ಇತರೆ

ಸ್ಪಾ ಹೆಸರಲ್ಲಿ  ಹೈಟೆಕ್ ವೇಶ್ಯಾವಾಟಿಕೆ ದಂಧೆ, 34 ಮಂದಿ ಸೆರೆ

Views: 114

ಬೆಂಗಳೂರು, ಹೊರ ರಾಜ್ಯ ಹಾಗೂ ವಿದೇಶದಿಂದ ಯುವತಿಯರನ್ನು ಕರೆಸಿ ಬಾಡಿ ಟು ಬಾಡಿ ಮಸಾಜ್ ಸೇರಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 34 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹದೇವಪುರದ ಓಲ್ಡ್ ಮದ್ರಾಸ್ ರಸ್ತೆಯ ನಿರ್ವಾಣ ಸ್ಪಾ ಮೇಲೆ ಖಚಿತವಾದ ಮಾಹಿತಿಯನ್ನು ದಾಳಿ ನಡೆಸಿದ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದನ್ನು ಪತ್ತೆಹಚ್ಚಿದ್ದಾರೆ.ದಾಳಿ ವೇಳೆ 44 ಮಂದಿ ಯುವತಿಯರನ್ನು ರಕ್ಷಣೆ ಮಾಡಲಾಗಿದ್ದು,ವಿಚಾರಣೆಯಲ್ಲಿ ಅವರು ಹೊರ ರಾಜ್ಯ, ವಿದೇಶದವರು ಎನ್ನುವುದು ಗೊತ್ತಾಗಿದೆ.

ಬಹುಮಹಡಿ ಕಟ್ಟಡದ 1ಮತ್ತು 6ನೇ ಪ್ಲೋರ್?ನಲ್ಲಿ ಅನಿಲ್ ಎಂಬಾತ ನಿರ್ವಾಣ ಸ್ಪಾ ನಡೆಸುತ್ತಿದ್ದು ಸಿಸಿಬಿ ಮಹಿಳಾ ಸಂರಕ್ಷಣಾ ದಳ ನಿರ್ವಾಣ ಸ್ಪಾ ಮೇಲೆ ದಾಳಿ ಮಾಡಿ ದಂಧೆ ಬಯಲಿಗೆಳೆದಿದೆ.

ಸ್ಪಾ ಹೆಸರಲ್ಲಿ ಕಾನೂನು ಬಾಹಿರವಾಗಿ ಬಾಡಿ ಟು ಬಾಡಿ ಮಸಾಜ್ ಸೇರಿದಂತೆ ವಿವಿಧ ಮಾದರಿಯ ಅನೈತಿಕ ಚಟುವಟಿಕೆ ನಡೆಯುತಿರುವುದು ಪತ್ತೆಯಾಗಿದೆ. ಹೊರ ರಾಜ್ಯ ಮತ್ತು ಹೊರ ದೇಶದ ಯುವತಿಯರು ಮತ್ತು ಮಹಿಳೆಯರನ್ನು ಕರೆಸಿ ಈ ದಂಧೆ ನಡೆಸಲಾಗುತ್ತಿತ್ತು. ಒಟ್ಟು 34 ರೂಮ್ ಗಳನ್ನು ಒಳಗೊಂಡ ಬಹು ಅಂತಸ್ಥಿನ ಕಟ್ಟಡದಲ್ಲಿ ಸ್ಪಾ ನಡೆಯುತ್ತಿತ್ತು.ಇನ್ನು ಸ್ಪಾ ನಡೆಸುತ್ತಿದ್ದ ಆರೋಪಿ ಅನಿಲ್?ನನ್ನು ಬಂಧಿಸಲಾಗಿದ್ದು ಈತ ಹೊರ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ಸ್ಪಾ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಈ ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿಬಿ ಅಧಿಕಾರಿಗಳು ಅನೀಲ್?ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ

Related Articles

Back to top button
error: Content is protected !!