಸಿ ವಿಪಕ್ಷಗಳಿಂದ ರಾಜಕೀಯ ಲಾಭ ಆತುರದ ನಿರ್ಧಾರಗಳನ್ನು ಕೈಗೊಳ್ಳದಂತೆ ಸಿಎಂಗೆ ಎಚ್ಚರಿಕೆ ಸಂದೇಶ ಒಟ್ಟಾರೆ ಶಾಲಾ ಮಕ್ಕಳ ಮಧ್ಯೆ ವಿಷಬೀಜ ಬಿತ್ತಿದ್ದ ಹಿಜಾಬ್ ಹಂಗಾಮಾ ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನೇ ‘ಲೋಕ’ ಕದನದ ಅಸ್ತ್ರವಾಗಿಸಿಕೊಂಡು ಕಮಲ ಪಡೆ ಸಿಎಂ ವಿರುದ್ಧ ಮುಗಿಬಿದ್ದಿದೆ. ಇದೀಗ ಸಿಎಂ ಆಡಿದ ಮಾತು ಕಾಂಗ್ರೆಸ್ ಪಾಳಯಕ್ಕೆ ದುಬಾರಿಯಾಗುತ್ತಾ? ಕಾದು ನೋಡಬೇಕಿದೆ.

Related Articles

Back to top button
error: Content is protected !!