ಹತ್ಯೆಯಾದ ಪ್ರಿಯಕರನ ಶವದ ಜತೆಗೆ ಪ್ರೇಯಸಿ ಮದುವೆ!
Views: 189
ಕನ್ನಡ ಕರಾವಳಿ ಸುದ್ದಿ: ಪ್ರಿಯಕರನನ್ನು ಕುಟುಂಬದವರೇ ಹತ್ಯೆ ಮಾಡಿದ್ದರಿಂದ, ಪ್ರಿಯಕರನ ಶವವನ್ನೇ ಯುವತಿಯೊಬ್ಬಳು ವರಿಸಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ನಲ್ಲಿ ನಡೆದಿದೆ.
ಸಕ್ಷಮ್ ತಾಂಟೆ (20) ಮತ್ತು ಅಂಚಲ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವಕನ ಜಾತಿ ಬೇರೆ ಎಂಬ ಕಾರಣಕ್ಕೆ ಯುವತಿಯ ಪೋಷಕರಿಂದ ವಿರೋಧವಿತ್ತು. ಬೆದರಿಸಿದರೂ ಬೇರೆಯಾಗದ ಇವರಿಬ್ಬರನ್ನು ಕಂಡು ಕ್ರೋಧ ಗೊಂಡ ಅಂಚಲ್ಳ ತಂದೆ ಮತ್ತು ಸಹೋದರರು ಸಕ್ಷಮ್ ಗೆ ಗುಂಡಿಕ್ಕಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಏತನ್ಮಧ್ಯೆ, ಸಕ್ಷಮ್ನ ಅಂತ್ಯಕ್ರಿಯೆ ಯಲ್ಲಿ ಭಾಗಿಯಾಗಿದ್ದ ಅಂಚಲ್, ಸಕ್ಷಮ್ನ ದೇಹಕ್ಕೆ ಆರಿಸಿಣ ಹಚ್ಚಿದ್ದಾಳೆ.ಬಳಿಕ ಸ್ವತಃ ಸಿಂದೂರವನ್ನು ಹಚ್ಚಿ ಕೊಂಡು, ಸಕ್ಷಮ್ನನ್ನು ಮದುವೆಯಾಗಿ ದ್ದೇನೆಂದು, ಇನ್ನು ಸಕ್ಷಮ್ ಮನೆಯಲ್ಲೇ ಸೊಸೆಯಾಗಿ ಜೀವನಪರ್ಯಂತ ಬಾಳುವುದಾಗಿ ಘೋಷಿಸಿದ್ದಾಳೆ. ಅಲ್ಲದೆ, ‘ಸಕ್ಷಮ್ನ ಸಾವಿನಲ್ಲೂ ನಮ್ಮ ಪ್ರೀತಿ ಗೆದ್ದಿದೆ, ಆದರೆ ನನ್ನ ತಂದೆ ಹಾಗೂ ಸೋದರರು ಸೋತಿದ್ದಾರೆ’ ಎಂದಿದ್ದಾಳೆ. ಪ್ರಕರಣದಲ್ಲಿ6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.






