ಹನಿಮೂನ್‌ಗೆ ತೆರಳಿದ ದಂಪತಿ ನಾಪತ್ತೆ ಕೇಸ್: ರಕ್ತದ ಕಲೆಗಳನ್ನು ಒಳಗೊಂಡ ರೈನ್ ಕೋಟ್ ಪತ್ತೆ!!

Views: 148
ಕನ್ನಡ ಕರಾವಳಿ ಸುದ್ದಿ: ಕೆಲವು ದಿನಗಳಿಂದ ದೇಶಾದ್ಯಂತ ಸುದ್ದಿಯಾಗುತ್ತಿರುವ ಇಂದೋರ್ ಮೂಲದ ದಂಪತಿ ನಾಪತ್ತೆ ಪ್ರಕರಣದಲ್ಲಿ ಮಹತ್ವದ ಸಾಕ್ಷಿಯೊಂದು ಸಿಕ್ಕಿದೆ.
ನಾಪತ್ತೆಯಾಗಿದ್ದ ರಾಜಾ ರಘುವಂಶಿ ಮೃತದೇಹ ಎರಡು ದಿನಗಳ ಹಿಂದೆಯಷ್ಟೇ ಸಿಕ್ಕಿತ್ತು. ಇದೀಗ ಆತನ ಪತ್ನಿಗಾಗಿ ಹುಡುಗಾಟ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಿಯೊಂದು ಸಿಕ್ಕಿದೆ.
ನಾಪತ್ತೆಯಾಗಿದ್ದ ರಾಜಾ ರಘುವಂಶಿ ಮೃತದೇಹ ಸಿಕ್ಕಿರುವ ಬೆನ್ನಲ್ಲೇ ಸೋಹ್ರಾದ ಮಾವ್ಕ್ಮಾ ರಸ್ತೆಯ ಬಳಿ ರಕ್ತದ ಕಲೆಗಳನ್ನು ಒಳಗೊಂಡಂತಹ ರೈನ್ ಕೋಟ್ ಪತ್ತೆಯಾಗಿದೆ. ಪತ್ತೆಯಾಗಿರುವ ರೈನ್ ಕೋಟ್‌ನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪೋಲಿಸರು ನಾವು “ಒದ್ದೆಯಾದ ರೈನ್ಕೋಟ್ ಪತ್ತೆಹಚ್ಚಿದ್ದೇವೆ. ಅದರ ಮೇಲೆ ಕೆಲವು ಕಲೆಗಳು ಕಂಡುಬಂದಿವೆ, ಆದರೆ ಅದು ರಕ್ತದ ಕಲೆ ಎಂಬುದು ಸದ್ಯದ ಮಟ್ಟಿಗೆ ಖಚಿತವಿಲ್ಲ. ಹಾಗಾಗಿ ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರ ಸ್ಪಷ್ಟವಾಗುತ್ತದೆ,” ಎಂದು ಈಸ್ಟ್ ಖಾಸಿ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಯೆಮ್ ತಿಳಿಸಿದ್ದಾರೆ. ಪತ್ತೆಯಾದ ರೈನ್‌ಕೋಟ್ XXXL ಸೈಜ್‌ನಲ್ಲಿದ್ದು, ಅದು ಕಾಣೆಯಾಗಿರುವ ಸೋನಂ ಅವರದ್ದಾ ಎಂದು ಧೃಡಪಡಿಸಿಕೊಳ್ಳಲು ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.