ಹವಾಮಾನ ವೈಪರೀತ್ಯದಿಂದಾಗಿ ಕರಾವಳಿಯಲ್ಲಿ ಹೆಚ್ಚುತ್ತಿದೆ ಶೀತ, ಜ್ವರ, ಗಂಟಲು ನೋವು

Views: 7
ಉಡುಪಿ: ಕರಾವಳಿಯಲ್ಲಿ ಇತ್ತೀಚಿಗೆ ಹಗಲಿನಲ್ಲಿ ವಿಪರೀತ ಸೆಕೆ ರಾತ್ರಿ ವೇಳೆ ಚಳಿ ವಾತಾವರಣದ ಹವಾಮಾನದ ವೈಪರೀತ್ಯದಿಂದಾಗಿ ನಗರ ಸೇರಿದಂತೆ ಗ್ರಾಮೀಣದ ಬಹುತೇಕ ಜನರಲ್ಲಿ ಶೀತ, ನೆಗಡಿ, ಜ್ವರ, ಗಂಟಲು ನೋವು ಕಾಣಿಸಿಕೊಂಡಿದೆ.
ಅತಿ ವೇಗವಾಗಿ ಹರಡುವ ಈ ಸೋಂಕಿನಿಂದ ಆಸ್ಪತ್ರೆ, ಕ್ಲಿನಿಕ್ ಗಳಲ್ಲಿ ರೋಗಿಗಳು ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.
ಒಬ್ಬರಿಂದ ಒಬ್ಬರಿಗೆ ಹರಡುವ ಸೊಂಕಾಗಿದ್ದು ಇದು ಎಲ್ಲರಿಗೂ ಹರಡುವ ಭೀತಿ ತಂದೊಡ್ಡಿದೆ.
ನವೆಂಬರ್, ಡಿಸೆಂಬರ್, ಜನವರಿ ತಿಂಗಳಲ್ಲಿ ಚಳಿಯ ಪ್ರಮಾಣ ಹೆಚ್ಚಿರುವುದರಿಂದ ಶೀತ, ಜ್ವರ ಸಮಸ್ಯೆಗಳು ಸಾಮಾನ್ಯವಾಗಿರುತ್ತದೆ ಇದಕ್ಕೆ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ,
ಅನಾರೋಗ್ಯ ಉಂಟಾದಾಗ ತಜ್ಞ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಸಾಮಾನ್ಯವಾಗಿ ಶೀತ ಜ್ವರ ಬಂದಾಗ ರೋಗಿಗಳು ಐದಾರು ದಿನ ಔಷದ ಸೇವಿಸುವ ಅನಿವಾರ್ಯತೆ ಕಂಡುಬರುತ್ತದೆ ಇದಕ್ಕೆ ಸೂಕ್ತ ಔಷಧಿ ವಿಶ್ರಾಂತಿಯೇ ಇದಕ್ಕೆ ಪರಿಹಾರ ಹೆಚ್ಚಿನ ದಿನ ಜ್ವರ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಜನಸಂದಣಿ ಇರುವ ಸ್ಥಳಗಳಲ್ಲಿ ಹೆಚ್ಚಾಗಿ ಮಾಸ್ಕ್ ಧರಿಸುವ ಮೂಲಕ ಈ ಸೊಂಕನ್ನು ತಡೆಗಟ್ಟಬಹುದು ಎಂದು ಉಡುಪಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.